ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ ಆರಂಭ, ಹ್ಯಾಟ್ರಿಕ್ ಪಟ್ಟ ಸಾಧ್ಯತೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 5: ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ವತಿಯಿಂದ ಕೇಂದ್ರ ಸರ್ಕಾರ ಆರಂಭಿಸಿರುವ ಸ್ವಚ್ಛ ಸರ್ವೇಕ್ಷಣ ಸಮೀಕ್ಷೆ' ಇಂದಿನಿಂದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರಾರಂಭಗೊಂಡಿದೆ.

ನಗರದಲ್ಲಿನ ತ್ಯಾಜ್ಯ ಸಂಗ್ರಹ, ಸಾಗಾಣಿಕೆ, ಕಸ ಗುಡಿಸುವಿಕೆ, ಬಯಲು ಶೌಚ ಮುಕ್ತ, ನಗರಪಾಲಿಕೆ ಘನ ತ್ಯಾಜ್ಯ ಪರಿಷ್ಕರಣೆ ಮತ್ತು ವಿಲೇವಾರಿ, ಮಾಹಿತಿ, ಶಿಕ್ಷಣ ಮತ್ತು ವರ್ತನೆ ಬದಲಾವಣೆ ಮತ್ತು ಸಾಮರ್ಥ್ಯ ಬೆಳೆಸುವಿಕೆ ಮೊದಲಾದ ವಿಷಯಗಳಲ್ಲಿ ನಗರವನ್ನು ಮೌಲ್ಯಮಾಪನ ಮಾಡಲು ಸ್ವಚ್ಛ ಸರ್ವೇಕ್ಷಣ ಸಮೀಕ್ಷೆ ಮೂಲಕ ಇಂದಿನಿಂದ ದೇಶಾದ್ಯಂತ 500 ನಗರಗಳಲ್ಲಿ ಈ ಸಮೀಕ್ಷೆ ನಡೆಸಲಾಗುತ್ತಿದೆ.[ಸ್ವಚ್ಛ ಭಾರತ ಅಭಿಯಾನ, ದೇಶಕ್ಕೆ ಮೈಸೂರು ನಂ 1]

Quality Council of India: Clear Survey has began in Mysore.

ನಗರದ ನಾಗರಿಕರು ತಮ್ಮ ಅಭಿಪ್ರಾಯ, ಸಲಹೆಗಳನ್ನು 1969 ಸಂಖ್ಯೆಗೆ ಮಿಸ್ ಕಾಲ್ ಕೊಟ್ಟು ಅಲ್ಲಿ ಅಭಿಪ್ರಾಯಗಳನ್ನು ರೆಕಾರ್ಡ್ ಮಾಡಬಹುದು. ಅಥವಾ ಸ್ವಚ್ಛ ಸರ್ವೇಕ್ಷಣ ವೆಬ್ ಸೈಟ್ ನಲ್ಲಿ ಸಿಗುವ ಅರ್ಜಿಯಲ್ಲಿ ಅಭಿಪ್ರಾಯಗಳನ್ನು ತುಂಬಬಹುದು. ಸ್ವಚ್ಛ ಭಾರತ್ ಮಿಷನ್ ಇ-ಲರ್ನಿಂಗ್ ಪೋರ್ಟಲ್ ನ್ನು ಇದು ಹೊಂದಿದೆ.

ಶುಚಿತ್ವಕ್ಕೆ ಆದ್ಯತೆ ನೀಡಲು, ಜನರಲ್ಲಿ ಪರಿಸರ ನೈರ್ಮಲ್ಯ ಕಾಪಾಡುವ ಬಗ್ಗೆ ಸ್ಪರ್ಧಾ ಮನೋಭಾವ ಮೂಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿದ್ದು, ನಗರ ಪಾಲಿಕೆಗಳು ನೀಡುವ ಅಂಕಿಅಂಶಗಳನ್ನು ಆಧರಿಸಿ, ಮಂಡಳಿ ನಗರಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ. ಮಂಡಳಿಯ ಸದಸ್ಯರು ನಗರಗಳನ್ನು ವೀಕ್ಷಿಸುವ ಮೂಲಕ, ಸ್ವತಂತ್ರ ಲೆಕ್ಕಾಚಾರ ಮತ್ತು ನಾಗರಿಕರ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳುತ್ತದೆ.

ಈ 2015, 2016ರಲ್ಲಿ ಮೈಸೂರು ಸ್ಚಚ್ಛ ಸರ್ವೇಕ್ಷಣ ಸಮೀಕ್ಷೆಯಲ್ಲಿ ಅಗ್ರಸ್ಥಾನವನ್ನು ಪಡೆದಿತ್ತು. ಅಲ್ಲದೆ ರಾಜ್ಯ ಎಲ್ಲ ನಗರಗಳಿಗಿಂತ ಮಾದರಿಯಾಗಿತ್ತು. ಸ್ಚಚ್ಛ ಭಾರತ ಅಭಿಯಾನವನ್ನು ಸರಿಯಾಗಿ ಬಳಸಿಕೊಂಡ ಗರಿಮೆಯೂ ಮೈಸೂರಿನದ್ದಾಗಿದೆ.

English summary
By the Quality Council of India, the Central Government launched the 'Clear Survey has began in Mysore. Other 500 cities. In the past The survey had reached the top of Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X