ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ಬಾರಿ ಯಾರಿಗೆ ಸಿಗಲಿದೆ ನಂಜುಂಡೇಶ್ವರ ಪ್ರಸಾದ ?

ಕಾಂಗ್ರೆಸ್ ಹಾಗೂ ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಕಣವಾಗಿರುವ ಹಾಗೂ ಮುಂದಿನ ರಾಜ್ಯ ರಾಜಕೀಯಕ್ಕೆ ಹೊಸ ತಿರುವು ಕೊಡಬಲ್ಲ ನಂಜನಗೂಡು ಉಪ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಎಲ್ಲರ ಕುತೂಹಲ ಕೆರಳಿಸಿದೆ.

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಮಾರ್ಚ್ 25 : ಇಡೀ ರಾಜ್ಯವೇ ಎದುರುನೋಡುತ್ತಿರುವ ನಂಜನಗೂಡು ಉಪಚುನಾವಣೆಗೆ ದಿನಗಣನೆ ಆರಂಭವಾಗಿದೆ. ಕೈ ಹಾಗೂ ಕಮಲಪಾಳಯಕ್ಕೆ ಈ ಚುನಾವಣೆಯೂ ಪ್ರತಿಷ್ಠಯ ಪ್ರಶ್ನೆಯಾಗಿ ತೆಗೆದುಕೊಂಡಿರುವುದರಲ್ಲಿ ಯಾವುದೇ ಸಂಶಯವಿಲ್ಲ.

ಏಪ್ರಿಲ್ 9ರಂದು ಈ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಲಿದೆ. ಏ. 13ರಂದು ಮತ ಎಣಿಕೆ ಕಾರ್ಯ ನಡೆಯಲಿದೆಯಲಿದ್ದು, ಅಂದೇ ಫಲಿತಾಂಶವೂ ಹೊರಬೀಳುವ ನಿರೀಕ್ಷೆಯಿದೆ.

ಸರಕಾರದ ನಿರ್ಲಕ್ಷ್ಯದಿಂದಿಂದ ಬೇಸೆತ್ತು ಮಾಜಿ ಸಚಿವ, ಹಿರಿಯ ರಾಜಕೀಯ ಮುತ್ಸದ್ಧಿ ಹಾಗೂ ಕಾಂಗ್ರೆಸ್ ಪ್ರಭಾವಿ ಮುಖಂಡರೆಸಿಕೊಂಡಿದ್ದ ಶ್ರೀನಿವಾಸ್ ಪ್ರಸಾದ್, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ.[ನಂಜನಗೂಡಿನಲ್ಲಿ ಲಿಂಗಾಯತ, ದಲಿತ ಮತಗಳ ಹಿಡಿತ ಯಾರಿಗೆ?]

One India analysis of Nanjanagudu byelection

ಪ್ರಸಾದ್ ಛಾಪು: ಮೂಲ ಕಾಂಗ್ರೆಸ್ಸಿಗರಾಗಿ ಸುಮಾರು ನಾಲ್ಕು ದಶಕಗಳ ಕಾಲ ರಾಜಕಾರಣದಲ್ಲಿದ್ದು, ಸಂಸದನಾಗಿ, ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸಿದ, 2008 ಮತ್ತು 2013ರ ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಂಗ್ರೆಸ್ನಿಂದ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಸ್ಫರ್ಧಿಸಿ ಶಾಸಕರಾಗಿ ಆಯ್ಕೆಯಾಗಿ ಸಿದ್ಧರಾಮಯ್ಯ ಸರಕಾರದಲ್ಲಿ ಕಂದಾಯ ಮಂತ್ರಿಯಾಗಿದ್ದವರು ಶ್ರೀನಿವಾಸ್. ಮೈಸೂರು ಹಾಗೂ ನಂಜನಗೂಡು ಭಾಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಪ್ರಸಾದ್, ತಮ್ಮ ಕ್ಷೇತ್ರದ ಜೊತೆಗೆ ಎಲ್ಲ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ದುಡಿದ ರಾಜಕಾರಣಿ ಎಂಬಲ್ಲಿ ಎರಡು ಮಾತಿಲ್ಲ.

ಕೇಶವಮೂರ್ತಿಯತ್ತ ಎಲ್ಲರ ಚಿತ್ತ: ಇನ್ನು ಚುನಾವಣಾ ಅಖಾಡದಲ್ಲಿ ಶ್ರೀನಿವಾಸ್ ಪ್ರಸಾದ್ ನೇರ ಅಭ್ಯರ್ಥಿಯಾಗಿರುವ ಕಳಲೆ ಕೇಶವಮೂರ್ತಿ ಸಹ 2008 ಮತ್ತು 2013 ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಫರ್ಧಿಸಿ ಸತತ ಸೋಲನ್ನು ಅನುಭವಿಸಿ ಈಗ ಕಾಂಗ್ರೆಸ್ ನಿಂದ ಅಭ್ಯರ್ಥಿಯಾಗಿದ್ದಾರೆ. ಒಂದು ಬಾರಿ ನಂಜನಗೂಡು ವಿಧಾನಸಭಾ ಕ್ಷೇತ್ರದ ಇತಿಹಾಸವನ್ನು ಹಾಕಿದರೆ 1957ರಿಂದೀಚೆಗೆ ನಡೆದ 14 ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ 9 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.[ನಂಜನಗೂಡು ಗೆಲುವಿಗೆ ಬಿಜೆಪಿ-ಕಾಂಗ್ರೆಸ್ ನಿಂದ ಜಾತಿ ಲೆಕ್ಕಾಚಾರ]

One India analysis of Nanjanagudu byelection

1957 ರಿಂದೀಚೆಗಿನ ಆಯ್ಕೆಯ ಪಟ್ಟಿ : 1957ರಲ್ಲಿ ಕಾಂಗ್ರೆಸ್ಸಿನ ಪಿ. ಮಹದೇವಯ್ಯ(15391), 1962ರಲ್ಲಿ ಕೈ ಪಾಳಯದ ರಾಚಯ್ಯ ( 14855), 1967ರಲ್ಲಿ ಎಲ್. ಶ್ರೀಕಂಠಯ್ಯ ( ಸ್ವತಂತ್ರ - 12787), 1972ರಲ್ಲಿ ಕಾಂಗ್ರೆಸ್ ನ ಕೆ.ಬಿ ಶಿವಯ್ಯ ( 16334 ), 1978 ರಲ್ಲಿ ಕಾಂಗ್ರೆಸ್ ( ಐ) ಪಕ್ಷದಿಂದ ಕೆ. ಬಿ. ಶಿವಯ್ಯ (12854), 1983ರಲ್ಲಿ ಕಾಂಗ್ರೆಸ್ ನ ಬೆಂಕಿ ಮಹದೇವು (19124), 1985ರಲ್ಲಿ ಜನತಾ ಪಾರ್ಟಿಯ ಡಿ.ಟಿ ಜಯಕುಮಾರ್ (29644), 1989ರಲ್ಲಿ ಕಾಂಗ್ರೆಸ್ ನ ಬೆಂಕಿ ಮಹದೇವು ( 36176 ), 1994ರಲ್ಲಿ ಜನತಾದಳದ ಡಿ.ಟಿ ಜಯಕುಮಾರ್ ( 56513 ), 1999ರಲ್ಲಿಯೂ ಸಹ ಕಾಂಗ್ರೆಸ್ ನ ಬೆಂಕಿ ಮಹದೇವು (34701 ), 2004ರಲ್ಲಿ ಜೆಡಿಎಸ್ ನ ಡಿ. ಜಿ ಜಯಕುಮಾರ್ ( 46,080), 2008ರ ಚುನಾವಣೆಯಲ್ಲಿ ಶ್ರೀನಿವಾಸ್ ಪ್ರಸಾದ್ ( 42867), 2013ರಲ್ಲಿಯೂ ಸಹ ಅವರೇ 50784 ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿರುವುದನ್ನು ಮತದಾರ ಮರೆತಿಲ್ಲ.[ಮಾ. 27 ರಂದು ಗುಂಡ್ಲುಪೇಟೆಗೆ ಕೃಷ್ಣಾಗಮನ!]

ಇದು ಎರಡನೇ ಉಪಚುನಾವಣೆ: ನಂಜನಗೂಡು ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲೇ ಇದು ಎರಡನೇ ಉಪಚುನಾವಣೆ 1957ರಲ್ಲಿ ಕಾಂಗ್ರೆಸ್ ನಿಂದ ಪಿ. ಮಹದೇವಯ್ಯ ಚುನಾಯಿತರಾಗಿ 6 ತಿಂಳಲ್ಲೇ ಅಕಾಲಿಕ ಮರಣಕ್ಕೆ ತುತ್ತಾಗಿದ್ದರು . ಆಗ ಎಲ್.ಶ್ರೀಕಂಠಯ್ಯ ಆಯ್ಕೆಯಾಗಿದ್ದರು. ಒಟ್ಟು 14 ಚುನಾವಣೆಯಲ್ಲಿ 9 ಕಾಂಗ್ರೆಸ್, 3 ಜನತಾ ಪಕ್ಷ ಹಾಗೂ ಮೂವರು ಸ್ವತಂತ್ರ ಅಭ್ಯರ್ಥಿ ಆಯ್ಕೆಯಾಗಿದ್ದವರು.

ಒಟ್ಟಾರೆ ಗೆದ್ದು ಬೀಗಿದವರಿಗೆ ಸೋಲಿನ ಕಹಿ, ಸೋತರೂ ನೋವು ನಲಿವಿಗೆಸ್ಪಂದಿಸಿದವರಿಗೆ ಗೆಲುವಿನ ಸಿಹಿ, ನೀಡುವ ಮತದಾರರು ಇರುವ ನಂಜನಗೂಡು ವಿಧಾನಸಭಾ ಕ್ಷೇತ್ರ ಕ್ಷೇತ್ರದಲ್ಲಿ ಶಾಶಕರ ಪುನರಾಯ್ಕೆಗೆ ಹೆಚ್ಚು ಮಣೆ ಹಾಕಿಲ್ಲ ಎಂಬುದು ಮಾತ್ರ ಸ್ಪಷ್ಟ.

English summary
Nanjanagudu byelection is getting nearer. The election temperature within the Congress and BJP has been rised. A mere curiousity has been created among the common people and they have immersed themselves in their own predictions. Here, One India analyse the situation with a breif history of this constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X