ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯೋಗ ಪ್ರದರ್ಶನ: ಮೈಸೂರು ಕೈತಪ್ಪಿದ ಗಿನ್ನಿಸ್ ದಾಖಲೆ ಗರಿ

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ. ಅತಿ ಹೆಚ್ಚು ಅಭ್ಯರ್ಥಿಗಳಿಂದ ಯೋಗ ಕಾರ್ಯಕ್ರಮ ನೀಡುವ ಮೂಲಕ ಗಿನ್ನಿಸ್ ದಾಖಲೆ ಮಾಡಲೆತ್ನಿಸಿದ್ದ ಮೈಸೂರು ಜಿಲ್ಲಾಡಳಿತಕ್ಕೆ ಹಿನ್ನಡೆ.

By Yashaswini
|
Google Oneindia Kannada News

ಮೈಸೂರು, ಜೂನ್ 23: ಮಹತ್ತರ ಅಭಿಲಾಷೆಯಿಂದ ಮೈಸೂರಿನಲ್ಲಿ ನಡೆದ ಯೋಗ ದಿನಾಚರಣೆಗೆ ಗಿನ್ನಿಸ್ ದಾಖಲೆಯ ಗೌರವ ತರುವ ನಿಟ್ಟಿನಲ್ಲಿ ಮೈಸೂರು ಜಿಲ್ಲಾಡಳಿತ ಕೈಗೊಂಡಿದ್ದ ಕೈಂಕರ್ಯಕ್ಕೆ ಹಿನ್ನಡೆಯಾಗಿದೆ.

ಯೋಗ ದಿನಾಚರಣೆ ಹಿನ್ನೆಲೆಯಲ್ಲಿ, ಮೈಸೂರಿನ ಅರಮನೆ ಆವರಣದಲ್ಲಿ ಸುಮಾರು 54 ಸಾವಿರಕ್ಕೂ ಹೆಚ್ಚು ಜನರನ್ನು ಸೇರ್ಪಡೆಗೊಳಿಸಿ ಯೋಗ ಪ್ರದರ್ಶನ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇದು ದಾಖಲೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು.

ಯೋಗ ದಿನ: ರಾಜ್ ಪಥ್ ಹಿಂದಿಕ್ಕಿ ಗಿನ್ನಿಸ್ ದಾಖಲೆ ಬರೆದ ಮೈಸೂರುಯೋಗ ದಿನ: ರಾಜ್ ಪಥ್ ಹಿಂದಿಕ್ಕಿ ಗಿನ್ನಿಸ್ ದಾಖಲೆ ಬರೆದ ಮೈಸೂರು

Mysuru missed out Guinness record on the event of International Yoga day

ಆದರೆ, ದಾಖಲೆ ಗಳಿಸುವ ಯೋಗ ಈ ಬಾರಿ ಗುಜರಾತ್ ರಾಜ್ಯಕ್ಕೆ ಸಂದಿದೆ. 3ನೇ ಅಂತರಾಷ್ಟ್ರೀಯ ವಿಶ್ವ ಯೋಗಾ ದಿನದಂದು ಅಹ್ಮದಾಬಾದ್ ನ ಜಿಎಂಡಿಸಿ ಮೈದಾನದಲ್ಲಿ 54,522ರಷ್ಟು ದಾಖಲೆ ಜನರು ಒಂದುಗೂಡಿ ಯೋಗ ಪ್ರದರ್ಶನ ನೀಡಿ ಗಿನ್ನಿಸ್ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ.

ಯೋಗಾ ಗುರು ಬಾಬಾ ರಾಮ್ ದೇವ್ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಈ ಹಿನ್ನೆಲೆಯಲ್ಲಿ, ಅಲ್ಲಿ ಭಾರೀ ಜನರು ಸೇರಿದ್ದರು. ಗಿನ್ನಿಸ್ ಸಂಸ್ಥೆ ರಾಮ್ ದೇವ್ ಮತ್ತು ಗುಜರಾತ್ ನ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರಿಗೆ ದಾಖಲೆಯನ್ನು ದೃಢೀಕರಿಸುವ ಪ್ರಮಾಣಪತ್ರವನ್ನು ನೀಡಿದೆ.

ಯೋಗ ದಿನಾಚರಣೆ: ಗಿನ್ನಿಸ್ ದಾಖಲೆಯತ್ತ ಮೈಸೂರು ದಾಪುಗಾಲುಯೋಗ ದಿನಾಚರಣೆ: ಗಿನ್ನಿಸ್ ದಾಖಲೆಯತ್ತ ಮೈಸೂರು ದಾಪುಗಾಲು

ಲೆಕ್ಕಾಚಾರದ ಪ್ರಕಾರ ನೋಡಿದರೆ, ಅಹ್ಮದಾಬಾದ್ ನಲ್ಲಿ ಸೇರಿದ್ದ ಜನರು, ಮೈಸೂರುಗಿಂತ ಇದು ಕೇವಲ 421ರಷ್ಟು ಜನರು ಹೆಚ್ಚಿದ್ದರು. ಮೈಸೂರಿಗಿಂತ ಅಹ್ಮದಾಬಾದ್ ನಲ್ಲಿನ ಜನರೇ ಹೆಚ್ಚಿದ್ದರಿಂದಾಗಿ ಆ ಯೋಗ ಪ್ರದರ್ಶನ ಕಾರ್ಯಕ್ರಮಕ್ಕೆ ಗಿನ್ನಿಸ್ ದಾಖಲೆಯ ಗರಿ ಸಿಕ್ಕಿದೆ.

English summary
Mysuru missed out to obtain Guinness record for record 54 thousand participants in recently concluded International Yoga day celebration. Ahmadabad, which successfully organized the yoga day with 54,522 participants got the prestigious award.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X