ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: ವೇಶ್ಯಾವಾಟಿಕೆಯಲ್ಲಿ ಬಾಂಗ್ಲಾ ಮಹಿಳೆಯರೇ ಹೆಚ್ಚು

ಬಾಂಗ್ಲಾದೇಶದಿಂದ ವಲಸೆ ಬರುತ್ತಿರುವ ಹೆಚ್ಚು ಜನರು ಬೆಂಗಳೂರು, ಮೈಸೂರು, ಮಂಡ್ಯ ಕೊಡಗು ಜಿಲ್ಲೆಗಳಲ್ಲಿ ನೆಲೆಯೂರಿದ್ದು, ಹೆಚ್ಚಾಗಿ ಕಾನೂನು ಬಾಹಿರ ಚಟುವಟಿಕೆಗಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

By ಬಿ.ಎಂ. ಲವಕುಮಾರ್
|
Google Oneindia Kannada News

ಮೈಸೂರು, ನವೆಂಬರ್, 21: ಬಾಂಗ್ಲಾ ವಲಸಿಗರು ದೇಶದಾದ್ಯಂತ ಸುಮಾರು ಎರಡು ಕೋಟಿಯಷ್ಟು ಇದ್ದಾರೆ ಎಂಬ ಮಾಹಿತಿಗಳು ಹೊರಬೀಳುತ್ತಿದ್ದು, ಅವರ ಪೈಕಿ ಮೈಸೂರು, ಮಂಡ್ಯ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಯೂರಿದ್ದಾರೆ ಎಂಬುವುದನ್ನು ತಳ್ಳಿಹಾಕುವಂತಿಲ್ಲ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಕ್ರಮ ಚಟುವಟಿಕೆಯಲ್ಲಿ ಅವರ ಪಾಲು ಹೆಚ್ಚಿದೆ ಎನ್ನಲಾಗುತ್ತಿದೆ. ಅದರಲ್ಲೂ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಇತ್ತೀಚೆಗೆ ಲಾಡ್ಜ್, ರೆಸಾರ್ಟ್‍ಗಳಲ್ಲಿ ಸಿಕ್ಕಿ ಬಿದ್ದ ವೇಶ್ಯೆಯರ ಪೈಕಿ ಹೆಚ್ಚಿನವರು ಬಾಂಗ್ಲಾದವರೇ ಎಂಬುದರಲ್ಲಿ ಎರಡು ಮಾತಿಲ್ಲ.[ಮೈಸೂರಿನ ಮನೆಯಲ್ಲೇ ವೇಶ್ಯಾವಾಟಿಕೆ: ಮೂವರ ಬಂಧನ]

Mysuru: Most of the Bangla migrant women's involved in prostitution

ಬಾಂಗ್ಲಾ ಯುವತಿಯರನ್ನು ಮಾರಾಟ ಮಾಡುವ ಜಾಲವಿದ್ದು, ಅವರನ್ನು ಕೇವಲ 25ರಿಂದ 30 ಸಾವಿರಕ್ಕೆ ಲಾಡ್ಜ್ ಗಳಿಗೆ ಮಾರಾಟ ಮಾಡುವ ದಂಧೆಗಳಿವೆ. ಬಾಂಗ್ಲಾದಿಂದ ಬಂದು ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಳ್ಳುವ ಯುವತಿಯರು ಒಂದೆಡೆಯಾದರೆ ರಾಬರಿ, ಕಳ್ಳತನ ಮಾಡುವ ಯುವಕರು ಮತ್ತೊಂದೆಡೆ ಇದ್ದಾರೆ.

ಬೆಂಗಳೂರು ಮೂಲಕವೇ ರಾಜ್ಯದೊಳಕ್ಕೆ ಅಕ್ರಮ ಬಾಂಗ್ಲಾ ವಲಸಿಗರು ಬರುತ್ತಿದ್ದಾರೆ ಎನ್ನಲಾಗಿದೆ. ಕೆಲವು ಸ್ಲಂ ಏರಿಯಾಗಳು, ಕಾಲೋನಿಗಳಲ್ಲಿ ವಾಸ್ತವ್ಯ ಹೂಡಿರುವ ಇವರನ್ನು ಉತ್ತರ ಭಾರತದವರು ಎಂದುಕೊಂಡು ಜನ ಸುಮ್ಮನಾಗುತ್ತಿದ್ದಾರೆ. [ಮಂಡ್ಯದ ಮಾರುಕಟ್ಟೆಯಲ್ಲಿ ಟ್ರೋಲ್ ಗೊಳಗಾದ ರಮ್ಯಾ!]

ಅವರು ಎಲ್ಲಿಯವರು? ಏಕೆ ಬಂದರು? ಮೊದಲಾದ ಪ್ರಶ್ನೆಗಳನ್ನು ಯಾರು ಕೇಳುತ್ತಿಲ್ಲ. ಕಾರ್ಮಿಕರ ಕೊರತೆಯಿರುವ ಕಾರಣ ಪೂರ್ವಾಪರ ಅರಿಯದೆ ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಜೆಲ್ಲಿ ಕ್ರಷರ್‍ಗಳು, ಕೋಳಿ ಫಾರಂಗಳು ಸೇರಿದಂತೆ ಕಠಿಣ ಕೆಲಸಗಳು ಮಾಡುವ ಸ್ಥಳಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಿದ್ದಾರೆ.

ಮಂಡ್ಯ, ಮೈಸೂರು, ಕೊಡಗಿನ ಕಾಫಿ ತೋಟಗಳಲ್ಲೂ ಇವರಿದ್ದಾರೆ. ತಾವು ನೆಲೆನಿಂತು ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿರುವ ಇವರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ಇವರಿಂದ ಮುಂದೆ ದೇಶಕ್ಕೆ ಭಾರೀ ಗಂಡಾಂತರ ತಪ್ಪಿದಲ್ಲ್ಲ.

ವೇಶ್ಯಾವಾಟಿಕೆ ದಂಧೆಯಲ್ಲಿ ಯುವತಿಯರು ಸಿಕ್ಕಿಬಿದ್ದ ಸಂದರ್ಭ ಪೊಲೀಸರು ಅವರನ್ನು ತೀವ್ರ ವಿಚಾರಣೆಗೊಳಪಡಿಸಿ ಎಲ್ಲಿಂದ ಹೇಗೆ ಬಂದರು? ಹಿಂದಿರುವ ಜಾಲಗಳ ಪತ್ತೆ ಹಚ್ಚಿ ಅಕ್ರಮ ವಲಸಿಗರನ್ನು ತಡೆಯಬೇಕಾಗಿದೆ. ಆದರೆ ಅದು ಸಮರ್ಪಕವಾಗಿ ಆಗದ ಕಾರಣಗಳಿಂದ ವಲಸಿಗರು ಹೆಚ್ಚಾಗುತ್ತಿದ್ದಾರೆ.

Mysuru: Most of the Bangla migrant women's involved in prostitution

ಇದೀಗ ನೋಟು ಸಮಸ್ಯೆ ತಲೆದೋರುತ್ತಿದ್ದಂತೆಯೇ ಅಕ್ರಮ ವಲಸಿಗರು ಬೇರೆ ದಾರಿ ಕಾಣದೆ ತಮ್ಮ ದೇಶದತ್ತ ಹಿಂತಿರುಗುತ್ತಿದ್ದಾರೆ. ಆದರೆ ಪಾತಕಿಗಳು ಇಲ್ಲಿಯೇ ಇದ್ದು ದೇಶಕ್ಕೆ ಸಂಚಕಾರ ತರಲು ಸಿದ್ಧತೆ ನಡೆಸುತ್ತಿದ್ದಾರೆ.

ದೂರದ ವ್ಯಕ್ತಿಗಳನ್ನು ಕೆಲಸಕ್ಕೆ ಸೇರಿಸಿಕೊಳ್ಳುವ ಮೊದಲು ಅವರು ಯಾರು ಎಂಬುದರ ಬಗ್ಗೆ ಪೂರ್ವಾಪರ ತಿಳಿದುಕೊಳ್ಳುವುದು ಅಗತ್ಯವಿದೆ.

ಹೊರಗಿನಿಂದ ಬಂದವರ ಗುರುತಿನ ಚೀಟಿ, ಪಾಸ್‍ಪೋರ್ಟ್‍ಗಳನ್ನು ಪರಿಶೀಲನೆ ನಡೆಸಿ ಅನುಮಾನ ಬಂದರೆ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಇವರಿಂದ ತೊಂದರೆ ತಪ್ಪಿದಲ್ಲ.

English summary
Most of the Bangla migrant women's involved in prostitution in Mysuru, Mandya, Kodagu region, and also involved in robbery, theft and other crime activities
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X