ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಾರಾಣಿ ಕಾಲೇಜು ವಿದ್ಯಾರ್ಥಿನಿ ಡೆಂಗ್ಯೂಗೆ ಬಲಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 27: ಇಲ್ಲಿನ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿ ಸಂಚಿತಾ ಎಸ್. ಆರಾಧ್ಯ ಡೆಂಗ್ಯೂ ಜ್ವರದಿಂದ ಮೃತಪಟ್ಟಿದ್ದಾಳೆ. ದ್ವಿತೀಯ ವರ್ಷದ ಬಿಎಸ್ ಸಿ ವಿದ್ಯಾರ್ಥಿಯಾಗಿದ್ದ ಸಂಚಿತಾ, ಮಹಾರಾಣಿ ವಿಜ್ಞಾನ ಹಾಸ್ಟೆಲ್ ನ ಕಾಲೇಜಿನಲ್ಲಿ ಎರಡು ವರ್ಷಗಳಿಂದ ವಾಸವಾಗಿದ್ದರು.

ಹಾಸ್ಟೆಲ್ ನಲ್ಲಿ ಕಲುಷಿತ ನೀರು ಸೇವಿಸಿ, ಜ್ವರ ಬಂದಿತ್ತು. ಇದರಿಂದಲೇ ಆಕೆ ಸಾವನ್ನಪ್ಪಿದ್ದಾಳೆ ಎಂದು ದೂರಲಾಗಿದೆ. ಇನ್ನೂ ಇಪ್ಪತ್ತು ವಿದ್ಯಾರ್ಥಿನಿಯರಿಗೆ ಜ್ವರ ಬಂದಿದ್ದು, ಅವರ ಪೋಷಕರು ಆತಂಕದಲ್ಲಿದ್ದಾರೆ. ಒಟ್ಟಾರೆ ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.[ಮಂಡ್ಯದ ನಾಗತಿಹಳ್ಳಿ ಗ್ರಾಮಸ್ಥರನ್ನು ಕಂಗೆಡಿಸಿದ ಜ್ವರ]

Mysuru Maharani college student dies due to dengue

ಅಂದಹಾಗೆ, ಕಳೆದ ವರ್ಷ ದೇಶದಲ್ಲೇ ಸ್ವಚ್ಛ ನಗರ ಎನಿಸಿ, ನಂಬರ್ ಒನ್ ಸ್ಥಾನದಲ್ಲಿದ್ದ ಮೈಸೂರು, ಈ ಬಾರಿ ಐದನೇ ಸ್ಥಾನಕ್ಕೆ ಕುಸಿದಿತ್ತು ಎಂಬುದನ್ನು ಈ ಪ್ರಕರಣದ ಸಂದರ್ಭದಲ್ಲಿ ಮತ್ತೆ ನೆನಪಿಸಿಕೊಳ್ಳಬಹುದು. ಸ್ವಚ್ಛತೆ ಕೊರತೆ, ಅಶುದ್ಧ ನೀರು ಮತ್ತಿತರ ಕಾರಣಗಳಿಂದ ಡೆಂಗ್ಯೂ ಜ್ವರ ಹರಡುತ್ತದೆ.[ಮಾರಕ ರೋಗಗಳ ತಡೆಗೆ ಸಸ್ಯ ತಂತ್ರಜ್ಞಾನ]

ಈ ರೋಗಕ್ಕೆ ಯುವತಿಯೊಬ್ಬಳು ಬಲಿಯಾಗಿದ್ದಾಳೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರಾ?

English summary
Sanchita S Aradhya, second year B.SC student dies due to dengue in Mysuru. She was studying in Maharani college and was staying in college hostel for last two years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X