ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಶ್ಲೀಲ ವೆಬ್ ಸೈಟ್ ಪ್ರಕರಣ: ಮೈಸೂರು ವಿವಿ ಪ್ರಾಧ್ಯಾಪಕರ ಕೈವಾಡ?

ಇತ್ತೀಚೆಗೆ ನಡೆದ ವಿದ್ಯಾರ್ಥಿನಿಯರ ಭಾವಚಿತ್ರ ಅಶ್ಲೀಲ ವೆಬ್ ಸೈಟ್ ಗೆ ಅಪ್ಲೋಡ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಟ್ವಿಸ್ಟ್ 'ಒನ್ ಇಂಡಿಯಾ'ಗೆ ಲಭಿಸಿದೆ.

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಏಪ್ರಿಲ್ 26 : ಮೈಸೂರು ವಿವಿ ಅಂದರೆ ಸಾಕು ಅದೊಂದು ಪ್ರಕರಣಗಳ ಕಂತೆ ಎಂಬ ಹೆಸರಿಗೆ ಪಾತ್ರವಾದಂತಿದೆ. ಹೌದು. ಇತ್ತೀಚೆಗೆ ನಡೆದ ವಿದ್ಯಾರ್ಥಿನಿಯರ ಭಾವಚಿತ್ರ ಅಶ್ಲೀಲ ವೆಬ್ ಸೈಟ್ ಗೆ ಅಪ್ಲೋಡ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಟ್ವಿಸ್ಟ್ 'ಒನ್ ಇಂಡಿಯಾ'ಗೆ ಲಭಿಸಿದೆ.

ಮಾನಸ ಗಂಗೋತ್ರಿಯ ಪರಿಸರ ವಿಜ್ಞಾನ ವಿಭಾಗದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಈ ಘಟನೆಗೆ ಸಂಬಂಧಿಸಿದಂತೆ , ವಿಭಾಗದ ಪ್ರಾಧ್ಯಾಪಕರ ವಿರುದ್ಧವೇ ಅನುಮಾನ ವ್ಯಕ್ತಪಡಿಸಿ, ಈ ಸಂಬಂಧ ವಿಭಾಗದ ಮುಖ್ಯಸ್ಥರು ಹಾಗೂ ಮೈಸೂರು ವಿವಿ ಕುಲಸಚಿವರಿಗೆ ಪತ್ರ ಬರೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ತಮ್ಮ ಪ್ರಾಧ್ಯಾಪಕರ ವಿರುದ್ಧ ಇದೀಗ ವಿಭಾಗದ ವಿದ್ಯಾರ್ಥಿನಿಯರು ಕುಲಸಚಿವರಿಗೆ ದೂರು ನೀಡಿರುವ ಮಾಹಿತಿ ಲಭಿಸಿದೆ.[ಅಶ್ಲೀಲ ವೆಬ್ ಸೈಟ್ ನಲ್ಲಿ ಮೈಸೂರು ವಿದ್ಯಾರ್ಥಿನಿಯರ ಚಿತ್ರ!]

Photos in obscene website case: student accuses University professor

ದೂರಿನಲ್ಲೇನಿದೆ :

ತಮಗೆ ತಮ್ಮ ವಿಭಾಗದ ಪ್ರಾಧ್ಯಾಪಕರೇ ಭೇದಭಾವ ತೋರಿಸುತ್ತಿದ್ದು, ನಾವುಗಳು ಅವರ ಮಾರ್ಗದರ್ಶನದಲ್ಲಿ ಪ್ರಾಜೆಕ್ಟ್ ಕೆಲಸ ನಿರ್ವಹಿಸಲು ಮುಂದಾಗುತ್ತಿಲ್ಲ. ಈ ಸಲುವಾಗಿಯೇ ಅವರು ನಮ್ಮ ಜತೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಜತೆಗೆ ನಮ್ಮೆಲ್ಲರನ್ನು ಚಾರಿತ್ರ್ಯಹೀನರು ಎಂದು ಬಿಂಬಿಸುವುದಾಗಿ ಧಮ್ಕಿಹಾಕಿದ್ದಾರೆ.

ಅಷ್ಟೇ ಅಲ್ಲದೇ ಇದಕ್ಕಾಗಿ ನಾನು ಯಾವುದೇ ಮಟ್ಟ ತಲುಪಲು ಸಿದ್ಧ ಎಂಬುದಾಗಿ ತರಗತಿಯಲ್ಲೇ ಬೆದರಿಕೆ ಹಾಕಿದ್ದರು. ಪೂರಕವಾಗಿ ತರಗತಿಯಲ್ಲಿ ನಡೆದ ಇಂಟರ್ನಲ್ಸ್ ಪರೀಕ್ಷೆಯಲ್ಲಿ ನಮಗೆ ಅತೀ ಕಡಿಮೆ ಅಂಕಗಳನ್ನು ನೀಡಿ ಸೇಡು ತೀರಿಸಿಕೊಂಡಿದ್ದರು ಎಂದು ಪ್ರತಿಯಲ್ಲಿ ದೂರಿದ್ದಾರೆ.

ತರಗತಿಯಲ್ಲಿ ಪಾಠ ಮಾಡುವಾಗ ಅಶ್ಲೀಲ ಜೋಕ್ಸ್ ಗಳನ್ನು ಹೇಳುತ್ತಿದ್ದರು. ಅವರ ಈ ಜೋಕ್ ವಿದ್ಯಾರ್ಥಿನಿಯರಿಗೆ ಮುಜುಗರ ಉಂಟು ಮಾಡುತ್ತಿತ್ತು. ಪ್ರಾಧ್ಯಾಪಕರ ಈ ವರ್ತನೆ ಬಗ್ಗೆ ನಮಗೆ ಅಸಮಾಧಾನವಿದ್ದರೂ ನಮ್ಮ ಭವಿಷ್ಯದ ಸಲುವಾಗಿ ಯಾವುದೇ ವಿಷಯವನ್ನು ಬಹಿರಂಗ ಪಡಿಸದೆ ಮೌನವಾಗಿ ಸಹಿಸಿಕೊಂಡಿದ್ದೆವು.ಆದರೆ ಇದೀಗ ನಮ್ಮ ಚಾರಿತ್ರ್ಯಹರಣ ಮಾಡುವ ಘಟನೆ ನಡೆದಿರುವುದು, ಸತ್ಯ ಹೇ ಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದು, ಈ ಪ್ರಾಧ್ಯಾಪಕರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ವಿನಂತಿಸಿದ್ದಾರೆ.

ಘಟನೆಯ ಹಿನ್ನೆಲೆ :

ಪರಿಸರ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರ ವಿದ್ಯಾರ್ಥಿನಿಯರ ಮೊಬೈಲ್ ಫೋನ್ ಗೆ ಅನಾಮಧೇಯ ಕರೆಗಳು ಹಾಗೂ ಅಶ್ಲೀಲ ಸಂದೇಶಗಳು ಕೆಲ ದಿನಗಳ ಹಿಂದೆ ಬರ ತೊಡಗಿದ್ದವು. ಇದರಿಂದ ಆತಂಕಗೊಂಡ ವಿದ್ಯಾರ್ಥಿನಿಯರು, ಇದರ ಹಿನ್ನೆಲೆ ಬೆನ್ನಟಿದಾಗ ಅಶ್ಲೀಲ ವೆಬ್ ಸೈಟ್ ಒಂದಕ್ಕೆ ಇವರ ಭಾವಚಿತ್ರ ಹಾಗೂ ದೂರವಾಣಿ ಸಂಖ್ಯೆಯನ್ನು ಅಪ್ಲೋಡ್ ಮಾಡಿರುವುದು ತಿಳಿಯಿತು. ಈ ವಿಷಯವನ್ನು ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿಗೆ ಮೊದಲೇ ಗಮನಕ್ಕೆ ತಂದಿದ್ದರು.

English summary
Mysuru University students depressed by their photos which have uploaded in an obscene website. And they are frequently getting unanimous calls and also obscene messages. Now one of the professors of University has accused.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X