ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಎನ್‍ಫೀಲ್ಡ್ ಬೈಕ್ ಬಾಡಿಗೆ ಪಡೆದು ನಗರ ಸುತ್ತಾಡಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್ 21 : ಸಾಂಸ್ಕೃತಿಕ ನಗರಿ ಮೈಸೂರಿಗೆ ಬರುವ ಪ್ರವಾಸಿಗರು ಇನ್ನು ಮುಂದೆ ನಗರ ಸುತ್ತಲು ಬೈಕ್ ಇಲ್ಲ ಎಂದು ನಿರಾಸೆಗೊಳ್ಳುವ ಅಗತ್ಯವಿಲ್ಲ. ಗೆಳೆಯ, ಗೆಳತಿಯರೊಂದಿಗೆ ತಮಗೆ ಬೇಕಾದ ರಾಯಲ್ ಎನ್‍ಫೀಲ್ಡ್, ಹೋಂಡಾ ಆಕ್ಟೀವಾ ಬೈಕ್ ಬಾಡಿಗೆ ಪಡೆದು ನಗರದಲ್ಲಿ ಸುತ್ತಾಡಬಹುದು.

ಶನಿವಾರ ಮೈಸೂರಿನಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಈ ಸೇವೆಗೆ ಚಾಲನೆ ನೀಡಿದರು ಮತ್ತು ಒಂದಷ್ಟು ದೂರ ಜಾಲಿ ರೈಡ್ ಮಾಡಿದರು. ರಾಯಲ್ ಬ್ರದರ್ಸ್ ಇಂತಹ ಸೇವೆಯನ್ನು ಮೈಸೂರಿನಲ್ಲಿ ಜಾರಿಗೆ ತಂದಿದ್ದಾರೆ. [ಬೆಂಗಳೂರು ಸಿಟಿ ಟ್ಯಾಕ್ಸಿ ದೂರವಾಣಿ ಸಂಖ್ಯೆಗಳು]

ಬೈಕ್ ಬಾಡಿಗೆ ಪಡೆದು ನಗರ ಸುತ್ತುವ ಸೇವೆ ಈಗಾಗಲೇ ಗೋವಾ, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಜಾರಿಯಲ್ಲಿದೆ, ಬೆಂಗಳೂರಿನಲ್ಲಿಯೂ ಇದೆ. ಮೈಸೂರಿನಲ್ಲಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲು ಬಾಡಿಗೆಗೆ ಬೈಕ್‍ಗಳನ್ನು ನೀಡುವ ವ್ಯವಸ್ಥೆಯನ್ನು ಆರಂಭಿಸಲಾಗಿದೆ. [ಬೆಂಗಳೂರಿನಲ್ಲಿ ಟ್ಯಾಕ್ಸಿ ಆಲ್ವೇಸ್ ಸೇವೆ ಆರಂಭ]

ಆನ್‌ಲೈನ್ ಮೂಲಕ ಬಾಡಿಗೆಯನ್ನು ಪಾವತಿ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ದಿನವೊಂದಕ್ಕೆ 288 ಕಿ.ಮೀಗಳ ಮಿತಿಯನ್ನು ನಿಗದಿಪಡಿಸಲಾಗಿದ್ದು, ಇದರ ನಂತರ ಹೆಚ್ಚುವರಿ ಶುಲ್ಕವನ್ನು ಪಾವತಿ ಮಾಡಬೇಕಾಗಿದೆ. ಬೈಕ್ ಬಾಡಿಗೆ ಪಡೆಯುವುದು ಹೇಗೆ? ವಿವರಗಳು ಚಿತ್ರಗಳಲ್ಲಿ.....

ಮೈಸೂರಿನಲ್ಲೂ ಇನ್ನು ಬಾಡಿಗೆಗೆ ಬೈಕ್ ಲಭ್ಯ

ಮೈಸೂರಿನಲ್ಲೂ ಇನ್ನು ಬಾಡಿಗೆಗೆ ಬೈಕ್ ಲಭ್ಯ

ಬೆಂಗಳೂರು, ಗೋವಾ, ಹಿಮಾಚಲ ಪ್ರದೇಶದಂತೆ ಮೈಸೂರಿನಲ್ಲಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲು ಬಾಡಿಗೆಗೆ ಬೈಕ್‍ಗಳನ್ನು ನೀಡುವ ವ್ಯವಸ್ಥೆಯನ್ನು ಆರಂಭಿಸಲಾಗಿದೆ.

ಸೇವೆಗೆ ಚಾಲನೆ ನೀಡಿದ ಪ್ರತಾಪ್ ಸಿಂಹ

ಸೇವೆಗೆ ಚಾಲನೆ ನೀಡಿದ ಪ್ರತಾಪ್ ಸಿಂಹ

ಶನಿವಾರ ಮೈಸೂರಿನಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಈ ಸೇವೆಗೆ ಚಾಲನೆ ನೀಡಿದರು ಮತ್ತು ಒಂದಷ್ಟು ದೂರ ಜಾಲಿ ರೈಡ್ ಮಾಡಿದರು. ರಾಯಲ್ ಬ್ರದರ್ಸ್ ಇಂತಹ ಸೇವೆಯನ್ನು ಮೈಸೂರಿನಲ್ಲಿ ಜಾರಿಗೆ ತಂದಿದ್ದಾರೆ.

ಯಾವ ಬೈಕ್‌ಗೆ ಎಷ್ಟು ಬಾಡಿಗೆ

ಯಾವ ಬೈಕ್‌ಗೆ ಎಷ್ಟು ಬಾಡಿಗೆ

ರಾಯಲ್ ಎನ್‍ಫೀಲ್ಡ್, ಹೋಂಡಾ ಆಕ್ಟೀವಾ ಬೈಕ್‌ಗಳನ್ನು ಬಾಡಿಗೆ ಪಡೆದು ನಗರದಲ್ಲಿ ಸುತ್ತಾಟ ನಡೆಸಬಹುದಾಗಿದೆ. ರಾಯಲ್ ಎನ್‌ಫೀಲ್ಡ್‌ಗೆ ದಿನಕ್ಕೆ 700, ಹೊಂಡಾ ಆಕ್ಟೀವಾಗೆ 300 ರೂ. ಬಾಡಿಗೆ ನಿಗದಿಪಡಿಸಲಾಗಿದೆ.

ರಾಯಲ್ ಬ್ರದರ್ಸ್ ಐಡಿಯಾ ಇದು

ರಾಯಲ್ ಬ್ರದರ್ಸ್ ಐಡಿಯಾ ಇದು

ಇಂತಹ ಐಡಿಯಾವನ್ನು ಜಾರಿಗೆ ತಂದವರು ರಾಯಲ್ ಬ್ರದರ್ಸ್. ಈಗಾಗಲೇ ಬೆಂಗಳೂರಿನಲ್ಲಿ ಇಂತಹ ಸೇವೆ ಆರಂಭಿಸಿದ್ದು, ಇದೀಗ ಮೈಸೂರಿನಲ್ಲಿ ಮುಂದುವರಿಸಲಾಗಿದೆ. ಈ ಸೇವೆಯನ್ನು ಇನ್ನಿತರ ನಗರಗಳಿಗೆ ವಿಸ್ತರಿಸುವ ಯೋಚನೆಯಲ್ಲಿದ್ದಾರೆ ರಾಯಲ್ ಬ್ರದರ್ಸ್‍.

ಕದ್ದು ಓಡುವಂತಿಲ್ಲ

ಕದ್ದು ಓಡುವಂತಿಲ್ಲ

ಬಾಡಿಗೆಗೆ ಎಂದು ಬೈಕ್ ಪಡೆದು ಅದನ್ನು ಕದ್ದು ಓಡುವಂತಿಲ್ಲ. ಬೈಕ್‍ಗಳು ಜಿಪಿಎಸ್ ನಿಯಂತ್ರಣದಲ್ಲಿದ್ದು, ಎಲ್ಲಿದ್ದೀರಿ ಎಂಬ ಮಾಹಿತಿ ಲಭ್ಯವಾಗುತ್ತಿರುತ್ತದೆ.

20 ವರ್ಷ ಮೇಲ್ಪಟ್ಟಿರಬೇಕು

20 ವರ್ಷ ಮೇಲ್ಪಟ್ಟಿರಬೇಕು

ಬೈಕ್ ಬಾಡಿಗೆ ಪಡೆಯಲು 20 ವರ್ಷವಾಗಿರುವುದು ಕಡ್ಡಾಯ ಮತ್ತು ನಿಮ್ಮ ಬಳಿ ಮಾನ್ಯತೆ ಪಡೆದ ಡಿಎಲ್ ಇರಬೇಕು. ಬೈಕ್ ಬಾಡಿಗೆ ರೂ.30ರಿಂದ ಆರಂಭವಾಗಲಿದ್ದು, ಯಾವ ಬೈಕ್ ಎಂಬುದರ ಮೇಲೆ ದರ ನಿಗದಿಯಾಗುತ್ತದೆ. ಪೆಟ್ರೋಲ್ ಶುಲ್ಕ ಪ್ರತ್ಯೇಕ.

ಹೆಚ್ಚಿನ ಮಾಹಿತಿ ಎಲ್ಲಿ ಸಿಗುತ್ತದೆ

ಹೆಚ್ಚಿನ ಮಾಹಿತಿ ಎಲ್ಲಿ ಸಿಗುತ್ತದೆ

ಬೈಕ್ ಬಾಡಿಗೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು www.royalbrothers.in ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.

English summary
A group of young entrepreneurs Royal Brothers launched bike rental service in Mysuru city on Saturday, November 21, 2015. To make use of the bike rental service one must be 20 years or above with a valid driver’s license to rent a bike. The tariff starts from Rs.30 per hour and increases depending on the model of the bike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X