ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆ.ಆರ್ ನಗರದಲ್ಲಿ ಮಳೆಗಾಗಿ ಅರಳಿ-ಬೇವಿನ ಮರಕ್ಕೆ ಮದ್ವೆ

ಮಳೆಯನ್ನು ತರಿಸುವುದಾದರೂ ಹೇಗೆ? : ಕತ್ತೆ, ಕಪ್ಪೆ ಮದುವೆ ಸೇರಿದಂತೆ ಹಲವು ಪೂಜಾ ಕಾರ್ಯಗಳನ್ನು ಮಾಡಿದ್ದಾರೆ. ಈ ನಡುವೆ ಕೆ.ಆರ್.ನಗರ ತಾಲೂಕಿನ ಸಾಲೇಕೊಪ್ಪಲು ಗ್ರಾಮದಲ್ಲಿ ಅರಳಿ ಮರ ಮತ್ತು ಬೇವಿನ ಮರಕ್ಕೆ ವಿವಾಹ ಕಾರ್ಯ

By ಮೈಸೂರು ಪ್ರತಿನಿಧಿ
|
Google Oneindia Kannada News

ಈ ವರ್ಷ ಮುಂಗಾರು ಕೈಕೊಟ್ಟಿದೆ. ಹಿಂಗಾರಿನ ಮೇಲೆಯೂ ನಂಬಿಕೆಯಿಲ್ಲದಾಗಿದೆ. ಮುಂದಿನ ದಿನ ಕೃಷಿಗೆ ಇರಲಿ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗುವುದಂತು ಖಚಿತ. ಹೀಗಿರುವಾಗ ಮುಂದೆ ನಾವೆಲ್ಲರೂ ನೆಮ್ಮದಿಯಿಂದ ಬದುಕಬೇಕಾದರೆ ಮಳೆ ಬರಲೇ ಬೇಕು. ಆದರೆ ಆ ಮಳೆಯನ್ನು ತರಿಸುವುದಾದರೂ ಹೇಗೆ? ಅದಕ್ಕಾಗಿ ಒಬ್ಬೊಬ್ಬರು ಒಂದೊಂದು ಸಂಪ್ರದಾಯವನ್ನು ಮಾಡುತ್ತಿದ್ದಾರೆ.

ಈಗಾಗಲೇ ಹಲವೆಡೆ ಕತ್ತೆ, ಕಪ್ಪೆ ಮದುವೆ ಸೇರಿದಂತೆ ಹಲವು ಪೂಜಾ ಕಾರ್ಯಗಳನ್ನು ಮಾಡಿದ್ದಾರೆ. ಈ ನಡುವೆ ಕೆ.ಆರ್.ನಗರ ತಾಲೂಕಿನ ಸಾಲೇಕೊಪ್ಪಲು ಗ್ರಾಮದಲ್ಲಿ ಶಾಸಕ ಸಾ.ರಾ.ಮಹೇಶ್ ಅವರ ಸಾರಥ್ಯದಲ್ಲಿ ಪುಟ್ಟಮ್ಮಕಲ್ಲುಬಂಡಿರಾಮೇಗೌಡ, ಗ್ರಾ.ಪಂ.ಸದಸ್ಯೆ ಶೋಭಪ್ರತಾಪ್ ಕುಟುಂಬದವರು ಗ್ರಾಮದ ಒಳಿತಿಗಾಗಿ ಮತ್ತು ಮಳೆಯ ಸುರಿಯಲೆಂದು ಅರಳಿ ಮರ ಮತ್ತು ಬೇವಿನ ಮರಕ್ಕೆ ವಿವಾಹ ಕಾರ್ಯವನ್ನು ನೆರವೇರಿಸಿ ವರುಣ ದೇವನಿಗೆ ಮೊರೆ ಹೋಗಿದ್ದಾರೆ.

ಸಾಲೇಕೊಪ್ಪಲು ಗ್ರಾಮದ ಕಟ್ಟೆಪುರನಾಲೆಯ ಸಮೀಪ ಇರುವ ಪ್ರವೇಶ ದ್ವಾರದ ಮುಂಭಾಗದ ಅರಳಿಮರ ಮತ್ತು ಬೇವಿನಮರಗಳಿಗೆ ಅಶ್ವತ್ಥಕಟ್ಟೆ ಕಟ್ಟಿಸಿ ವಿವಾಹ ಕಾರ್ಯ ನೆರವೇರಿಸಲಾಗಿದ್ದು, ಜನ ಈ ಶುಭಕಾರ್ಯದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

Prayer for Rain : Peepal Tree Marriage with Neem Tree in KR Nagar

ವಧು-ವರರಿಗೆ ಮಾಡುವಂತೆಯೇ ವಿವಾಹ ಕಾರ್ಯದ ಸಂಪ್ರದಾಯವನ್ನು ನೆರವೇರಿಸಲಾಯಿತು. ಮೊದಲಿಗೆ ಅರುಣೆ ಕಳಶಗಳನ್ನು ತಂದು ಪೂಜೆ ಮಾಡಿ ಅರಳಿಮರ (ವರ) ಮತ್ತು ಬೇವಿನಮರ(ವಧು)ಗಳನ್ನು ಸಿಂಗಾರ ಮಾಡಿ ಮನೆತುಂಬಿಸುವ ಶಾಸ್ತ್ರವನ್ನು ಮಾಡಲಾಯಿತು. ಬಳಿಕ ಬಳೆ ತೊಡಿಸುವ ಶಾಸ್ತ್ರ ನಡೆಯಿತು. ಇದು ಬಳಿಕ ಮಂಗಳವಾದ್ಯದೊಂದಿಗೆ ತಾಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಮುತೈದೆಯರು ಗ್ರಾಮದ ಒಳಿತಿಗಾಗಿ ಪ್ರಾರ್ಥಿಸಿದರು.

ಪುರೋಹಿತರಾದ ಹಳಿಯೂರಿನ ಸುಬ್ರಮಣ್ಯ ಜೋತಿಷ್ಯರು ಮಂತ್ರಗಳನ್ನು ಪಠಿಸಿ ಅರಳಿಮರ ಮತ್ತು ಬೇವಿನ ಮರ ಸುತ್ತ ನಾಗದೇವತೆಗಳು ಮತ್ತು ಆಂಜನೇಯಸ್ವಾಮಿಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿದರು. ಇದಾದ ನಂತರ ಮಾಂಗಲ್ಯಧಾರಣೆ ಶಾಸ್ತ್ರವನ್ನು ಗ್ರಾ.ಪಂ.ಸದಸ್ಯೆ ಶೋಭ ಅವರು ನೆರವೇರಿಸಿದರು. ಇಷ್ಟೆಲ್ಲ ಆದ ನಂತರ ವಿವಾಹಕ್ಕೆ ಆಗಮಿಸಿದವರಿಗೆ ಭರ್ಜರಿ ಬೋಜನದ ವ್ಯವಸ್ಥೆ ಮಾಡಿದ್ದರಿಂದ ಎಲ್ಲರೂ ಊಟ ಮಾಡಿ ತಮ್ಮ ಮನೆಯತ್ತ ಹೆಜ್ಜೆ ಹಾಕಿದರು.

English summary
Prayer for Rain: It was off season marriage between a Peepal tree which is considered as 'Male' and Neem Tree which is 'Female'.Krishnarajanagara taluk in Mysuru witnessed this marriage and seek blessing. Here is special report on this un usual marriage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X