ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಲವೇ ದಿನಗಳಲ್ಲಿ ವಿಶ್ವನಾಥ್ ಜೆಡಿಎಸ್ ಗೆ: ಚಿಕ್ಕಮಾದು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 15 : ಮೈಸೂರು ಕ್ಷೇತ್ರದ ಮಾಜಿ ಸಂಸದ ಹಾಗೂ ಕಾಂಗ್ರೆಸ್ ನ ಹಿರಿಯ ಮುಖಂಡ ಎಚ್ ವಿಶ್ವನಾಥ್ ಅವರು ಜೆಡಿಎಸ್ ಗೆ ಸೇರ್ಪಡೆ ಬಗ್ಗೆ ಒಪ್ಪಿಗೆ ಸೂಚಿಸಿದ್ದು, ಶೀಘ್ರದಲ್ಲಿಯೇ ಪಕ್ಷ ಸೇರಲಿದ್ದಾರೆ ಎಂದು ಎಚ್ ಡಿ ಕೋಟೆಯ ಜೆಡಿಎಸ್ ಶಾಸಕ ಚಿಕ್ಕಮಾದು ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಶಾಸಕ ಚಿಕ್ಕಮಾದು, "ಜೆಡಿಎಸ್ ಸೇರ್ಪಡೆ ಬಗ್ಗೆ ಎಚ್ ವಿಶ್ವನಾಥ್ ಅವರ ಜತೆ ಮೇ 9 ರಂದು ಮೈಸೂರಿಗೆ ಭೇಟಿ ನೀಡಿದ್ದ ಎಚ್ ಡಿ ಕುಮಾರಸ್ವಾಮಿ ಅವರು ಮಾತುಕತೆ ನಡೆಸಿದ್ದಾರೆ. ಈ ವೇಳೆ ಪಕ್ಷಕ್ಕೆ ಬರುವುದಾಗಿ ಹೇಳಿದ್ದಾರೆ ಎಂದು ಹೇಳಿದರು['ಹಳ್ಳಿ ಹಕ್ಕಿ' ವಿಶ್ವನಾಥ್ ಜೊತೆ ಸಿದ್ದರಾಮಯ್ಯ 'ಟೂ' ಬಿಟ್ಟಿದ್ದೇಕೆ?]

Mysuru congress Ex MP H Vishwanath joins JDS soon MLA chikkamadu

ವಿಶ್ವನಾಥ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಅವರಿಗಾಗುತ್ತಿರುವ ಅಪಮಾನಗಳ ಕುರಿತು ಹಂಚಿಕೊಂಡಿದ್ದಾರೆ. ಹಾಗೂ 40 ವರ್ಷಗಳ ರಾಜಕಾರಣ ಮಾಡಿರುವ ಅವರನ್ನು ಕಾಂಗ್ರೆಸ್ ಪಕ್ಷ ಕಡೆಗಣಿಸಿರುವ ಬಗ್ಗೆ ಹೇಳಿಕೊಂಡಿದ್ದಾರೆ.

ಈ ಸಂಬಂಧ ಜೆಡಿಎಸ್ ಸೇರ್ಪಡೆಗೆ ವಿಶ್ವನಾಥ್ ಅವರು ಬಗ್ಗೆ ಗ್ರೀನ್ ಸಿಗ್ನಲ್ ನೀಡಿದ್ದು, ಇನ್ನು 15 ದಿನಗಳಲ್ಲಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ತಿಳಿಸಿದರು.


ಬಹಿಷ್ಕಾರದ ಕುರಿತು ಸ್ಪಷ್ಟನೆ :
ಹೆಚ್.ಡಿ.ಕೋಟೆ ತಾಲೂಕಿನ ಹೊಮ್ಮರಗಳ್ಳಿ ಗ್ರಾಮದ ನಿವಾಸಿಗಳಾದ ದೊಡ್ಡಯ್ಯ ಮತ್ತು ಪಾರ್ವತಮ್ಮ ಕುಟುಂಬಕ್ಕೆ ಗ್ರಾಮದ ಮುಖಂಡರು ಬಹಿಷ್ಕಾರ ಹಾಗೂ ದಂಡ ವಿಧಿಸಿದ್ದಾರೆ ಎಂದು ಸಂತ್ರಸ್ಥೆ ನೀಲಮ್ಮ ಮೈಸೂರಿನ ಪತ್ರಕರ್ತರ ಭವನದಲ್ಲಿ ಅಳಲು ತೋಡಿಕೊಂಡಿದ್ದರು.

ಈ ಬಗ್ಗೆ ಪ್ರತಿಕ್ರಯಿಸಿರುವ ಇಲ್ಲಿನ ಜೆಡಿಎಸ್ ಶಾಸಕ ಚಿಕ್ಕಮಾದು ಹೀಗಾಗದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.

Mysuru congress Ex MP H Vishwanath joins JDS soon MLA chikkamadu

ಸಂತ್ರಸ್ಥೆ ನೀಲಮ್ಮ ಹೊಮ್ಮರಗಳ್ಳಿ ಗ್ರಾಮದ ಮರಿಚಿಕ್ಕಯ್ಯ, ಪುಟ್ಟಯ್ಯ, ಮಹದೇವಯ್ಯ, ಚಿಕ್ಕದೇವಯ್ಯ ಹಾಗೂ ಇತರರುಪಂಚಾಯತ್ ಸೇರಿ ನಮ್ಮ ಕುಟುಂಬದ ವಿರುದ್ಧ ಹಲವಾರು ಆರೋಪಗಳನ್ನು ಹೊರಿಸುವ ಮೂಲಕ ಗ್ರಾಮದಿಂದ ಬಹಿಷ್ಕಾರ ಹಾಕಿದರು.

ಅಷ್ಟೇ ಅಲ್ಲದೇ ಸುಮಾರು 3.50 ಲಕ್ಷ ರು. ದಂಡ ವಿಧಿಸಲಾಗಿದೆ. ಇಂದಿಗೂ ಗ್ರಾಮಸ್ಥರೊಂದಿಗೆ ಸೌಹಾರ್ದಯುತ ಜೀವನ ನಡೆಸಲು ಸಾಧ್ಯವಾಗಿಲ್ಲ,

ಈ ಕುರಿತು ಕಳೆದ ಜ.27ರಂದು ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿದೂರನ್ನು ನೀಡಲಾಗಿದ್ದು ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮವನ್ನೂ ಜರುಗಿಸಿಲ್ಲ. ಕೇವಲ ಗ್ರಾಮದ ಮುಖಂಡರಿಗೆ ಎಚ್ಚರಿಕೆಯನ್ನು ನೀಡಿ ತಟಸ್ಥರಾಗಿದ್ದಾರೆ ಎಂದು ಸಂತ್ರಸ್ಥೆ ನೀಲಮ್ಮ ದೂರಿದ್ದರು.

English summary
Mysuru congress Ex MP H Vishwanath will be joins JDS soon, said HD Kote JDS MLA chikkamadu in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X