ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಹಳ್ಳಿ ಹಕ್ಕಿ' ವಿಶ್ವನಾಥ್ ಜೊತೆ ಸಿದ್ದರಾಮಯ್ಯ 'ಟೂ' ಬಿಟ್ಟಿದ್ದೇಕೆ?

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, 'ಮಾಜಿ ಸಂಸದ ಎಚ್.ವಿಶ್ವನಾಥ್ ಪಕ್ಷ ತೊರೆಯುವ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ, ನಾನು ಅವರೊಂದಿಗೆ ಮಾತನಾಡುವುದಿಲ್ಲ' ಎಂದಿದ್ದಾರೆ.

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 9 : ವಿಶ್ವನಾಥ್ ಜೊತೆಗೆ ನಾನು ಮಾತನಾಡುವುದಿಲ್ಲ. ನನಗೆ ಹೈಕಮಾಂಡ್ ಈ ವಿಚಾರವಾಗಿ ತಿಳಿಸಿಯೂ ಇಲ್ಲ, ವಿಶ್ವನಾಥ್ ಕಾಂಗ್ರೆಸ್ ತೊರೆಯುವ ಕುರಿತು ತಮಗೆ ಮಾಹಿತಿಯಿಲ್ಲ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ವಿಶ್ವನಾಥ್ ಪಕ್ಷ ತೊರೆಯುತ್ತೇನೆ ಎನ್ನುತ್ತಿದ್ದಾರಲ್ಲ, ಅವರ ಬಳಿ ಮಾತುಕತೆ ನಡೆಸಿದ್ದೀರಾ ಎಂಬ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಮಾಜಿ ಸಂಸದ ಅಡಗೂರು ಎಚ್.ವಿಶ್ವನಾಥ್ ನನ್ನೊಂದಿಗೆ ಮಾತನಾಡಿಲ್ಲ. ನಾನೂ ಯಾರೊಂದಿಗೂ ಮಾತನಾಡಲ್ಲ. ನನ್ನ ನಡವಳಿಕೆ ಸರಿಯಿದೆಯೋ ಇಲ್ಲವೋ ಅನ್ನುವುದನ್ನು ಹೈಕಮಾಂಡ್ ನಿರ್ಧರಿಸಲಿದೆ.ವಿಶ್ವನಾಥ್ ಅವರ ದೂರುಗಳ ಬಗ್ಗೆ ನೋ ಕಾಮೆಂಟ್ಸ್, ಅದರ ಬಗ್ಗೆ ನಾನು ಏನೂ ಹೇಳಲ್ಲ ಎನ್ನುವ ಮೂಲಕ ತಾವು ವಿಶ್ವನಾಥ್ ಅವರೊಂದಿಗೆ ಮಾತುಕತೆಗೆ ತಯಾರಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದರು.[ವೇಣುಗೋಪಾಲ್ ಅವರಿಗೆ ವಿಶ್ವನಾಥ್ ಬರೆದ ಪತ್ರದಲ್ಲೇನಿದೆ?]

No comments: This is Siddaramaiah's reaction on Vishwanath issue!

ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಮೇಲೆ ದೂರು ದಾಖಲಾಗಿರುವ ಕುರಿತೂ ಪ್ರತಿಕ್ರಿಸಿದ ಅವರು, "ನನ್ನ ಮಗನ ಮೇಲೆ ನೀಡಿರುವ ದೂರು ರಾಜಕೀಯ ದ್ವೇಷದಿಂದ ಕೂಡಿದೆ. ಇದೇ ಮೊದಲ ಬಾರಿಗೆ ಯತೀಂದ್ರ ವಿದೇಶ ಪ್ರವಾಸ ಮಾಡಿರುವುದು. ಮೊದಲ ಬಾರಿ ಪ್ರವಾಸ ಮಾಡಿ ಹೂಡಿಕೆ ಮಾಡಲು ಸಾಧ್ಯವೇ?" ಎಂದು ಪ್ರಶ್ನಿಸಿದರು.ಸುಮ್ಮನೆ ಆರೋಪ ಮಾಡಬೇಕೆಂದು ದೂರು ನೀಡಿದ್ದಾರೆ. ದೂರು ನೀಡಿರುವ ವ್ಯಕ್ತಿ ಯಾರೆಂದು ನನಗೆ ಗೊತ್ತಿಲ್ಲ. ಸುಳ್ಳು ಆರೋಪದ ಮೇಲೆ ದೂರು ನೀಡಿದರೆ ಏನು ಹೇಳುವುದು? ಯತೀಂದ್ರ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು ಮತ್ತು ಆಧಾರರಹಿತ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ರಾಮಕೃಷ್ಣ ನಗರದಲ್ಲಿರುವ ನಿವಾಸದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಜನರ ಸಮಸ್ಯೆಗಳನ್ನು ಆಲಿಸಿದರು. ಮನವಿಯನ್ನು ಸ್ವೀಕರಿಸಿದ ಬಳಿಕ ಶೀಘ್ರದಲ್ಲಿಯೇ ಪರಿಹರಿಸುವ ಭರವಸೆಯನ್ನೂ ನೀಡಿದರು.

English summary
No comments! this is Karnataka CM Siddaramaiah's reaction about former MP H Vishwanath's issue. He was answering questions of media persons in Mysuru today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X