ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಯೋಗ ಶಿಕ್ಷಣ ಆರಂಭ

By Vanitha
|
Google Oneindia Kannada News

ಮೈಸೂರು, ಜೂ,22 : ಮೈಸೂರು ವಿಶ್ವವಿದ್ಯಾನಿಲಯ ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದಿಂದ ಯೋಗ ಶಿಕ್ಷಣ ಆರಂಭಿಸುವ ಯೋಜನೆ ರೂಪಿಸಿದೆ.

ವಿಶ್ವ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ವಿವಿ ಉಪ ಕುಲಪತಿ ಕೆ. ಎಸ್ ರಂಗಪ್ಪ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಕಳೆದ ವರ್ಷ ಯೋಗ ದೈಹಿಕ ಶಿಕ್ಷಣದ ಒಂದು ಭಾಗವಾಗಿತ್ತು. ಮಾನಸಿಕ ಹಾಗೂ ದೈಹಿಕವಾಗಿ ಇದು ವ್ಯಕ್ತಿಗಳನ್ನು ಎಲ್ಲಾ ಖಾಯಿಲೆಗಳಿಂದ ದೂರ ಇರಿಸುತ್ತದೆ. ವ್ಯಕ್ತಿಗಳು ಸದಾ ಉತ್ಸಾಹದಿಂದ ತಮ್ಮ ಕಾರ್ಯಗಳನ್ನು ಕೈಗೊಳ್ಳಲು ಪ್ರೇರಣೆ ನೀಡುವ ಮೂಲ ಸಾಧನ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ'.

Mysore university plans diploma, degree courses in yoga

'ಈ ಶೈಕ್ಷಣಿಕ ವರ್ಷದಿಂದ ಮುಖ್ಯವಾಗಿ ಯೋಗ ವಿಷಯದಲ್ಲಿ ಡಿಪ್ಲೋಮ, ಪದವಿ ಹಾಗೂ ಸ್ನಾತಕೋತ್ತರ ಪದವಿ ಶಿಕ್ಷಣ ಒದಗಿಸುವ ಯೋಜನೆಯನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ವಿಶ್ವವಿದ್ಯಾನಿಲಯವು ಸಾರ್ವಜನಿಕ ಆರೋಗ್ಯದ ಕಡೆ ಒಲವನ್ನು ವ್ಯಕ್ತ ಪಡಿಸಿರುವುದು ಈ ಕೋರ್ಸ್ ಆರಂಭಕ್ಕೆ ಮೂಲ ಪ್ರೇರಣೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಯೋಗ ಬಹಳ ಪ್ರಸಿದ್ಧಿ ಪಡೆದುಕೊಳ್ಳುತ್ತಿದೆ. ಭಾರತದಲ್ಲಿ ಸುಮಾರು 5.8 ಮಿಲಿಯನ್ ಜನರು ಹೃದಯ, ಶ್ವಾಸಕೋಶ, ಕ್ಯಾನ್ಸರ್, ಮಧುಮೇಹ, ಪಾರ್ಶ್ವವಾಯು ಹೀಗೆ ನಾನಾ ರೀತಿಯ ರೋಗಗಳಿಂದ ಬಳಲುತ್ತಿದ್ದಾರೆ. ಉದ್ಯೋಗಿಗಳ ಮಾನಸಿಕ ಒತ್ತಡ ಕಡಿಮೆ ಮಾಡುವಲ್ಲಿ ಯೋಗದ ಪಾತ್ರ ಪ್ರಮುಖವಾದದ್ದು ಎಂಬುದಾಗಿ ದ ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ ಮುಖ್ಯಸ್ಥ ಮುತ್ತುಕುಮಾರ್ ಹೇಳಿದ್ದಾರೆ.

English summary
The Mysore University (Mysore) would offer a certificate,a diploma,a graduate and a postgraduate course in yoga. 5.8 million people in India succumb to non-communicable diseases such as heart and lung ailments,stroke,cancer and diabetes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X