ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂಜನಗೂಡು: 3.17 ಕೋಟಿ ಒಡೆಯ ವಿ. ಶ್ರೀನಿವಾಸ್ ಪ್ರಸಾದ್

ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ವಿ ಶ್ರೀನಿವಾಸ್ ಪ್ರಸಾದ್ 3.17 ಕೋಟಿ ಆಸ್ತಿ ಇರುವುದಾಗಿ ಹೇಳಿದ್ದರೆ, ಅವರ ಪ್ರತಿಸ್ಪರ್ಧಿ ಻ಅಭ್ಯರ್ಥಿ ಕಾಂಗ್ರೆಸಿನ ಕಳಲೆ ಕೇಶವ ಮೂರ್ತಿ 90 ಲಕ್ಷ ರೂಪಾಯಿಗಳ ಆಸ್ತಿ ಘೋಷಿಸಿಕೊಂಡಿದ್ದಾರೆ.

By Sachhidananda Acharya
|
Google Oneindia Kannada News

ಮೈಸೂರು, ಮಾರ್ಚ್ 22: ನಂಜನಗೂಡು ಉಪಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಿನ್ನೆಗೆ ಕೊನೆಗೊಂಡಿದೆ. ಬಿಜೆಪಿ, ಕಾಂಗ್ರೆಸ್ ಅಲ್ಲದೆ ಪಕ್ಷೇತರ ಶಾಸಕರು ಇಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರದೊಂದಿಗೆ ತಮ್ಮ ಆಸ್ತಿ ವಿವರವನ್ನೂ ಅಭ್ಯರ್ಥಿಗಳು ಘೋಷಿಸಿಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ವಿ ಶ್ರೀನಿವಾಸ್ ಪ್ರಸಾದ್ 3.17 ಕೋಟಿ ಆಸ್ತಿ ಇರುವುದಾಗಿ ಹೇಳಿದ್ದರೆ, ಅವರ ಪ್ರತಿಸ್ಪರ್ಧಿ ಅಭ್ಯರ್ಥಿ ಕಾಂಗ್ರೆಸಿನ ಕಳಲೆ ಕೇಶವ ಮೂರ್ತಿ 90 ಲಕ್ಷ ರೂಪಾಯಿಗಳ ಆಸ್ತಿ ಘೋಷಿಸಿಕೊಂಡಿದ್ದಾರೆ.[ನಾಮಪತ್ರ ಸಲ್ಲಿಕೆ: ಚಿತ್ರಗಳಲ್ಲಿ ಉಪಚುನಾವಣೆ ರಂಗು]

ನಂಜನಗೂಡು ಹಾಗೂ ಗುಂಡ್ಲುಪೇಟೆಯಲ್ಲಿ ಇಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು ಶುಕ್ರವಾರ ಅಂದರೆ ಮಾರ್ಚ್ 24 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಏಪ್ರಿಲ್ 9ರಂದು ಚುನಾವಣೆ ಹಾಗೂ ಏಪ್ರಿಲ್ 13ರಂದು ಮತ ಎಣಿಕೆ ನಡೆಯಲಿದೆ.[ನಾಮಪತ್ರ ಸಲ್ಲಿಕೆ ವೇಳೆ ಮಾತಿನ ಚಕಮಕಿ-ಲಘುಲಾಠಿ ಪ್ರಹಾರ]

3.17 ಕೋಟಿ ಆಸ್ತಿ

3.17 ಕೋಟಿ ಆಸ್ತಿ

ಶ್ರೀನಿವಾಸ್ ಪ್ರಸಾದ್ ತಮ್ಮ ಬಳಿ ಒಟ್ಟು 3.17 ಕೋಟಿ ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ. 2015-16ರಲ್ಲಿ ತಮಗೆ 34.7 ಲಕ್ಷ ರೂಪಾಯಿ ಆದಾಯವಿದ್ದುದಾಗಿಯೂ ಅವರು ತಮ್ಮಅಫಿದವಿತ್ ನಲ್ಲಿ ಹೇಳಿದ್ದಾರೆ. ಇನ್ನು ಕೈಯಲ್ಲಿ 1.32 ಲಕ್ಷ ರೂಪಾಯಿ ನಗದು ಇರುವುದಾಗಿ ಅಫಿದವಿತ್ ನಲ್ಲಿ ಉಲ್ಲೇಖಿಸಿದ್ದಾರೆ.[ರಂಗೇರಿದೆ ಕಣ: ಘಟಾನುಘಟಿಗಳಿಂದ ನಾಮಪತ್ರ ಸಲ್ಲಿಕೆ]

12 ಬ್ಯಾಂಕಿನಲ್ಲಿ ಖಾತೆ

12 ಬ್ಯಾಂಕಿನಲ್ಲಿ ಖಾತೆ

ಶ್ರೀನಿವಾಸ್ ಪ್ರಸಾದ್ 12 ಬ್ಯಾಂಕುಗಳಲ್ಲಿ ತಮ್ಮ ಖಾತೆ ಇದೆ ಎಂದು ಹೇಳಿದ್ದಾರೆ. ಶ್ರೀನಿವಾಸ್ ಪ್ರಸಾದ್ ಹೆಸರಿನಲ್ಲಿ ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿ ಬಿಪಿಸಿಎಲ್ ಸಂಸ್ಥೆಯ ಪ್ರಸಾದ್ ಗ್ಯಾಸ್ ಸರ್ವಿಸಸ್ ಎಂಬ ಅಡುಗೆ ಅನಿಲ ವಿತರಣಾ ಏಜೆನ್ಸಿ ಇದೆ. ಇನ್ನೋವಾ ಕ್ರಿಸ್ಟಾ ವಾಹನವಿದ್ದು ತಮಗೆ 8.60 ಲಕ್ಷ ಸಾಲ ಬಾಕಿ ಇದೆ ಎಂದಿದ್ದಾರೆ.

ಮೂರು ಮನೆ

ಮೂರು ಮನೆ

ತಮ್ಮ ಬಳಿಯಲ್ಲಿ ಮೂರು ಮನೆ ಇರುವುದಾಗಿಯೂ ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ. ಮೈಸೂರಿನ ಜಯಲಕ್ಷ್ಮೀಪುರಂನಲ್ಲಿ 1991ರಲ್ಲಿ ಖರೀದಿಸಿದ ಮನೆಯಿದೆ. ಇದರ ಇಂದಿನ ಮಾರುಕಟ್ಟೆ ಮೌಲ್ಯ 1.25 ಕೋಟಿ ರೂಪಾಯಿ. ಬೆಂಗಳೂರಿನ ಡಾಲರ್ಸ್ ಕಾಲನಿಯಲ್ಲಿ 2006ರಲ್ಲಿ ಖರೀದಿಸಲಾದ 60*55 ಅಳತೆಯ ನಿವೇಶನ ಇದ್ದು ಇಂದಿನ ಮಾರುಕಟ್ಟೆ ಮೌಲ್ಯ 1.17 ಕೋಟಿ ರೂಪಾಯಿ ಹಾಗೂ ಮೈಸೂರಿನ ಇಂಡಸ್ಟ್ರಿಯಲ್ ಸಬ್ ಅರ್ಬನ್ ನಲ್ಲಿ150*100 ಅಳತೆಯ ಕೈಗಾರಿಕಾ ನಿವೇಶನದಲ್ಲಿ ಮಂಗಳೂರು ಹಂಚಿನ ಮನೆ ಇದ್ದು 75 ಲಕ್ಷ ಮೌಲ್ಯ ಹೊಂದಿದೆ ಎಂದು ಹೇಳಿದ್ದಾರೆ. ಒಟ್ಟಾರೆ ತಮ್ಮ ಬಳಿ 3,33,69,390 ರೂಪಾಯಿ ಮೌಲ್ಯದ ಆಸ್ತಿ ಇದೆ ಎಂದಿದ್ದಾರೆ.

ಪತ್ನಿ ಆಸ್ತಿ ಎಷ್ಟು?

ಪತ್ನಿ ಆಸ್ತಿ ಎಷ್ಟು?

ಪತ್ನಿ ಡಿ ಭಾಗ್ಯ ಲಕ್ಷ್ಮೀ ಹೆಸರಿನಲ್ಲಿ 28,000 ನಗದು, ದೇನಾ ಬ್ಯಾಂಕಿನಲ್ಲಿ 6,501 ರೂ, ಮೊಹಲ್ಲಾ ಕಾರ್ಪೊರೇಷನ್ ಬ್ಯಾಂಕಿನಲ್ಲಿ 39,000, ಲಕ್ಷ್ಮೀಪುರಂ ಎಸ್ಬಿಎಂನಲ್ಲಿ 1 ಲಕ್ಷ, ಇಲ್ಲಿನ ಅಂಚೆ ಕಚೇರಿಯಲ್ಲಿ 5,785, ಆರ್.ಡಿ ಖಾತೆಯಲ್ಲಿ 1,050 ರೂ. ಹಾಗೂ ಚಾಮರಾಜ ಜೋಡಿ ರಸ್ತೆಯ ದೇನಾ ಬ್ಯಾಂಕ್ನಲ್ಲಿ 87,077 ರೂ ಇರುವುದಾಗಿ ಹೇಳಿದ್ದಾರೆ. ಅಲ್ಲದೆ 175 ಗ್ರಾಂ ಚಿನ್ನದ ಒಡವೆ, 4 ಕೆಜಿ ಬೆಳ್ಳಿ ಸಾಮಾಗ್ರಿ ಸೇರಿ 6,85,000 ಮೌಲ್ಯದ ಆಭರಣ ಇರುವುದಾಗಿಯೂ ಹೇಳಿದ್ದಾರೆ.

ಕಳಲೆ ಅವಿವಾಹಿತರು

ಕಳಲೆ ಅವಿವಾಹಿತರು

ಇತ್ತೀಚೆಗೆ ಜೆಡಿಎಸ್ ನಿಂದ ಕಾಂಗ್ರೆಸಿಗೆ ಬಂದಿರುವ ಕಳಲೆ ಕೇಶವ ಮೂರ್ತಿ ಅವಿವಾಹಿತರಾಗಿದ್ದಾರೆ. ಅವರಿಗೆ ಅವಲಂಬಿತರು ಯಾರೂ ಇಲ್ಲ. ಅವರ ಬಳಿ ಸ್ಕಾರ್ಪಿಯೋ ವಾಹನ ಇದೆ. ಜತೆಗೆ ಕೈಯಲ್ಲಿ 30 ಲಕ್ಷ ನಗದು ಇದ್ದು ಒಟ್ಟು ಮೌಲ್ಯ 34 ಲಕ್ಷ ರೂಪಾಯಿ ಆಗಿದೆ. ತಾವು ಈ ವರೆಗೆ ಆದಾಯ ತೆರಿಗೆ ಪಾವತಿಸಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

4.37 ಎಕರೆ ಕೃಷಿ, 1 ಮನೆ

4.37 ಎಕರೆ ಕೃಷಿ, 1 ಮನೆ

ನಂಜನಗೂಡು ತಾಲೂಕಿನ ಕರಳೆಪುರ ಗ್ರಾಮದಲ್ಲಿ 30 ಲಕ್ಷ ಮಾರುಕಟ್ಟೆ ಮೌಲ್ಯದ 4.37 ಎಕರೆ ಕೃಷಿ ಭೂಮಿ, ಕಳಲೆ ಗ್ರಾಮದಲ್ಲಿ ಹೆಂಚಿನ ಮನೆ ಇದೆ. ಇನ್ನು ಮೈಸೂರಿನಲ್ಲಿ 40*60 ಅಳತೆಯ ವಾಸದ ಮನೆ ಇದೆ. ಇವುಗಳ ಒಟ್ಟು ಮೌಲ್ಯ 60 ಲಕ್ಷ. ಹೀಗೆ ಒಟ್ಟು ಸೇರಿ ತಮ್ಮ ಬಳಿ 90 ಲಕ್ಷ ಮೌಲ್ಯದ ಾಸ್ತಿ ಇರುವುದಾಗಗಿ ಕಳಲೆ ಕೇಶವಮೂರ್ತಿ ಘೋಷಿಸಿದ್ದಾರೆ.

English summary
Former revenue minister and BJP contestant V Srinivasa Prasad filled his nomination for Nanjangud by-election. He has shown 3.17 crores asset in his affidavit. At the same time Congress contestant Kalale Keshavmurthy has shown just 90 lakhs asset in his affidavit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X