ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ವಿವಿ ಗಡಿಯಾರದ ಟಿಕ್ ಟಿಕ್ ಶಬ್ದವೀಗ ಸ್ತಬ್ಧ!

ವಿಶ್ವವಿದ್ಯಾಲಯಕ್ಕೆ ಬರುವವರೆಲ್ಲ ಒಮ್ಮೆ ತಲೆಯೆತ್ತಿ ನೋಡುವಂತೆ ಮಾಡಿ, ಸಮಯದ ಮಹತ್ವವನ್ನೂ ಹೇಳುತ್ತಿದ್ದ ಗಡಿಯಾರ ಇದೀಗ ಸ್ತಬ್ಧವಾಗಿದ್ದು, ಪ್ರತಿದಿನ ವಿಶ್ವವಿದ್ಯಾಲಯಕ್ಕೆ ಬರುವವರಿಗೆಲ್ಲ ಏನನ್ನೂ ಕಳೆದುಕೊಂಡ ಭಾವ ಆವರಿಸುತ್ತಿದೆ.

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಮೇ 15 : ಮೈಸೂರು ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದ ಜನಾಕರ್ಷಣೆಯ ಕೇಂದ್ರ ಬಿಂದು, ಕ್ಲಾಕ್ ಟವರ್ ನ ಗಡಿಯಾರ ಇದೀಗ ಸ್ತಬ್ಧವಾಗಿದೆ! ವಿಶ್ವವಿದ್ಯಾಲಯಕ್ಕೆ ಬರುವವರೆಲ್ಲ ಒಮ್ಮೆ ತಲೆಯೆತ್ತಿ ನೋಡುವಂತೆ ಮಾಡಿ, ಸಮಯದ ಮಹತ್ವವನ್ನೂ ಹೇಳುತ್ತಿದ್ದ ಗಡಿಯಾರ ಇದೀಗ ಸ್ತಬ್ಧವಾಗಿದ್ದು, ಪ್ರತಿದಿನ ವಿಶ್ವವಿದ್ಯಾಲಯಕ್ಕೆ ಬರುವವರಿಗೆಲ್ಲ್ ಏನನ್ನೂ ಕಳೆದುಕೊಂಡ ಭಾವ ಆವರಿಸುತ್ತಿದೆ.

ಮೈಸೂರು ವಿಶ್ವವಿದ್ಯಾನಿಲಯದ ಶತಮಾನೋತ್ಸವದ ನೆನಪಿಗಾಗಿ ನಿರ್ಮಿಸಲಾಗಿದ್ದ ಕ್ಲಾಕ್ ಟವರ್ ಇದೀಗ ಸ್ತಬ್ಧವಾಗಿದೆ. ಕಳೆದ ಮೂರು ದಿನಗಳಿಂದ ಮಾನಸ ಗಂಗೋತ್ರಿ ಅಂಗಳದಲ್ಲಿರುವ ಈ ಗಡಿಯಾರ ಕೆಟ್ಟು ನಿಂತಿದೆ.[ಮೈಸೂರಿನಲ್ಲಿ ಸಂಚಾರಿ ವಿಜ್ಞಾನ ಪ್ರಯೋಗಾಲಯಕ್ಕೆ ಚಾಲನೆ]

ಇದುವರೆಗೂ ಅದರ ದುರಸ್ಥಿ ಕಾರ್ಯ ಮಾತ್ರ ನಡೆದಿಲ್ಲ! ಮಾನಸ ಗಂಗೋತ್ರಿ ವಿಶ್ವವಿದ್ಯಾಲಯಕ್ಕೆ ಕಳೆ ನೀಡುತ್ತಿದ್ದ ಗಡಿಯಾರ ಕೆಟ್ಟು ನಿಂತು ಮೂರು ದಿನವಾದರೂ ದುರಸ್ಥಿ ಕಾರ್ಯ ನಡೆಯುತ್ತಿಲ್ಲ ಎಂಬ ಬಗ್ಗೆ ಈಗಾಗಲೇ ಸಾರ್ವಜನಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿಂದೆಯೂ ಒಮ್ಮೆ ಕೆಟ್ಟಿತ್ತು

ಈ ಹಿಂದೆಯೂ ಒಮ್ಮೆ ಕೆಟ್ಟಿತ್ತು

ಹಿಂದಿನ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರ ಅವಧಿಯಲ್ಲಿ, ಖುದ್ದು ಅವರೇ ಆಸ್ಥೆ ವಹಿಸಿ ಈ ಕ್ಲಾಕ್ ಟವರ್ ನಿರ್ಮಾಣ ಮಾಡಿಸಿದ್ದರು. ಆದರೆ ನಿರ್ಮಾಣವಾದ ತಿಂಗಳಲ್ಲೇ ಗಡಿಯಾರದ ಮುಳ್ಳು ಬಿದ್ದು ಕೆಟ್ಟಿತ್ತು. ಬಳಿಕ ರಿಪೇರಿ ಮಾಡಿದ್ದ. ವಿಶ್ವವಿದ್ಯಾನಿಲಯದ ಅಧಿಕಾರಿಗಳು, ಈವರೆವಿಗೂ ಕೆಡದಂತೆ ನೋಡಿಕೊಂಡಿದ್ದರು.

ನಿರ್ಮಾಣವಾಗಿದ್ದು ಯಾವಾಗ…?

ನಿರ್ಮಾಣವಾಗಿದ್ದು ಯಾವಾಗ…?

ಸುಮಾರು 75 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಬೃಹತ್ ಗಡಿಯಾರವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜುಲೈ 2015 ರಂದು ಉದ್ಘಾಟಿಸಿದ್ದರು. ಆ ಮೂಲಕ ಮಾನಸ ಗಂಗೋತ್ರಿಯ ಮೆರಗು ಹೆಚ್ಚಿಸುತ್ತಿದ್ದ ಟಿಕ್ ಟಿಕ್ ಗಡಿಯಾರ ಮೂರು ದಿನದಿಂದ ಸ್ತಬ್ಧವಾಗಿದೆ.[ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಯೋಗ ಶಿಕ್ಷಣ ಆರಂಭ]

ಗಡಿಯಾರದ ಬೆಲೆ ಕೇಳಿ ತಲೆಸುತ್ತು ಬಂದೀತು!

ಗಡಿಯಾರದ ಬೆಲೆ ಕೇಳಿ ತಲೆಸುತ್ತು ಬಂದೀತು!

ಈ ಕ್ಲಾಕ್ ಟವರ್ ನ ಗಡಿಯಾರಕ್ಕೇ 9.5 ಲಕ್ಷ ವೆಚ್ಚವಾಗಿದೆ. ಹೌದು, ಗಡಿಯಾರ ಬೆಲೆ ಕೇಳಿದರೆ ಒಮ್ಮೆ ತಲೆಸುತ್ತುಬರುವುದಂತೂ ನಿಜ.

ಎಚ್ ಎಂ ಟಿ ಕಂಪೆನಿಯ ಗಡಿಯಾರ

ಎಚ್ ಎಂ ಟಿ ಕಂಪೆನಿಯ ಗಡಿಯಾರ

ಗಡಿಯಾರ ಹೆಚ್.ಎಂ.ಟಿ ಕಂಪನಿಯದಾಗಿದ್ದು, ಮೈಸೂರು ವಿಶ್ವವಿದ್ಯಾಲಯದ ವಿಶಾಲವಾದ ಕ್ಯಾಂಪಸ್ ಎದುರು ತಲೆ ಎತ್ತಿ ನಿಂತು ಲಕ್ಷಾಂತರ ಜನರನ್ನು ಆಕರ್ಷಿಸಿದೆ. ದಿನವೂ ವಾಯುವಿಹಾರಕ್ಕೆಂದು ಬರುವವರನ್ನೂ ಈ ಗಡಿಯಾರ ಸೆಳೆಯುತ್ತಿತ್ತು.

ನಮ್ಮೆಲ್ಲರ ನೆಚ್ಚಿನ ಗಡಿಯಾರ

ನಮ್ಮೆಲ್ಲರ ನೆಚ್ಚಿನ ಗಡಿಯಾರ

'ಒನ್ ಇಂಡಿಯಾ'ದೊಂದಿಗೆ ಮಾತನಾಡಿದ ವಾಯುವಿಹಾರಿಗಳು ಮೂರು ದಿನಗಳಿಂದ ನಮ್ಮೆಲ್ಲರ ನೆಚ್ಚಿನ ಗಡಿಯಾರ ಕೆಟ್ಟು ನಿಂತಿದೆ. ಇನ್ನೂ ದುರಸ್ಥಿ ಮಾಡಿಲ್ಲ ಎಂದರು.

English summary
Mysuru's famous clock tower's clock, which is in Mysore university has stopped working from three days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X