ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಮರ್ಷಿಯಲ್ ಪೈಲಟ್ ಆಗಬೇಕೆ? ಕೂಡಲೇ ಅರ್ಜಿ ಹಾಕಿ

By Mahesh
|
Google Oneindia Kannada News

ಮೈಸೂರು, ಜೂನ್ 14: ನಿಮಗೆ ಆಗಸದಲ್ಲಿ ಹಾರಾಟ ಮಾಡಲು ಆಸಕ್ತಿ ಇದೆಯೇ? ನೀವು ಹಾರಾಟ ವೃತ್ತಿಪರರಾಗಲು ಸಿದ್ಧರಿದ್ದೀರಾ? ಹಾಗಾದರೆ ನೀವು ಓರಿಯೆಂಟ್ ಫ್ಲೈಟ್ ಸ್ಕೂಲ್ ಗೆ ಬನ್ನಿ.

ಇದೀಗ 2016-17 ನೇ ಶೈಕ್ಷಣಿಕ ಸಾಲಿನಲ್ಲಿ ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಕೋರ್ಸ್ ಗಳಿಗೆ ಪ್ರವೇಶಾತಿಯನ್ನು ಆರಂಭಿಸಿದೆ. ಅರ್ಹ ಅಭ್ಯರ್ಥಿಗಳು ಈ ಕೋರ್ಸಿಗೆ ಪ್ರವೇಶ ಪಡೆಯಲು ಅರ್ಜಿ ಸಲ್ಲಿಸಬಹುದು.

ಓರಿಯೆಂಟ್ ಫ್ಲೈಟ್ ಸ್ಕೂಲ್-ಇದು ದೇಶದ ಅತ್ಯಂತ ಹಳೆಯದಾದ ಮತ್ತು ಪ್ರಮುಖವಾದ ಖಾಸಗಿ ವಲಯದ ವೈಮಾನಿಕ ತರಬೇತಿ ಶಿಕ್ಷಣ ಸಂಸ್ಥೆಯೆಂಬ ಹೆಗ್ಗಳಿಕೆ ಹೊಂದಿದೆ.

ಇಲ್ಲಿ ಪದವಿ ಪಡೆದ ನಂತರ ಯಾವುದೇ ಏರ್ ಲೈನ್ ಕಂಪನಿಗಳಲ್ಲಿ ವೈಮಾನಿಕ ವೃತ್ತಿಯನ್ನು ಆರಂಭಿಸುವ ಅವಕಾಶ ಲಭಿಸುತ್ತದೆ. ಇದರ ಜತೆಗೆ ಚೆನ್ನೈನ ಹಿಂದೂಸ್ತಾನ್ ಯೂನಿವರ್ಸಿಟಿಯಲ್ಲಿ ಯುಜಿಸಿ ಮಾನ್ಯತೆ ಪಡೆದ ಬಿ.ಎಸ್ಸಿ (ಏವಿಯೇಷನ್) ಪದವಿಯನ್ನೂ ಪಡೆಯುಬಹುದಾಗಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಸಂಸ್ಥೆಯ ವೆಬ್ ಸೈಟ್ www.orientflights.com ನಲ್ಲಿ ಅರ್ಜಿ ಪ್ರತಿಯನ್ನು ಡೌನ್ ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಬಹುದು.

Orient Flight School Opens Admission to Commercial Pilots Course

ಭಾರತದಲ್ಲಿ ಪೈಲಟ್ ಗಳಾಗಬೇಕೆಂಬ ಕನಸು ಕಂಡಿರುವವರಿಗಾಗಿ ಓರಿಯೆಂಟ್ ಫ್ಲೈಟ್ ಸ್ಕೂಲ್ ಸೂಕ್ತ ತರಬೇತಿಯನ್ನು ನೀಡಲಿದೆ. ಅಭ್ಯರ್ಥಿಗಳು ಎರಡು ವರ್ಷದ ಕಮರ್ಷಿಯಲ್ ಪೈಲಟ್ ಲೈಸೆನ್ಸ್, 6 ತಿಂಗಳ ಪ್ರೈವೇಟ್ ಪೈಲಟ್ ಲೈಸೆನ್ಸ್ ಅಥವಾ ಈ ಕ್ಷೇತ್ರಕ್ಕೆ ಹೊಸಬರೆನಿಸಿಕೊಂಡವರು ಸ್ಟೂಡೆಂಟ್ ಪೈಲಟ್ ಲೈಸೆನ್ಸ್ ಕೋರ್ಸ್ ಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ವಿದ್ಯಾರ್ಹತೆ
16 ವರ್ಷ ಪೂರ್ಣಗೊಳಿಸಿದ ಮತ್ತು 12 ನೇ ತರಗತಿ ಪೂರ್ಣಗೊಳಿಸಿದ ಅಥವಾ ತತ್ಸಮಾನದಲ್ಲಿ ಗಣಿತ ಮತ್ತು ಭೌತಶಾಸ್ತ್ರವನ್ನು ಓದಿರುವ ಅಭ್ಯರ್ಥಿಗಳು ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಕೋರ್ಸ್‍ಗೆ ಅರ್ಜಿ ಸಲ್ಲಿಸಬಹುದಾಗಿದೆ. ಇದು 2 ವರ್ಷದ ಕೋರ್ಸ್ ಆಗಿದ್ದು, ತರಬೇತಿ ಅವಧಿಯಲ್ಲಿ ಒಟ್ಟು 200 ಗಂಟೆಗಳ ವೈಮಾನಿಕ ಹಾರಾಟ ತರಬೇತಿ ಇರುತ್ತದೆ. ಲಿಖಿತ ಪರೀಕ್ಷೆಯೂ ಇರಲಿದ್ದು ಏರ್ ರೆಗ್ಯುಲೇಶನ್, ಏರ್ ನ್ಯಾವಿಗೇಶನ್, ಏರ್ ಕ್ರಾಫ್ಟ್ ಅಂಡ್ ಇಂಜಿನ್ಸ್, ರೇಡಿಯೋ ಟಿಲಿಫೋನಿ ಸೇರಿದಂತೆ ಇನ್ನಿತರೆ ವಿಷಯಗಳ ಮೇಲೆ ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಶನ್ ನಡೆಸುವ ಪರೀಕ್ಷೆಗಳಿರುತ್ತವೆ.

ಫ್ರಾನ್ಸ್ ನಿರ್ಮಿತ ಅಲ್ಸಿಂ ಅಲ್ ಎಂಬ ಅತ್ಯಾಧುನಿಕ ಫ್ಲೈಟ್ ಸಿಮ್ಯುಲೇಟರ್ ನಿಂದ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಈ ತರಬೇತಿ ನಂತರ ಅಭ್ಯರ್ಥಿಗಳು ಪ್ರಮುಖ ಏರ್ ಕ್ರಾಫ್ಟ್ ಸಂಸ್ಥೆಗಳಲ್ಲಿ ಕಮರ್ಷಿಯಲ್ ಪೈಲಟ್‍ಗಳಾಗಿ ಉದ್ಯೋಗ ಗಳಿಸಲು ವಿಪುಲ ಅವಕಾಶಗಳಿವೆ.

Orient Flight School Opens Admission to Commercial Pilots Course

ಪ್ರೈವೇಟ್ ಪೈಲಟ್ ಲೈಸೆನ್ಸ್ ಕೋರ್ಸ್
ವಿಮಾನ ಹಾರಾಟವನ್ನು ಹವ್ಯಾಸವಾಗಿ ಬೆಳೆಸಿಕೊಳ್ಳಲು ಇಚ್ಛಿಸುವವರಿಗೆ 6 ತಿಂಗಳ ಕೋರ್ಸ್ ಕೂಡ ಇಲ್ಲಿದೆ. 16 ವರ್ಷ ಪೂರ್ಣಗೊಂಡು ಮತ್ತು 10 ನೇ ತರಗತಿ ಓದಿರುವ ಯಾವುದೇ ಅಭ್ಯರ್ಥಿ ಈ ಕೋರ್ಸಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ತರಬೇತಿ ಅವಧಿಯಲ್ಲಿ 50 ಗಂಟೆಗಳ ವಿಮಾನ ಹಾರಾಟ ತರಬೇತಿ ಇರುತ್ತದೆ. ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್ ನಡೆಸುವ ಏರ್ ರೆಗ್ಯುಲೇಶನ್, ಏರ್ ನ್ಯಾವಿಗೇಶನ್, ಏರ್ ಕ್ರಾಫ್ಟ್ ಅಂಡ್ ಇಂಜಿನ್ಸ್, ರೇಡಿಯೋ ಟಿಲಿಫೋನಿ ಲಿಖಿತ ಪರೀಕ್ಷೆಗಳು ಇರುತ್ತವೆ.

ಓರಿಯೆಂಟ್ ಫ್ಲೈಟ್ ಸ್ಕೂಲ್ ಸ್ಟೂಡೆಂಟ್ ಪೈಲಟ್ ಲೈಸೆನ್ಸ್ ಕೋರ್ಸನ್ನೂ ನೀಡಲಿದ್ದು, ವಿದ್ಯಾರ್ಥಿಗಳು ಈ ಕೋರ್ಸಿಗೆ ಸೇರಿಕೊಳ್ಳಬಹುದು. 16 ವರ್ಷ ಪೂರ್ಣಗೊಂಡ ಮತ್ತು 10 ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಈ ಅವಕಾಶ ಇರುತ್ತದೆ. ಇದರ ಒಂದು ವಿಶೇಷವೆಂದರೆ, ವಿದ್ಯಾರ್ಥಿಗಳು ರಜೆ ಸಮಯದಲ್ಲಿ ಈ ಕೋರ್ಸನ್ನು ಮಾಡಬಹುದು.

ಕಮರ್ಷಿಯಲ್ ಪೈಲಟ್ ಆಗಬೇಕೆ? ಕೂಡಲೇ ಅರ್ಜಿ ಹಾಕಿ

English summary
Are you passionate about Flying? Are you looking for a Flying start to your career? Then Orient Flight School is the place to be in. Orient Flight School - one of India's oldest and premier Flying School in the private sector has announced the dates for the admission to the Commercial Pilot License Course for the Academic Year 2016 - 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X