ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆರೆತೊಣ್ಣೂರಿನ ಶ್ರೀಲಕ್ಷ್ಮೀ ವಿಗ್ರಹ ಕಳ್ಳರ ಬಂಧನ

By ಮೈಸೂರು ಪ್ರತಿನಿಧಿ
|
Google Oneindia Kannada News

ಬೈಲಕುಪ್ಪೆ, ಡಿಸೆಂಬರ್ 12 : ಹದಿನಾಲ್ಕು ಶತಮಾನ ಪುರಾತನದ 18 ಕೆ.ಜಿ. 300 ಗ್ರಾಂ. ತೂಕವುಳ್ಳ ಶ್ರೀಲಕ್ಷ್ಮೀ ವಿಗ್ರಹವನ್ನು ಕದ್ದು ಮಾರಟ ಮಾಡಲು ಯತ್ನಿಸುತಿದ್ದ ಆರೋಪದ ಮೇಲೆ ಇಬ್ಬರನ್ನು ಭಾನುವಾರ ಬೈಲಕುಪ್ಪೆ ಪೋಲಿಸರು ಬಂಧಿಸಿದ್ದಾರೆ.

ಕೆ.ಆರ್. ಪೇಟೆ ತಾಲೂಕಿನ ಬೂಕನಕೆರೆ ನಿವಾಸಿ ಮಧು(25) ಮತ್ತು ಕೆಆರ್ ಪೇಟೆ ಪಟ್ಟಣ ನಿವಾಸಿ ಶರತ್(23) ಎನ್ನುವರು ತಾಲೂಕಿನ ಕೊಪ್ಪ ಗ್ರಾಮದಲ್ಲಿ ವಿಗ್ರಹವನ್ನು ಸರ್ಕಾರಿ ಬಸ್‌ನಲ್ಲಿ ತಂದು ಮಾರಾಟ ಮಾಡಲು ಯತ್ನಿಸಿದ್ದರು.

Nambi Narayana temple idol theft two accused arrested

ಘಟನೆ ವಿವರ: ಈ ವಿಗ್ರಹವು ವರ್ಷದ ಹಿಂದೆ ಮಂಡ್ಯ ಜಿಲ್ಲೆ, ಪಾಂಡವಪುರ ತಾಲೂಕಿನ ಕೆರೆತೊಣ್ಣೂರು ಗ್ರಾಮದಲ್ಲಿರುವ ನಂಬಿನಾರಯಣಸ್ವಾಮಿ ದೇವಾಲಯದಿಂದ ಕಾಣೆಯಾದ ಶ್ರೀಲಕ್ಷ್ಮೀ ವಿಗ್ರಹ ಎಂದು ತಿಳಿದುಬಂದಿದೆ.

ಇದು ರಾಮಾನುಜಾಚಾರ್ಯರ ಕಾಲದ ವಿಗ್ರಹ ಎನ್ನಲಾಗಿದ್ದು, ಅಪಾರ ಮೌಲ್ಯವುಳ್ಳದಾಗಿದೆ ಎಂದು ತಿಳಿದುಬಂದಿದೆ. ಪೊಲೀಸರ ವಿಚಾರಣೆ ವೇಳೆ ವರ್ಷದ ಹಿಂದೆ ಹಗಲು ಸಮಯದಲ್ಲೇ ವಿಗ್ರಹವನ್ನು ಕಳ್ಳತನ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡೊದ್ದಾರೆ

English summary
Bylakuppe police on Sunday arrest Madhu and Sharath for idols theft from “Nambi Narayana temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X