ಮೈಸೂರು ಮೇಯರ್ ಬಿ.ಎಲ್ ಭೈರಪ್ಪ ಕಾರಿಗೆ ಟಿಪ್ಪರ್ ಡಿಕ್ಕಿ

Written by: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜನವರಿ,12: ಹಿಂದಿನಿಂದ ಬಂದ ಟಿಪ್ಪರ್ ಮೈಸೂರು ಮೇಯರ್ ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಘಟನೆ ತಾಲೂಕಿನ ರಾಗಿಮುದ್ದನಹಳ್ಳಿಯ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸೋಮವಾರ ನಡೆದಿದ್ದು, ಅದೃಷ್ಟ ವಶಾತ್ ಮೇಯರ್ ಸೇರಿದಂತೆ ಜೊತೆಗಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೈಸೂರು ಮೇಯರ್ ಬೈರಪ್ಪ ಅವರೇ ಪ್ರಾಣಾಪಾಯದಿಂದ ಪಾರಾದವರಾಗಿದ್ದು, ಇವರು ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅವಘಡದಿಂದ ಭೈರಪ್ಪ ಅವರು ಕೆಲ ಹೊತ್ತು ಪ್ರಜ್ಞಾಹೀನರಾಗಿದ್ದರು. ಬಳಿಕ ಚೇತರಿಸಿಕೊಂಡರು.[ಮೈಸೂರು ಮಹಾನಗರ ಪಾಲಿಕೆ ಗದ್ದುಗೆಯಲ್ಲಿ ಸಿದ್ದುಗೆ ಮುಖಭಂಗ]

Accident

ರಾಗಿಮುದ್ದನಹಳ್ಳಿಯ ಮೈಸೂರು-ಬೆಂಗಳೂರು ಹೆದ್ದಾರಿ ಬಳಿ ಮೈಸೂರು ಗುತ್ತಿಗೆದಾರರಿಗೆ ಸೇರಿದ ಟಿಪ್ಪರ್ ಕಲ್ಲಿನ ಕೋರೆಗೆ ತೆರಳುತ್ತಿತ್ತು. ಟಿಪ್ಪರ್ ಚಾಲಕ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಬಲಗಡೆಗೆ ತಿರುಗಿಸಿದ್ದಾನೆ. ಇದರಿಂದಾಗಿ ಮೇಯರ್ ಕಾರಿಗೆ ಟಿಪ್ಪರ್ ಡಿಕ್ಕಿ ಹೊಡೆಯಿತು.[ಮಾಯಾವಿ ಮಾತಿಗೆ ಮರುಳಾಗಿ ಹಣ ಕಳೆದುಕೊಂಡ ಗಂಡಸರೆಷ್ಟು?]

ಮೇಯರ್ ಜೊತೆಯಲ್ಲಿ ಮಾಜಿ ಮೇಯರ್ ಟಿ.ಬಿ. ಚಿಕ್ಕಣ್ಣ ಹಾಗೂ ಕೃಷ್ಣಪ್ಪ ಇದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಬಿ.ಎಲ್ ಬೈರಪ್ಪ ಅವರು ನವೆಂಬರ್ ತಿಂಗಳಲ್ಲಿ ಮೈಸೂರಿನ ಮೇಯರ್ ಆಗಿ ಆಯ್ಕೆಯಾಗಿದ್ದರು.

English summary
Mysuru Mayor B.L Byrappa's car accident in Raagimuddanahalli Taluk, near Mysuru-Bengaluru highway on Tuesday, January 12th.
Please Wait while comments are loading...