ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಗುವಿಗೆ ಗ್ಯಾಸ್ಟ್ರೋಎಂಟಾರಾಲಜಿ ಶಸ್ತ್ರಚಿಕಿತ್ಸೆ ಯಶಸ್ವಿ: ಜಾಗತಿಕ ದಾಖಲೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 28 : ಮಕ್ಕಳಲ್ಲಿ ಅಪರೂಪವೆನ್ನಿಸುವ ಮೇದೋಜೀರಕಾಂಗದ ನಾಳಕ್ಕೆ ಕೃತಕ ನಾಳ ಅಳವಡಿಸುವ ಗ್ಯಾಸ್ಟ್ರೋಎಂಟಾರಾಲಜಿ ಶಸ್ತ್ರಚಿಕಿತ್ಸೆಯನ್ನು ಜೆಎಸ್ ಎಸ್ ಆಸ್ಪತ್ರೆಯ ತಜ್ಞ ವೈದ್ಯರ ತಂಡವು ಯಶಸ್ವಿಯಾಗಿ ನಡೆಸಿ ಜಾಗತಿಕ ದಾಖಲೆ ಬರೆದಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಎಂ.ಗುರುಸ್ವಾಮಿ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುಂಡ್ಲುಪೇಟೆಯ ರಂಗನಾಥಪುರದ ರಮೇಶ್ ಎಂಬುವವರ ಪುತ್ರ ಅಭಿಷೇಕ್ (5) ನಿಶಕ್ತಿ ಹಾಗೂ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ. ಆತನ ಪರೀಕ್ಷೆ ನಡೆಸಿದ ವೈದ್ಯರು ರೋಗಿಗೆ ಮೇದೋಜೀರಕಾಂಗದ ನಾಳದಿಂದ ದ್ರವ ಸೋರಿಕೆಯಾಗಿ ಬಲಭಾಗದ ಎದೆಗೂಡಿನ ಪೊರೆಯಲ್ಲಿ ಸಂಗ್ರಹವಾಗಿರುವುದು ದೃಢಪಟ್ಟಿದ್ದು, ಇದು ಮಕ್ಕಳಲ್ಲಿ ತೀರ ಅಪರೂಪವಾಗಿ ಕಂಡು ಬರುವ ಕಾಯಿಲೆ ಎಂದು ತಿಳಿಸಿದರು.[ಬೆಂಗಳೂರಿನ ಆಸ್ಪತ್ರೆಯಲ್ಲಿ ಪಾಕ್ ಪುಟಾಣಿಗೆ ಮರುಜನ್ಮ]

record Gastroenteroloji successful surgery for a child in mysuru

ಇಂತಹ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆಯನ್ನು ಡಿ.21ರಂದು ಜೆಎಸ್ಎಸ್ ಆಸ್ಪತ್ರೆಯ ಗ್ಯಾಸ್ಟ್ರೋಎಂಟಾರಾಲಜಿ ಮತ್ತು ಲಿವರ್ ಚಿಕಿತ್ಸಾ ತಜ್ಞ ವೈದ್ಯ ಡಾ.ಹೆಚ್.ಪಿ.ನಂದೀಶ್ ಮತ್ತು ತಂಡವೂ ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದು ರೋಗಿಗೆ ಎಂಡೋಸ್ಕೋಪಿಕ್ ಮೂಲಕ ಮೇದೋಜೀರಕಾಂಗದ ನಾಳಕ್ಕೆ ಕೃತಕ ನಾಳವನ್ನು ಅಳವಡಿಸಿ ದ್ರವ ಸೋರಿಕೆಯನ್ನು ತಡೆಗಟ್ಟಲಾಗಿದೆ. ಈಗ ರೋಗಿಯೂ ಸಂಪೂರ್ಣ ಆರೋಗ್ಯವಾಗಿದ್ದಾನೆ ಎಂದು ತಿಳಿಸಿದರು.[ಪೊಲೀಸಪ್ಪನ ಹೊಟ್ಟೆಯಿಂದ 40 ಚಾಕು ಹೊರತೆಗೆದ ವೈದ್ಯರು!]

ಮದ್ಯಪಾನ ವ್ಯಸನಿಗಳಲ್ಲಿ ಹಾಗೂ ವಯಸ್ಕರಲ್ಲಿ ಈ ಕಾಯಿಲೆಯೂ ಸಾಮಾನ್ಯವಾಗಿದ್ದರೂ ಚಿಕ್ಕ ಮಕ್ಕಳಲ್ಲಿ ಅತಿ ವಿರಳ. ಇಂತಹ ವಿರಳ ಹಾಗೂ ಅಪರೂಪದ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಜೆಎನ್ ಯೂ ಆಸ್ಪತ್ರೆ ನಿರ್ವಹಿಸಿದ್ದು, ಇದೊಂದು ಅಪರೂಪದ ಜಾಗತಿಕ ದಾಖಲೆಯ ಶಸ್ತ್ರ ಚಿಕಿತ್ಸೆಯಾಗಿದೆ ಎಂದು ಶಸ್ತ್ರಚಿಕಿತ್ಸಕ ಡಾ.ಹೆಚ್.ಪಿ.ನಂದೀಶ್ ತಿಳಿಸಿದರು.

English summary
Gastroenteroloji successful surgery for a child: Mysore JSS hospital world record
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X