ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರವಿ ಸಾವು ನಿಗೂಢ, ಮರಣೋತ್ತರ ಪರೀಕ್ಷೆಯೂ ನಿಗೂಢ

ಬಿಜೆಪಿ ಕಾರ್ಯಕರ್ತ ಮಾಗಳಿ ರವಿ ನಿಗೂಢ ಸಾವು ಆದ 10 ದಿನವಾದರೂ ರವಿ ಮರಣೋತ್ತರ ಪರೀಕ್ಷೆಯ ವರದಿಯೇ ಬಂದಿಲ್ಲ.ವರದಿಯೇ ಬಂದಿಲ್ಲ ಎಂದ ಮೇಲೆ ಪೊಲೀಸರು ಯಾರುನ್ನು ಬಂಧಿಸಬೇಕು?

By Ananthanag
|
Google Oneindia Kannada News

ಮೈಸೂರು. ನವೆಂಬರ್, 15: ಬಿಜೆಪಿ ಕಾರ್ಯಕರ್ತ ಮಾಗಳಿ ರವಿ ನಿಗೂಢ ಸಾವು ಆದ 10 ದಿನವಾದರೂ ರವಿ ಮರಣೋತ್ತರ ಪರೀಕ್ಷೆಯ ವರದಿಯೇ ಬಂದಿಲ್ಲದಿರುವುದು ರಾಜಕೀಯ ವಲಯದಲ್ಲಿ ಗೊಂದಲಕ್ಕೆ ಕಾರಣವಾಗಿದೆ.

ವರದಿಯೇ ಬಂದಿಲ್ಲ ಎಂದ ಮೇಲೆ ಪೊಲೀಸರು ಯಾರುನ್ನು ಬಂಧಿಸಬೇಕು ಎಂದು ನಿರ್ಧರಿಸಿಯೇ ಇಲ್ಲ. ಹೀಗಾಗಿ ಆರೋಪಿ ತಪ್ಪಿಸಿಕೊಳ್ಳಲು ಇದು ಒಳ್ಳೆಯ ಅವಕಾಶ ಎಂಬುದು ನಾಗರಿಕರ ಮಾತು.

ravi

ಹಾಗೇಯೇ ಮರಣೋತ್ತರ ಪರೀಕ್ಷೆ ನಡೆದು ಐದು ದಿನಗಳೊಳಗಾಗಿ ವರದಿಯನ್ನು ಸಾಮಾನ್ಯವಾಗಿ ನೀಡುವ ವೈದ್ಯರು ಇನ್ನು ಏಕೆ ನೀಡಿಲ್ಲ ಎಂಬ ಪ್ರಶ್ನೆ ತೀವ್ರ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. [ಮಾಗಳಿ ರವಿ ಸಾವಿನ ಸುತ್ತ ಅನುಮಾನದ ಹುತ್ತ!]

ಈ ಬಗ್ಗೆ ವೈದ್ಯರು ಸಂಪೂರ್ಣ ವೈಜ್ಞಾನಿಕ ವರದಿಯನ್ನು ನೀಡಬೇಕಾಗಿದೆ ಹೀಗಾಗಿ ಸಮಯ ಹಿಡಿಯುತ್ತಿದೆ ಎಂದು ಹೇಳಿದ್ದಾರೆ. ಹಾಗು ಸುಳಿವೆಂಬಂತೆ ಬಾರಿ ಪ್ರಮಾಣದ ಪೆಟ್ಟಿನಿಂದಾಗಿ ರವಿ ಸಾವಿಗೀಡಾಗಿದ್ದಾನೆ ಎಂದಿದ್ದಾರೆ.

ಈ ಬಗ್ಗೆ ಐಪಿಎಸ್ ಅಧಿಕಾರಿ ಹರೀಶ್ ಪಾಂಡೆ ತಂಡ ತನಿಖೆ ನಡೆಸುತ್ತಿದ್ದು ಮರಣೋತ್ತರ ಪರೀಕ್ಷೆಯ ವರದಿಯನ್ನು ಪಡೆದು ತನಿಖೆಯನ್ನು ನಡೆಸಿ ಕೋಲೆಯೋ, ಮತ್ತೊಂದೋ ತಿಳಿಯುವಷ್ಟರಲ್ಲಿ ಬಹಳ ಸಮಯ ಹಿಡಿಯುತ್ತದೆ.[ರಕ್ತದ ಕಲೆ ಅಳಿಸುವ ಮುನ್ನವೇ ರಾಜಕೀಯ ರಂಗಿನಾಟ !]

ಇನ್ನು ರಾಜಕೀಯ ಪಕ್ಷಗಳು ರವಿ ನಿಗೂಢ ಸಾವಿಗೆ ನೇರವಾಗಿ ಸರ್ಕಾರವೇ ಕಾರಣ ಎಂದು ಆರೋಪಿಸುತ್ತಿದೆ. ಮತ್ತೆ ಮತ್ತೆ ನಿಧಾನಗತಿಯಲ್ಲಿ ಪ್ರಕರಣವನ್ನು ನಡೆಸಿದರೆ ಸರ್ಕಾರಕ್ಕೆ ಕುತ್ತಾಗುವ ಸಾದ್ಯತೆಯಿದೆ.

English summary
A BJP worker Ravi's mysterious death: Has not been give post mortem report before 10 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X