ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: ಕಸದ ಗಾಡಿಯಲ್ಲಿ ಹೆಣ್ಣು ಮಗು ಪತ್ತೆ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ, 11: ಮೈಸೂರು ನಗರಪಾಲಿಕೆಗೆ ಸೇರಿದ ಕಸ ಸಂಗ್ರಹಣೆ ವಾಹನದಲ್ಲಿ ಕೆಲವೇ ತಾಸುಗಳ ಹಿಂದೆ ಜನಿಸಿದ ಹೆಣ್ಣು ಮಗು ಸೋಮವಾರ ಪತ್ತೆಯಾಗಿದ್ದು ಆಧುನಿಕ ಸಮಾಜದ ದುರಂತದ ಕತೆಯನ್ನು ಮತ್ತೊಮ್ಮೆ ಹೇಳಿದೆ.

ಸಯ್ಯಾಜಿ ರಾವ್ ರಸ್ತೆಯಲ್ಲಿ ವಾಹನವನ್ನು ನಿಲ್ಲಿಸಿದ್ದಾಗ ಯಾರೋ ಮಗುವನ್ನು ತಂದು ವಾಹನದೊಳಕ್ಕೆ ಹಾಕಿದ್ದಾರೆ ಎಂದು ಕಸದ ಗಾಡಿ ಚಾಲಕ ಸರವಣ ತಿಳಿಸಿದ್ದಾರೆ.[ಬಾಡಿಗೆ ತಾಯಿಂದ ಮಗು ಪಡೆದರೂ 6 ತಿಂಗಳ ಹೆರಿಗೆ ರಜೆ]

ಎರಡು ತಾಸಿನ ನಿರಂತರ ಕೆಲಸದ ನಂತರ ಮಧ್ಯೆ ಟೀ ಕುಡಿಯಲೆಂದು ವಾಹನವನ್ನು ನಿಲ್ಲಿಸಿದ್ದೇವು. ಯಾರೋ ಬಂದು ಬ್ಯಾಗೊಂದನ್ನು ವಾಹನಕ್ಕೆ ಹಾಕಿ ಹೋಗಿದ್ದಾರೆ. ನಾವು ಪರಿಶೀಲನೆ ಮಾಡಿದಾಗ ಮಗು ಕಂಡುಬಂದಿದೆ ಎಂದು ಹೇಳಿದ್ದಾರೆ.[ಹುಬ್ಬಳ್ಳಿ ಕಿಮ್ಸ್ ನಲ್ಲಿ ಮಗು ಕದ್ದವಳ ಸಾವಿನ ಕತೆ]

ಮಗುವನ್ನು ಚಾಲಕ ಕೆ ಆರ್ ಪೊಲೀಶ್ ಸ್ಟೇಶನ್ ಗೆ ತೆಗೆದುಕೊಂಡು ಹೋಗಿದ್ದಾರೆ. ನಂತರ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಗುವನ್ನು ಕೃಷ್ಣ ರಾಜೇಂದ್ರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುತ್ತಮುತ್ತಲ ನರ್ಸಿಂಗ್ ಹೋ ಒಂದರಲ್ಲಿಯೇ ಮಗು ಜನಿಸಿದೆ, ನಾವು ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಕೆ ಆರ್ ಠಾಣೆ ಪೊಲೀಸರು ತಿಳಿಸಿದ್ದಾರೆ. [ಅಂದು ತುಂಬಿ ತುಳುಕುತ್ತಿದ್ದ ಕೋಣನೂರು ಕೆರೆ ಇಂದು...!]

ಹೆಣ್ಣು ಮಕ್ಕಳೇ ಹೆಚ್ಚು:
ದೇಶದಲ್ಲಿ ಪುರುಷ ಮತ್ತು ಮಹಿಳೆಯರ ಅನುಪಾತ ಏರುಪೇರಾಗಿರುವ ಸಮಸ್ಯೆ ಗೊತ್ತೆ ಇದೆ. ಸುಪ್ರೀಂ ಕೋರ್ಟ್ ಹೇಳಿರುವಂತೆ 11 ಮಿಲಿಯನ್ ಮಕ್ಕಳನ್ನು ತಂದೆ ತಾಯಿ ವಿವಿಧ ಕಾರಣಕ್ಕೆ ತ್ಯಜಿಸುತ್ತಾರೆ. ಅದರಲ್ಲಿ ಶೇ. 90 ರ ದೊಡ್ಡ ಪಾಲು ಹೆಣ್ಣು ಮಕ್ಕಳು ಎಂಬುದು ಕಟು ಸತ್ಯ.

English summary
A newborn baby girl, barely a few hours old, was found in a garbage collection vehicle owned by the Mysuru City Corporation on Monday morning. Saravana, the driver of the vehicle told The News Minute that he found the baby with blood stains. He and the cleaner of the vehicle were at a tea shop in Sayyaji Road ward on break after driving for two hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X