ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒನ್ ಇಂಡಿಯಾ ಫಲಶೃತಿ: ಸರಿಹೋಯ್ತು ಮೈಸೂರು ವಿವಿ ಕ್ಲಾಕ್ ಟವರ್

By Yashaswini
|
Google Oneindia Kannada News

ಮೈಸೂರು, ಮೇ 27 : ಮೈಸೂರು ವಿವಿಯ ಕ್ಲಾಕ್ ಟವರ್ ಅಂತೂ ತನ್ನ ಶಬ್ದವನ್ನು ಮತ್ತೊಮ್ಮೆ ಶುರುಮಾಡಿಕೊಂಡಿದೆ.

ಕಳೆದ ಮೇ 15 ರಂದು 'ತನ್ನ ಶಬ್ಧ ನಿಲ್ಲಿಸಿದ ಮೈಸೂರು ವಿವಿ ಕ್ಲಾಕ್ ಟವರ್' ಎಂಬ ಶೀರ್ಷಿಕೆಯಡಿ 'ಒನ್ ಇಂಡಿಯಾದಲ್ಲಿ' ಪ್ರಕಟಗೊಂಡಿದ್ದ ವರದಿ ನೋಡಿದ ವಿವಿ ಸಿಬ್ಬಂದಿ ವರ್ಗ ಗಡಿಯಾರವನ್ನು ಅಂತೂ ರಿಪೇರಿ ಮಾಡಿಸಿ ತಹಬದಿಗೆ ತಂದಿದ್ದಾರೆ.[ಮೈಸೂರು ವಿವಿ ಗಡಿಯಾರದ ಟಿಕ್ ಟಿಕ್ ಶಬ್ದವೀಗ ಸ್ತಬ್ಧ!]

OneIndia Impact : Mysuru university clock tower has been repaired

ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದ ಜನಾಕರ್ಷಣೆಯ ಕೇಂದ್ರ ಬಿಂದು, ಕ್ಲಾಕ್ ಟವರ್ ನ ಗಡಿಯಾರ ಕೆಟ್ಟುಹೋಗಿತ್ತು. ಕೊನೆಗೆ ಮಾಧ್ಯಮಗಳಲ್ಲಿ ಸುದ್ದಿಯಾದ ನಂತರ ಎಚ್ಚೆತ್ತುಕೊಂಡಿರುವ ಮೈಸೂರು ವಿಶ್ವವಿದ್ಯಾನಿಲಯ ಅಧಿಕಾರಿಗಳು ಇದೀಗ ಗಡಿಯಾರವನ್ನ ರಿಪೇರಿ ಮಾಡಿಸಿದ್ದಾರೆ.

ಸುಮಾರು 70 ಲಕ್ಷ ವೆಚ್ಚದಲ್ಲಿ ಹೆಚ್.ಎಂ.ಟಿ ಕಂಪನಿಯ ಗಡಿಯಾರವನ್ನು ಈ ಹಿಂದೆ ಕುಲಪತಿಗಳಾಗಿದ್ದ ಪ್ರೊ.ಕೆ.ಎಸ್.ರಂಗಪ್ಪ ಅವರ ಅವಧಿಯಲ್ಲಿ ನಿರ್ಮಿಸಲಾಗಿತ್ತು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಇದನ್ನು ಉದ್ಘಾಟಿಸಿದ್ದರು.

OneIndia Impact : Mysuru university clock tower has been repaired

ವಾಯುವಿಹಾರಿಗಳು, ವಿದ್ಯಾರ್ಥಿಗಳಿಗೆ ಇದು ಆಕರ್ಷಕ ತಾಣವಾಗಿತ್ತು. ಆದರೆ ಈ ಗಡಿಯಾರ ಕೆಟ್ಟು ನಿಂತರೂ ಸಹ ವಿವಿಯ ಆಡಳಿತಾಧಿಕಾರಿಗಳು ಶೀಘ್ರ ಕ್ರಮ ಕೈಗೊಂಡಿರಲಿಲ್ಲ. ಇದೀಗ ಗಂಗೋತ್ರಿ ಗಡಿಯಾರ ರಿಪೇರಿಯಾಗಿ ಟಿಕ್ ಟಿಕ್ ಸದ್ದು ಮಾಡುತ್ತಿದ್ದು. ಇದು ಇಲ್ಲಿನವರಿಗೆ ಸಂತಸ ತಂದಿದೆ.

English summary
Clock tower of Mysore University has begun its Tik Tik sound again. Earlier University Clock Tower stopped its working. After it had been reported in medias authorities repaired it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X