ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೆ.27ರಂದು ರಂಗಸಮುದ್ರದಲ್ಲಿ ಸುಗ್ಗಿ-ಹುಗ್ಗಿ, ಗ್ರಾಮೀಣ ಸಂಭ್ರಮ

By Prasad
|
Google Oneindia Kannada News

ಮೈಸೂರು, ಫೆ. 26 : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಫೆಬ್ರವರಿ 27ರಂದು ಮಧ್ಯಾಹ್ನ 2 ಗಂಟೆಗೆ ಟಿ ನರಸಿಪುರ ತಾಲ್ಲೂಕಿನ ರಂಗಸಮುದ್ರದಲ್ಲಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಆವರಣದಲ್ಲಿ ಸುಗ್ಗಿ-ಹುಗ್ಗಿ ಗ್ರಾಮೀಣ ಸಂಸ್ಕೃತಿ ಸಂಭ್ರಮ-2017ನ್ನು ನಡೆಸಲಾಗುತ್ತಿದೆ.

ಕಬ್ಬಡಿ, ಲಗೋರಿ, ಕುಂಟೆಬಿಲ್ಲೆ, ಅಳಿಗುಳಿಮನೆ, ಗೋಲಿ, ಬುಗುರಿ, ಚೌಕಬಾರ ಹಾಗೂ ರಂಗೋಲಿ ಸ್ಫರ್ಧೆಗಳು ಕಾರ್ಯಕ್ರಮದಲ್ಲಿ ನಡೆಯಲಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಪಸ್ಥಿತಿಯಲ್ಲಿ ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವರಿ ಸಚಿವ ಡಾ|| ಎಚ್.ಸಿ.ಮಹದೇವಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ ನೈಸರ್ಗಿಕ ಕೃಷಿ ರಾಜ್ಯಾಧ್ಯಕ್ಷ ಕೃಷ್ಣಪ್ಪ ಬನ್ನೂರು ಅವರು ಮುಖ್ಯಭಾಷಣಕಾರರಾಗಿ ಭಾಗವಹಿಸಲಿದ್ದಾರೆ.

Rural Cultural Festival in Rangasamudra in Mysuru

ಇತರ ಕಾರ್ಯಕ್ರಮಗಳ ವಿವರ

* ಮಂಡ್ಯ ಜಿಲ್ಲೆಯ ಮಳವಳ್ಳಿ ಮಹದೇವಸ್ವಾಮಿ ಮತ್ತು ತಂಡದಿಂದ ಮಾದೇಶ್ವರ ಕಾವ್ಯ
* ನಂಜನಗೂಡು ಮತ್ತು ತಂಡದಿಂದ ಸುಗಮ ಸಂಗೀತ
* ಚಾಮರಾಜನಗರದ ಮಂಜುನಾಥ, ಗುರುಲಿಂಗಯ್ಯ ಮತ್ತು ತಂಡದಿಂದ ಜನಪದಗೀತೆ
* ಮೈಸೂರಿನ ಕೃಪಾ ಪಡ್ಕೆ ಮತ್ತು ತಂಡದಿಂದ ಮದಗಜ ಕೆಂಚವವ ನೃತ್ಯ ರೂಪಕ
* ಹನೂರು ಮಹದೇಶ್ವರ ಕಲಾ ತಂಡದಿಂದ ಡೋಲು ಜುಗಲ್ ಬಂದಿ
* ಮೈಸೂರಿನ ಶುಭಾ ರಾಘವೇಂದ್ರ ಮತ್ತು ತಂಡದಿಂದ ಗೀ ಗೀ ಪದ
* ಮೈಸೂರಿನ ಮೋಹನ ಮಿತ್ರ ಮಂಡಲಿ ಅವರಿಂದ ಶ್ರೀ ಕೃಷ್ಣದೇವರಾಯ ಐತಿಹಾಸಿಕ ನಾಟಕ
* ಕಳಲೆ ನಾರಾಯಣ ಮತ್ತು ತಂಡದಿಂದ ಬೀಸು ಕಂಸಾಳೆ
* ಗಾವಡಗೆರೆ ಅಭಿಲಾಷ ಮತ್ತು ತಂಡದಿಂದ ವೀರಭದ್ರ ಕುಣಿತ
* ಯಾಚೇನಹಳ್ಳಿ ತಾಯಮ್ಮ ಮತ್ತು ತಂಡದಿಂದ ಸೋಬಾನೆ ಪಡೆ
* ಕಬ್ಬೆಪುರದ ಸಿದ್ದರಾಜು ಮತ್ತು ತಂಡದಿಂದ ತಂಬೂರಿ ಪದ

Rural Cultural Festival in Rangasamudra in Mysuru

ಪ್ರಾಥಮಿಕ ಹಾಗೂ ಫ್ರೌಢಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ತನ್ವೀರ್ ಸೇಠ್, ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯೀಮಾ ಸುಲ್ತಾನ ನಜೀರ್ ಅಹಮದ್, ಲೋಕಸಭಾ ಸದಸ್ಯರುಗಳಾದ ಪ್ರತಾಪಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್. ಪುಟ್ಟರಾಜು ಮುಂತಾದವರು ಭಾಗವಹಿಸುತ್ತಿದ್ದಾರೆ.

ಫೆ.27ರಂದು ಮುನ್ನೋಟ ಕಮ್ಮಟ

ಭಾರತೀಯ ಭಾಷಾ ಸಂಸ್ಥಾನದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ವತಿಯಿಂದ ಫೆಬ್ರವರಿ 27 ಹಾಗೂ 28ರಂದು ಭಾರತೀಯ ಭಾಷಾ ಸಂಸ್ಥಾನದ ಸಂಸ್ಥೆಯ ಆವರಣದಲ್ಲಿ ಮುನ್ನೋಟ ಕಮ್ಮಟ ಹಾಗೂ ಯೋಜನೆಗಳ ಸಿದ್ಧತೆ ಕಾರ್ಯಕ್ರಮ ನಡೆಯಲಿದೆ.

ಫೆಬ್ರವರಿ 27 ರಂದು ಬೆಳಿಗ್ಗೆ 10-30 ಗಂಟೆಗೆ ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ. ಡಿ.ಜಿ.ರಾವ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಪಿ.ಕೆ.ಖಂಡೋಬಾ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಪಕ ಪ್ರೊ.ಅರವಿಂದ ಮಾಲಗತ್ತಿ ಅವರು ಪ್ರಾಸ್ತವಿಕವಾಗಿ ಮಾತನಾಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಇತರ ಗಣ್ಯರು

ಹಿರಿಯ ಸಂಶೋಧಕ ಪ್ರೊ.ಟಿವಿ.ವೆಂಕಟಾಚಲ ಶಾಸ್ತ್ರೀ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ ಎಸ್.ಜಿ ಸಿದ್ಧರಾಮಯ್ಯ, ಹಿರಿಯ ಸಂಪನ್ಮೂಲ ತಜ್ಞರಾದ ಪ್ರೊ.ಹಂಪ ನಾಗರಾಜಯ್ಯ, ಪ್ರೊ.ಷ ಶೆಟ್ಟರ್, ಪ್ರೊ.ಸಿ.ಪಿ.ಕೃಷ್ಣಕುಮಾರ್, ಪ್ರೊ. ಬಿ.ಎ.ವಿವೇಕ ರೈ, ಪ್ರೊ. ಹೆಚ್.ಎಂ.ಮಹೇಶ್ವರಯ್ಯ, ಪ್ರೊ. ಎಂ.ರಾಮಚಂದ್ರ, ಪ್ರೊ. ಎಸ್.ಜಿ.ಸಿದ್ದರಾಮಯ್ಯ ಹಾಗೂ ಡಾ|| ಎಲ್ ಹನುಮಂತಯ್ಯ, ಸಲಹಾಸಮಿತಿ ಸದಸ್ಯರಾದ ಪ್ರೊ. ಟಿ.ವಿ,ವೆಂಕಟಾಚಲಶಾಸ್ತ್ರಿ, ಪ್ರೊ. ಎನ್.ಎಸ್.ತಾರಾನಾಥ್, ಪ್ರೊ. ಅರವಿಂದ ಮಾಲಗತ್ತಿ ಹಾಗೂ ಪ್ರೊ. ಎನ್.ಎಂ.ತಳವಾರ ಸೇರಿದಂತೆ ಆನೇಕ ವಿಷಯ ತಜ್ಞರು ಭಾಗವಹಿಸಲಿದ್ದಾರೆ.

English summary
Suggi-Huggi, a rural cultural festival has been organized by Kannada and Culture department in Rangasamudra village in T Narasipur taluk in Mysuru on 27th February. Many cultural events are lined up to enthral the people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X