ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಲ್ಲಿ ಎಗ್ಗಿಲ್ಲದೆ ಸಾಗಿರುವ ಮರಳು ದಂಧೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 26: ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಅಕ್ರಮ ಮರಳು ಮರಳು ದಂಧೆ ಕಬಂಧಬಾಹು ಚಾಚಿದ್ದು, ಎಲ್ಲೆಡೆ ಎಗ್ಗಿಲ್ಲದೆ ನಡೆಯುತ್ತಿದೆ.

ಪೊಲೀಸರು ಯಾವುದೇ ರೀತಿಯ ಕಾರ್ಯಾಚರಣೆ ನಡೆಸಿದರೂ ತಡೆಗಟ್ಟಲು ಮಾತ್ರ ಸಾಧ್ಯವಾಗುತ್ತಿಲ್ಲ. ಹುಣಸೂರು ವ್ಯಾಪ್ತಿಯ ಲಕ್ಷ್ಮಣತೀರ್ಥ ನದಿಯಿಂದ ಮರಳು ತೆಗೆಯುವ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ಪೊಲೀಸರು ದಾಳಿ ನಡೆಸಿದ ಕೆಲ ದಿನಗಳ ಕಾಲ ಸ್ಥಗಿತಗೊಳ್ಳುತ್ತದೆಯಾದರೂ ಮತ್ತೆ ಜಿಗಿತುಕೊಳ್ಳುತ್ತಿದೆ.

Sand Mafia in Mysore

ಲಕ್ಷ್ಮಣತೀರ್ಥ ನದಿ ದಡದುದ್ದಕ್ಕೂ ದಂಧೆ ನಡೆಯುತ್ತಿದ್ದರೂ ಯಾರೂ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಈ ನಡುವೆ ಪೊಲೀಸರಿಗೆ ಮಾಹಿತಿ ತಿಳಿದು ಕಾರ್ಯಾಚರಣೆಗೆ ಬಂದಾಗ ತಪ್ಪಿಸಿಕೊಳ್ಳುವ ಅಕ್ರಮ ದಂಧೆಕೋರರು ಮತ್ತೆ ತಮ್ಮ ದಂಧೆಯನ್ನು ಮುಂದುವರೆಸುತ್ತಾರೆ.

ಈ ನಡುವೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‍ಐ ಪುಟ್ಟಸ್ವಾಮಿ ಮತ್ತು ಸಿಬ್ಬಂದಿ ಹನಗೋಡು ಹೋಬಳಿ ಹೆಮ್ಮಿಗೆ ಗ್ರಾಮದ ಲಕ್ಷ್ಮಣತೀರ್ಥ ನದಿದಂಡೆಯಲ್ಲಿ ಅಕ್ರಮವಾಗಿ ಮರಳನ್ನು ಸಂಗ್ರಹಿಸುತ್ತಿದ್ದ ವೇಳೆ ದಾಳಿ ನಡೆಸಿ ಟಿಪ್ಪರನ್ನು ವಶಪಡಿಸಿಕೊಂಡು ಚಾಲಕ ಪಂಚವಳ್ಳಿಯ ಅಲೀಂ ಪಾಷಾರನ್ನು ಬಂಧಿಸಿ ಟಿಪ್ಪರ್ ಮಾಲೀಕ ನಗರದ ಜನಾರ್ಧನರಾವ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಕಟ್ಟೆಮಳಲವಾಡಿಯ ಲಕ್ಷ್ಮಣತೀರ್ಥ ಅಣೆಕಟ್ಟೆ ಬಳಿಯಿಂದ ಅಕ್ರಮವಾಗಿ ಮರಳು ಸಂಗ್ರಹಿಸಿ ಸಾಗಿಸುತ್ತಿದ್ದ ನೋಂದಣಿಯಾಗ ಹೊಸ ಟ್ರ್ಯಾಕ್ಟರ್ ನ್ನು ವಶಕ್ಕೆ ಪಡೆದ ಪೊಲೀಸರ ತಂಡ ಆರೋಪಿ ರುದ್ರೇಗೌಡನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

English summary
The Mysuru district administration has failed to check illegal sand mining on the banks of rivers Cauvery, Lakshman Theertha. Unscientific methods followed in extracting sand has changed the course of river flow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X