ಮೈಸೂರಿನ ಹುಳಿಮಾವುನಲ್ಲಿ ಭಯ ಹುಟ್ಟಿಸಿದ ಡೆಂಗ್ಯೂ!

Posted By:
Subscribe to Oneindia Kannada

ಮೈಸೂರು, ಆಗಸ್ಟ್ 07 : ನಂಜನಗೂಡು ತಾಲೂಕು ಹುಳಿಮಾವು ಹಾಗೂ ಬೊಕ್ಕಹಳ್ಳಿ ಗ್ರಾಮದಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು, ಬಡ ಹಿಂದುಳಿದ ವರ್ಗದವರೇ ವಾಸವಿರುವ ಗ್ರಾಮದಲ್ಲಿ ಇದೀಗ ಆತಂಕ ಎದುರಾಗಿದೆ.

ಸೊಳ್ಳೆ ನಿಯಂತ್ರಿಸಲು ಮಂಡ್ಯದ ಗೌಡರ ವಿನೂತನ ಪ್ರತಿಭಟನೆ

ಈಗಾಗಲೇ ಕಾಲೋನಿಯಲ್ಲಿ ಸುಮಾರು 50 ರಿಂದ 60 ಜನ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ. ಗ್ರಾಮದಲ್ಲಿ ಬಡವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು ಸಂಬಂಧಿಸಿದ ಅಧಿಕಾರಿಗಳು ಬಂದು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Mysuru, Hulimavu village is facing a huge problem of dengue cases these days

ಇದೇ ಗ್ರಾಮದಲ್ಲಿ ಸುಮಾರು 6 ವರ್ಷದ ಹಿಂದೆ ಕಿರಿಯ ಪ್ರಾಥಮಿಕ ಚಿಕಿತ್ಸಾ ಕೇಂದ್ರವು ಆರಂಭವಾಗಿದ್ದರೂ ಇದಕ್ಕೆ ವೈದ್ಯರು ಮತ್ತು ಸಿಬ್ಬಂದಿಯನ್ನು ನೇಮಿಸದ ಕಾರಣದಿಂದ ಆರೋಗ್ಯ ಕೇಂದ್ರ ಇದ್ದು ಇಲ್ಲದಂತಾಗಿದೆ.

ಡೆಂಗ್ಯೂ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳಿವು...

ಗ್ರಾಮದಲ್ಲಿನ ಜನ ಹಲವು ರೀತಿಯ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುತ್ತಿದ್ದರೂ ಇತ್ತ ಗಮನಹರಿಸುವವರೇ ಇಲ್ಲದಂತಾಗಿದೆ. ರಾತ್ರಿಯ ವೇಳೆಯಲ್ಲಿ ಗರ್ಭಿಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡರೆ ಮೈಸೂರಿಗೆ ತೆರಳಬೇಕಾದ ಪರಿಸ್ಥಿತಿ ಎದುರಾಗಿದೆ.

Mysuru, Hulimavu village is facing a huge problem of dengue cases these days

ಈ ಬಗ್ಗೆ ಹಲವು ಬಾರಿ ಇಲಾಖೆಯ ಮೇಲಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಕ್ಷೇತ್ರದ ಜನಪ್ರತಿನಿಧಿಗಳು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಆಸ್ಪತ್ರೆಗೆ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಜಿಲ್ಲಾ ದ.ಸಂ.ಸಮಿತಿಯ ಅಧ್ಯಕ್ಷರಾದ ಬೊಕ್ಕಹಳ್ಳಿ ಲಿಂಗಯ್ಯರವರು ಆಗ್ರಹಿಸಿದ್ದಾರೆ.

Viral Fever, Dengue and Chikungunya Hits Bengaluru

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mysuru district Hulimavu is facing a huge problem of dengue cases these days. The people of the district are worrying dengue fever now.
Please Wait while comments are loading...