ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಣ್ಣಿಮೆ ದಿನ: ಶ್ರೀಕಂಠೇಶ್ವರನ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ

By ಮೈಸೂರು ಪ್ರತಿನಿಧಿ
|
Google Oneindia Kannada News

ನಂಜನಗೂಡು, ಮೇ 22: ಪುರಾಣ ಪ್ರಸಿದ್ದ ದಕ್ಷಿಣ ಕಾಶಿ ಎಂದೇ ಹೆಸರಾದ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಬುದ್ದ ಪೌರ್ಣಿಮೆಯ ಪ್ರಯುಕ್ತ ಶನಿವಾರ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.

ಭಕ್ತರು ಬಸ್ಸು, ರೈಲುಗಳಲ್ಲಿ, ಹಾಗೂ ಸ್ವಂತ ವಾಹನಗಳಲ್ಲಿ ಮುಂಜಾನೆಯಿಂದಲೇ ಆಗಮಿಸಿ ಕಪಿಲಾನದಿಯಲ್ಲಿ ಮಿಂದು, ಸಂಧ್ಯಾವಂದನೆ ನೆರವೇರಿಸಿದರು.[ಕೇಶವಿನ್ಯಾಸದಲ್ಲಿ ಎಕ್ಸ್‌ಪರ್ಟ್ ನಂಜನಗೂಡಿನ ತ್ರಿನೇತ್ರ!]

Nanjangud Srikanteshwaraswamy Temple Buddha Purnima Celebration

ದೇವಸ್ಥಾನದ ಮುಂಭಾಗದ ಆವರಣದಲ್ಲಿ ಉರುಳುಸೇವೆ, ತುಲಾಭಾರ, ಈಡುಗಾಯಿ ಸೇವೆ, ಪಂಚಾಮೃತ ಸೇವೆ, ಬಿಲ್ವಾರ್ಚನೆ, ದೇವಿಗೆ ಕುಂಕುಮಾರ್ಚನೆ, ಶ್ರೀಕಂಠೇಶ್ವರ ಸ್ವಾಮಿಗೆ ಪಟ್ಟು ಪೀತಾಂಬರ, ದೇವಿಗೆ ಸೀರೆ, ಮುಂತಾದವುಗಳನ್ನು ಸಲ್ಲಿಸಿ ಬೆಳ್ಳಿ ಅಂಗಾಂಗಳ ಹರಕೆಯನ್ನು ಹುಂಡಿಗೆ ಹಾಕಿದರು.[ನಿಸರ್ಗ ಪ್ರೇಮಿಗಳ ಸ್ವರ್ಗ ಹಿಮವದ್ ಗೋಪಾಲಸ್ವಾಮಿ ಬೆಟ್ಟ]

ಶ್ರೀಕಂಠೇಶ್ವರಸ್ವಾಮಿಯ ದರ್ಶನಕ್ಕೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ತಮ್ಮ ಇಷ್ಟಾರ್ಥಗಳನ್ನು ಪೂರೈಸುವಂತೆ ವಿವಿಧ ಸೇವೆಗಳಾದ ಎಳನೀರು, ಪಂಚಾಮೃತಾಭಿಷೇಕ, ಬಿಲ್ವಾರ್ಚನೆ, ಶಾಲ್ಯಾನ್ನ ಮುಂತಾದ ಸೇವೆಗಳನ್ನು ಸಲ್ಲಿಸಿದರು. [ನಂಜನಗೂಡಿನ ಶ್ರೀಕಂಠೇಶ್ವರನಿಗೆ ಜೈ ಎಂದ ಲಕ್ಷಾಂತರ ಭಕ್ತರು]

Nanjangud Srikanteshwaraswamy Temple Buddha Purnima Celebration

ಬುದ್ಧ ಪೂರ್ಣಿಮೆಯ ಅಂಗವಾಗಿ ಶ್ರೀಕಂಠೇಶ್ವರಸ್ವಾಮಿಗೆ ಚಿನ್ನದ ಕೊಳಗ ತೊಡಿಸಿ, ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆ ಮಾಡಲಾಯಿತು.

English summary
Devotees Throng Temple To Nanjangud Srikanteshwaraswamy Temple to participate in the annual Holy dip ritual on the eve of Buddha Purnima day(May 21) here in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X