ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ವಿವಿಗೆ ಕರ್ನಾಟಕದ ನಂ.1 ಯೂನಿವರ್ಸಿಟಿ ಪಟ್ಟ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ.25: ಮೈಸೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಸಭೆ ವಿಶ್ವವಿದ್ಯಾಲಯದ ಕಾರ್ಯಸೌಧದಲ್ಲಿ ನಡೆಯಿತು. ಸಭೆಯಲ್ಲಿ 2017-18ರ ಶೈಕ್ಷಣಿಕ ವರ್ಷದ ವರದಿಯನ್ನು ಮಂಡಿಸಲಾಯಿತು.

ಮಾನವ ಅಭಿವೃದ್ಧಿ ಮಂತ್ರಾಲಯವು ನಮ್ಮ ರಾಜ್ಯದ 25 ವಿವಿಗಳ ಶೈಕ್ಷಣಿಕ ಸಾಮಾರ್ಥ್ಯದ ಸಮೀಕ್ಷೆ ನಡೆಸಿದೆ. ಇದರ ಪ್ರಕಾರ ಮೈಸೂರು ವಿವಿಗೆ ಪ್ರಥಮ ಸ್ಥಾನ ಲಭಿಸಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿ ಪ್ರೊ. ದಯಾನಂದ ಮಾನೆ ಸಂತಸ ವ್ಯಕ್ತಪಡಿಸಿದರು.

Mysuru University tops the list in 25 best universities of the state

ವಿವಿ ಕ್ರಾಫರ್ಡ್ ಸಭಾಂಗಣದಲ್ಲಿ ಶೈಕ್ಷಣಿಕ ಸಭೆಯಲ್ಲಿ ಮಾತನಾಡಿದ ಅವರು, ದೇಶದ 724 ವಿವಿಗಳ ಪೈಕಿ 36ನೇ ಸ್ಥಾನ ಪಡೆದಿತ್ತು. ರಾಜ್ಯದಲ್ಲಿ ಪ್ರಥಮ ಸ್ಥಾನ ಉಳಿಸಿಕೊಂಡು, ಶೈಕ್ಷಣಿಕ ವಲಯಲ್ಲಿ ವಿವಿ ಈ ವಿಶಿಷ್ಟ ಸಾಧನೆ ಮಾಡಿದೆ.

ಈ ಸಾಧನೆ ಏರುಗತಿ ಹೀಗೇ ಕಾಪಾಡಿಕೊಂಡು ಮುಂದಿನ ದಿನಗಳಲ್ಲಿ ಹೆಚ್ಚಿನ ಸ್ಥಾನ ಪಡೆಯಲು ಸಿಬ್ಬಂದಿ ಶ್ರಮಿಸಿಬೇಕಿದೆ ಎಂದು ಅವರು ನುಡಿದರು. ಶೈಕ್ಷಣಿಕ ಗುಣಮಟ್ಟ ಕಾಪಾಡಲು ಮುಂದಿನ ವರ್ಷದಿಂದ ನೆಟ್, ಸ್ಲೆಟ್, ಮೆರಿಟ್‌‌‌‌ನಲ್ಲಿ ಆದತ್ಯೆ ಇದ್ದರೆ ಮಾತ್ರ ಪರಿಗಣಿಸಿ, ಅಂತಹ ಉಪನ್ಯಾಸಕರಿಗೆ ಯುಜಿಸಿ ಸ್ಕೇಲ್ ಸೌಲಭ್ಯ ನೀಡಲಾಗುವುದು. 170 ಹೊಸ ಕಾಲೇಜುಗಳಿಗೆ ಅನುಮತಿ ನೀಡಲಾಗಿದೆ. ಅನುಮತಿ ಪಡೆದ ಕಾಲೇಜುಗಳು ವಿಶ್ವವಿದ್ಯಾನಿಲಯ ನೀಡಿದ ಷರತ್ತಿನನ್ವಯ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಕಾಲೇಜುಗಳಿಗೆ ಸಂಯೋಜನೆ ನೀಡುವ ಬಗೆಗೆ ಪರಿಶೀಲನೆ ಸಂದರ್ಭದಲ್ಲಿ ಖಾಸಗಿ ಕಾಲೇಜುಗಳಿಗೆ ಮನ್ನಣೆ ನೀಡಿ ಸರ್ಕಾರಿ ಕಾಲೇಜುಗಳನ್ನು ಕಡೆಗಣಿಸಿರುವ ವಿಷಯಗಳು ವಿಶ್ವವಿದ್ಯಾನಿಲಯದ ಸಭೆಯಲ್ಲಿ ಚರ್ಚೆಗೆ ಗಾಸವಾಗಿಯಿತು.

Mysuru University tops the list in 25 best universities of the state

ಸಭೆ ಆರಂಭವಾಗಿ ಕಾಲೇಜು ಅಭಿವೃದ್ಧಿ ಸಮಿತಿ(ಸಿಡಿಸಿ) ನಿರ್ದೇಶಕ ಪೊ.ಶ್ರೀಕಂಠಸ್ವಾಮಿ ವಿಷಯಗಳನ್ನುಮಂಡನೆ ಮಾಡುತ್ತಿದ್ದಂತೆ ಬಿಸಿಬಿಸಿ ಚರ್ಚೆ ಆರಂಭವಾಯಿತು. ಸ್ಥಳೀಯ ತನಿಖಾ ಸಮಿತಿ ಸಂಯೋಜನೆನೀಡಲು ಕಾಲೇಜುಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿಸಂಬಂಧಪಟ್ಟ ಡೀನ್‍ಗಳನ್ನು ಬೇಕೆಂದೇ ಕತ್ತಲೆಯಲ್ಲಿಟ್ಟುನಾಮ್ ಕೇ ವಾಸ್ತೆ' ವಿಚಾರಣೆ ನಡೆಸಿ ಅನುಮತಿ ನೀಡಲಾಗಿದೆ ಎಂದು ಡೀನ್‍ಗಳಾದ ಶಿಕ್ಷಣ ವಿಭಾಗದ ಪೊ.ನಿಂಗಮ್ಮ ಅವರು ನಿರ್ದೇಶಕರ ಮೇಲೆ ಗುರುತರ ಆರೋಪ ಮಾಡಿದರು.

ಕಾಲೇಜುಗಳಿಗೆ ಸ್ಥಳೀಯ ತನಿಖಾ ಸಮಿತಿ ನಿಗದಿತ ದಿನದಂದು ಭೇಟಿ ನೀಡುತ್ತಿರುವುದಾಗಿ ಕಾಲೇಜು ಅಭಿವೃದ್ಧಿ ಸಮಿತಿಗೆ ಮೊದಲು ನೋಟಿಸ್ ಕಳುಹಿಸಿ ನಂತರ ಹಿಂದಿನ ದಿನ ಅದೇ ಕಚೇರಿಯಿಂದ ಯಾರಾದರೂ ದೂರವಾಣಿ ಕರೆ ಮಾಡಿ ಭೇಟಿ ರದ್ದಾಗಿದೆ ಎಂದು ಮಾಹಿತಿ ನೀಡುತ್ತಾರೆ. ಆದರೆ ನಿಗದಿತ ದಿನದಂದೇ ಸಮಿತಿ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕರ್ತವ್ಯ ನಿಭಾಯಿಸಲು ನಾವು ಸಿದ್ಧರಿದ್ದರೂ ನಮ್ಮನ್ನು ಬೇಕೆಂದೇ ದೂರ ಇಟ್ಟಿದ್ದಾರೆ. ಇದರ ಉದ್ದೇಶ ಏನು ಎಂದು ನಿಂಗಮ್ಮ ಖಾರವಾಗಿಯೇ ಪ್ರಶ್ನಿಸಿದರು.

ಈ ಪರಿಶೀಲನೆ ಸಮಿತಿಗಳು ನಾಮ್ ಕೇ ವಾಸ್ತೆ' ಇರುವುದರಿಂದ ಈ ಬಾರಿಯ ವರದಿಯ ಬಗ್ಗೆ ಅನುಮಾನಗಳಿವೆ ಎಂದು ಕಟುವಾಗಿಯೇ ನಿರ್ದೇಶಕ ಶ್ರೀಕಂಠಸ್ವಾಮಿಯನ್ನು ತರಾಟಗೆ ತೆಗೆದುಕೊಂಡರು.

ಇನ್ನು ಇದೇ ವೇಳೆ 2017-18ನೇ ಸಾಲಿಗೆ ಸಂಯೋಜಿತ ಪದವಿ ಕಾಲೇಜುಗಳಲ್ಲಿರುವ ಸ್ನಾತಕೋತ್ತರ ಕೋರ್ಸ್‍ಗಳಿಗೆ ಹೆಚ್ಚುವರಿ ಪ್ರವೇಶಾತಿ ಸಂಖ್ಯೆಗೆ ಸಮಿತಿಯು ಶಿಫಾರಸ್ಸು ನಿರಾಕರಿಸುವುದಕ್ಕೂ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು.

English summary
The academic meeting of University of Mysore for the year 2017-18 held at Crawford hall. The annual report was presented in the meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X