ಮೈಸೂರಿನಲ್ಲಿ ಇಂಧನ ಬೆಲೆ ಏರಿಕೆಗೆ ವಿರೋಧ: ಪ್ರತಿಭಟನೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜನವರಿ 17 : ಕೇಂದ್ರ ಸರ್ಕಾರ ಮತ್ತೆ ಮತ್ತೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಸೇನಾಪಡೆ ವತಿಯಿಂದ ಮಂಗಳವಾರ ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಎದರು ಪ್ರತಿಭಟನೆ ನಡೆಸಿ ಮನವಿಯನ್ನು ಸಲ್ಲಿಸಿದರು.[ಪೆಟ್ರೋಲ್, ಡೀಸೆಲ್ ದರ, ಮತ್ತೊಮ್ಮೆ ಅಲ್ಪ ಪ್ರಮಾಣದ ಏರಿಕೆ]

Petrol, diesel price hike took place to protest in mysuru

ಕೇಂದ್ರ ಸರ್ಕಾರವು ಪ್ರತೀ ತಿಂಗಳು ಇಂಧನ ದರವನ್ನು ಏರಿಕೆ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ. ಈ ಹಿಂದೆ 3 ತಿಂಗಳಿಗೋ ಅಥವಾ 6 ತಿಂಗಳಿಗೊಮ್ಮೆ ಇಂಧನ ದರಗಳಲ್ಲಿ ಏರಿಕೆಯಾಗುತ್ತಿತ್ತು. ಆದರೇ ಈಗ ಪ್ರತಿ ತಿಂಗಳಲ್ಲಿ ಎರಡು ಬಾರಿ ಏರಿಕೆಯಾಗುತ್ತಿರುವುದರಿಂದ ಗ್ರಾಹಕರು ತತ್ತರಿಸುತ್ತಿದ್ದಾರೆ. ಆದ ಕಾರಣ ಇನ್ನು ಮುಂದಾದರೂ ಕೇಂದ್ರ ಸರ್ಕಾರ ಇಂಧನ ದರದಲ್ಲಿ ಏರಿಕೆಯಾಗದಂತೆ ನೋಡಿಕೊಳ್ಳಬೇಕೆಂದು ಸೇನಾಪಡೆಯ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಒತ್ತಾಯಿಸಿದರು.

ಈ ಸಂದರ್ಭ ಇಂಧನ ದರ ಏರಿಕೆ ಮಾಡದಂತೆ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿ ಮೋದಿ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ 30 ಕ್ಕೂ ಅಧಿಕ ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

English summary
Petrol, Diesel price hike agentst to protest by Karnataka Senapade in Mysuru
Please Wait while comments are loading...