ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಪೊಲೀಸರಿಗೆ ಟ್ವಿಟ್ಟರ್ ಮೂಲಕ ದೂರು ಕೊಡಿ

|
Google Oneindia Kannada News

ಮೈಸೂರು, ಏ. 27 : ನಾಗರಿಕ ಸ್ನೇಹಿ ಸೇವೆ ಒದಗಿಸಲು ಮೈಸೂರು ನಗರ ಪೊಲೀಸರು ಸಾಮಾಜಿಕ ಜಾಲ ತಾಣಗಳಲ್ಲಿ ಖಾತೆ ತೆರೆದಿದ್ದಾರೆ. ಪೊಲೀಸರು ಟ್ವಿಟ್ಟರ್ ಖಾತೆ ತೆರೆದಿದ್ದು, ಆಟೋ ಚಾಲಕರ ಬಗ್ಗೆ ದೂರು ನೀಡಲು ಎಸ್ಎಂಎಸ್ ಸೇವೆಯನ್ನು ಆರಂಭಿಸಿದ್ದಾರೆ.

ಮೈಸೂರು ನಗರ ಪೊಲೀಸರ ಫೇಸ್‌ಬುಕ್ ಪೇಜ್ ಯಶಸ್ವಿಯಾದ ಹಿನ್ನಲೆಯಲ್ಲಿ ಟ್ವಿಟ್ಟರ್ ಖಾತೆಯನ್ನು ತೆರೆಯಲಾಗಿದೆ. ಸಾರ್ವಜನಿಕರು ಟ್ವಿಟ್ಟರ್ ಮೂಲಕ ದೂರು ನೀಡುವ ಜೊತೆಗೆ ಉತ್ತಮ ಆಡಳಿತಕ್ಕಾಗಿ ಸಲಹೆ, ಸೂಚನೆಗಳನ್ನು ನೀಡಬಹುದು ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ಹೇಳಿದ್ದಾರೆ. [ಮೈಸೂರು ನಗರ ಪೊಲೀಸ್ ಆಯುಕ್ತರ ವರ್ಗಾವಣೆ]

Mysuru city police

ಐವಿಆರ್‌ಎಸ್ ಸೇವೆ : ಟ್ವಿಟ್ಟರ್ ಖಾತೆ ಜೊತೆಗೆ ಐವಿಆರ್‌ಎಸ್ (Interactive Voice Recording System) ಸೇವೆಯನ್ನು ಪೊಲೀಸರು ಆರಂಭಿಸಿದ್ದಾರೆ. 0821-2418473 ಸಂಖ್ಯೆಗೆ ಕರೆ ಮಾಡಿ ಸಾರ್ವಜನಿಕರು ದೂರು ನೀಡಬಹುದಾಗಿದೆ. ಒಂದು ನಿಮಿಷದಲ್ಲಿ ಜನರು ಕರೆ ಮಾಡಿ ತಮ್ಮ ದೂರನ್ನು ಸಲ್ಲಿಸಿದರೆ ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಆಟೋ ದೂರಿನ ಬಗ್ಗೆ ಎಸ್ಎಂಎಸ್ ಮಾಡಿ : ನಗರದಲ್ಲಿ ಆಟೋ ಚಾಲಕರು ಹೆಚ್ಚಿನ ದರ ಕೇಳಿದರೆ ಅಥವ ಅಸಭ್ಯವಾಗಿ ವರ್ತಿಸಿದರೆ ದೂರು ನೀಡಲು ಎಸ್‌ಎಂಎಸ್ ಸೇವೆಯನ್ನು ಪೊಲೀಸರು ಆರಂಭಿಸಿದ್ದಾರೆ. 9480802200 ಸಂಖ್ಯೆಗೆ ಜನರು ಎಸ್‌ಎಂಎಸ್ ಮಾಡಿ ದೂರು ನೀಡಬಹುದಾಗಿದೆ.

ಸಾಮಾಜಿಕ ತಾಣದ ವಿವರ
ಟ್ವಿಟ್ಟರ್ ಖಾತೆ : @SystemAdm
ಫೇಸ್‌ಬುಕ್ ಪುಟ : Mysore City Police
ವೆಬ್‌ ಸೈಟ್ : http://www.mysorecitypolice.gov.in/

English summary
Mysuru city police has taken a step to being public friendly. City police joined twitter (@SystemAdm) and also launched IVRS, SMS complaint service on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X