ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ 1 ರೂಪಾಯಿಗೆ ಗೋಲ್ ಗೊಪ್ಪ. ಜನ ಸಾಲುಗಟ್ಟಿ ನಿಂತರಪ್ಪ

ಕೇವಲ ರೂ.1ಕ್ಕೆ ಗೋಲ್ ಗಪ್ಪ ನೀಡುವುದಾಗಿ ಮೈಸೂರಿನ ರೆಸ್ಟೋರೆಂಟ್ ಘೋಷಿಸಿದ್ದರಿಂದ ಎಟಿಎಂಗಳ ಕ್ಯೂಲೈನ್ ಗಳನ್ನೂ ಮೀರಿಸುವ ಹಾಗೆ ಜನ ಸಾಲುಗಟ್ಟಿ ನಿಂತಿದ್ದರು.

By Prithviraj
|
Google Oneindia Kannada News

ಮೈಸೂರು, ಡಿಸೆಂಬರ್, 1: ಪ್ರಧಾನಿ ಮೋದಿ ಅವರು ಅಧಿಕ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ನಂತರ ಹಣಕ್ಕಾಗಿ ಎಟಿಎಂಗಳ ಮುಂದೆ ಸಾಲುಗಟ್ಟಿ ನಿಲ್ಲುವ ಹಾಗೆ ಮೈಸೂರಿನ ಈ ರೆಸ್ಟೋರೆಂಟ್ ಮುಂದೆಯೂ ಸಹ ಜನ ನಿಂತಿದ್ದರು.

ಕೇವಲ ರೂ.1ಕ್ಕೆ ಅನ್ ಲಿಮಿಟಿಡೆ ಗೋಲ್ ಗಪ್ಪಗಳನ್ನು ನೀಡುವುದಾಗಿ ಮೈಸೂರಿನ ವೈಷ್ಣವಿ ರೆಸ್ಟೋರೆಂಟ್ ಮಾಲೀಕರು ಘೋಷಿಸಿದ್ದರಿಂದ ಜನ ರೆಸ್ಟೋರೆಂಟ್ ಮುಂದೆ ಜಮಾಯಿಸಿದ್ದರು. ಕ್ಯೂ ಲೈನ್ ಹನುಮಂತನ ಬಾಲಕ್ಕಿಂತಲೂ ಉದ್ದವಾಗಿತ್ತು.

ಏನಿದು ಗೋಲ್ ಗಪ್ಪ?

ಗೋಲ್ ಗಪ್ಪವನ್ನು ಪಾನಿಪೂರಿ ಎಂತಲೂ ಕರೆಯುವುದುಂಟ. ಇದು ದಕ್ಷಿಣ ಏಷಿಯಾದ ಒಂದು ಜನಪ್ರಿಯ ಹಾಗು ರುಚಿಕರವಾದ ಖಾದ್ಯ. ಇದು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಮತ್ತು ನೇಪಾಳ ಗಳಲ್ಲಿ ಸ್ಟ್ರೀಟ್ ಫುಡ್ ಎಂದೇ ಜನಪ್ರೀಯತೆಯನ್ನು ಪಡೆದಿದೆ. ಇದು ಗರಿಗರಿಯಾಗಿ ಕರಿದ ಪುರಿ ಮತ್ತು ಫ್ಲೇವರ್ಡ್ ವಾಟರ್ ("ಪಾನಿ"), ಹಾಗು ಹುಣಿಸೇಹಣ್ಣು ಚಟ್ನಿ, ಮೆಣಸು, ಚಾಟ್ ಮಸಾಲಾ, ಆಲೂಗಡ್ಡೆ, ಈರುಳ್ಳಿ ಮಿಶ್ರಣದಿಂದ ತುಂಬಿದ ಹಾಗು ಒಂದೇ ಬಾರಿಗೆ ಬಾಯ್ತುಂಬುವಂತಹ ಪೂರಿಯಾಗಿರುತ್ತದೆ.

English summary
After PM Modi's noteban decision you must have seen long queues in front of ATMs and banks but here the long queue is not for cash, this is from a restaurant in Mysore where people are in queue to eat Golgappas. Restaurant is offering unlimited golgappas in just 1 rs. Watch the interesting video here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X