ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾನುವಾರುಗಳಿಗಾಗಿ ಒಂದೂವರೆ ರುಗೆ ಒಂದು ಕೆಜಿ ಮೇವು: ಸಿದ್ದು

By Ananthanag
|
Google Oneindia Kannada News

ಮೈಸೂರು, ಜನವರಿ, ಪ್ರಸ್ತುತ ರೈತರಿಗೆ ರು 3 ದರದಲ್ಲಿ 21 ಕೆಜಿ ಒಣ ಮೇವನ್ನು ಒದಗಿಸಲಾಗುತ್ತಿದ್ದು, ಈ ದರವನ್ನು 1.5 ರೂಪಾಯಿಗೆ ಇಳಿಸಿ ಮೇವು ಕೊಡಲು ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಮೈಸೂರಿನಲ್ಲಿ ನಡೆಯುತ್ತಿರುವ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಸರ್ಕಾರ ಪ್ರತಿ ಕೆಜಿ ಹುಲ್ಲಿಗೆ ರು 6 ಪಾವತಿಸಿ ಖರೀದಿಸುತ್ತದೆ. ಆದರೆ ರೈತರ ಅನುಕೂಲಕ್ಕಾಗಿ ಪ್ರಸ್ತುತ 3/-ರೂಪಾಯಿಗೆ ಮೇವು ಬ್ಯಾಂಕ್ ಗಳ ಮೂಲಕ ನೀಡಲಾಗುತ್ತಿದೆ. ಈ ದರವನ್ನು ರು.1.5 ರೂಪಾಯಿಗೆ ಇಳಿಸಲು ಉದ್ದೇಶಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.[ಲಾಲೂಜಿ ಒಬ್ಬ ಹೀರೋ, ಹೀರೋ ಆಗೇ ಇರ್ತಾರೆ!]

One and half rupees per kg of grass for farmers cattle: cm Siddaramaiah

ಮಿನಿಕಿಟ್:
ಇನ್ನೂ ಎರಡು ತಿಂಗಳ ವರೆಗೆ ಮೇವು ಸಾಕಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಆ ನಂತರವೂ ಸಮಸ್ಯೆಯಾಗದಂತೆ ಸರ್ಕಾರಿ ಜಮೀನುಗಳಲ್ಲಿ ಹಾಗೂ ಖಾಸಗಿ ಜಮೀನಲ್ಲಿ ಉಚಿತವಾಗಿ ಮಿನಿ ಕಿಟ್ ನೀಡಿ, ಮೇವು ಬೆಳೆಸಬೇಕು ಎಂದು ಮುಖ್ಯಮಂತ್ರಿಗಳು ಹೇಳಿದರು.

ರಾಜ್ಯದಲ್ಲಿ ಈಗಾಗಲೇ ರಾಜ್ಯದಲ್ಲಿ ರೈತರು ಬರಗಾಲದಿಂದ ತತ್ತರಿಸುತ್ತಿದ್ದು, ಬೆಳೆ ಮೇಲಿನ ದರವನ್ನು ಇಳಿಸಿರುವುದು ಸ್ವಾಗತಾರ್ಹ ಅದರೆ ರಾಜ್ಯದೆಲ್ಲಡೆ ಮೇವು ಕೇಂದ್ರಗಳ ಪ್ರಮಾಣ ಕಡಿಮೆ ಇದ್ದು ಅದನ್ನು ಹೆಚ್ಚಿಸಬೇಕಾಗಿದೆ.

English summary
One and half rupees per kg of grass for farmers cattle say chief Minister siddramaiah in mysuru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X