ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ಆರ್ ಬಿಐನಲ್ಲಿ ಮುದ್ರಣಗೊಳ್ಳಲಿದೆ 200 ರೂ. ನೋಟು

By Yashaswini
|
Google Oneindia Kannada News

ಮೈಸೂರು, ಜುಲೈ 26 : 500 ಮತ್ತು 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಸುತ್ತಿನ ಕರೆನ್ಸಿ ಸರ್ಜರಿಗೆ ಮುಂದಾಗಿದೆ. ಬಹುನಿರೀಕ್ಷಿತ 200 ರೂ. ಮುಖಬೆಲೆ ನೋಟುಗಳು ಮೈಸೂರಿನ ಆರ್‌ಬಿಐ ಘಟಕದಲ್ಲಿ ಮುದ್ರಣಗೊಳ್ಳಲಿದ್ದು, ಈಗಾಗಲೇ ತಯಾರಿ ಕೂಡ ನಡೆಯುತ್ತಿದೆ ಎನ್ನಲಾಗಿದೆ.

2000 ರೂ. ಮುಖಬೆಲೆ ನೋಟುಗಳನ್ನು ಮುದ್ರಿಸಿ ದಾಖಲೆ ನಿರ್ಮಿಸಿದ್ದ ಮೈಸೂರಿನ ಆರ್‌ಬಿಐ ಘಟಕ ಮತ್ತೊಂದು ದಾಖಲೆ ಮಾಡಬಹುದೇ ಎಂಬ ಕುತೂಹಲವೂ ಕೂಡ ಸಾರ್ವಜನಿಕರಲ್ಲಿದೆ. ಮೈಸೂರು ನೋಟು ಮುದ್ರಣ ಘಟಕದಲ್ಲಿ ₹200 ಮುಖಬೆಲೆಯ ಹೊಸ ನೋಟಿನ ಮುದ್ರಣ ಆರಂಭಿಸಲಾಗಿದೆ. ಹೊಸ ನೋಟು ಆಗಸ್ಟ್‌ನಲ್ಲಿ ಚಲಾವಣೆಗೆ ಬರುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಹಳೆಯ ₹500, ₹1000 ಮುಖಬೆಲೆ ನೋಟುಗಳನ್ನು ರದ್ದುಪಡಿಸಿ ಆದೇಶ ಹೊರಡಿಸಿದ ನಂತರ ಆರ್‌ಬಿಐ ಹೊಸ ₹500, ₹2000 ಮುಖಬೆಲೆ ನೋಟುಗಳನ್ನು ಚಲಾವಣೆಗೆ ತಂದಿತ್ತು.

ಶೀಘ್ರದಲ್ಲೇ ಸೈಡಿಗೆ ಸರಿಯಲಿವೆ 2 ಸಾವಿರ ರುಪಾಯಿ ನೋಟು?ಶೀಘ್ರದಲ್ಲೇ ಸೈಡಿಗೆ ಸರಿಯಲಿವೆ 2 ಸಾವಿರ ರುಪಾಯಿ ನೋಟು?

ಭಾರತೀಯ ರಿಸರ್ವ್ (ಆರ್ ಬಿಐ) ಬ್ಯಾಂಕ್ 2 ಸಾವಿರ ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಿದ್ದು, ಪ್ರಸ್ತುತ ಆರ್ಥಿಕ ವರ್ಷದಲ್ಲಿ ಪುನಃ ಈ ಮೊತ್ತದ ನೋಟುಗಳ ಮುದ್ರಣವನ್ನು ಮುಂದುವರೆಸುವುದಿಲ್ಲ ಎಂದು ಮೂಲಗಳು ತಿಳಿಸಿವೆ. 2 ಸಾವಿರ ರು. ನೋಟುಗಳ ಚಲಾವಣೆ ಮುಂದುವರಿಕೆ ಬಗ್ಗೆ ಪ್ರಶ್ನೆಗಳು ಎದ್ದಿರುವಂತೆಯೇ ಆರ್ ಬಿಐ 5 ತಿಂಗಳ ಮೊದಲೇ 2 ಸಾವಿರ ರು. ನೋಟುಗಳ ಮುದ್ರಣ ಸ್ಥಗಿತಗೊಳಿಸಿರುವುದು ಇದೀಗ ಬೆಳಕಿಗೆ ಬಂದಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಮತ್ತೆ 2 ಸಾವಿರ ರು.ಗಳ ಹೊಸ ನೋಟು ಮುದ್ರಿಸುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

ಅಮಾನ್ಯಗೊಂಡ ನೋಟು

ಅಮಾನ್ಯಗೊಂಡ ನೋಟು

ಈಗಾಗಲೇ 7.4 ಲಕ್ಷ ಕೋಟಿ ರೂ. ಮೊತ್ತದ 3.7 ಬಿಲಿಯನ್ (ಶತಕೋಟಿ) ಮೌಲ್ಯದ 2 ಸಾವಿರ ರೂ. ನೋಟುಗಳನ್ನು ಮುದ್ರಿಸಿದೆ. ಇದು, ಅಮಾನ್ಯಗೊಂಡಿರುವ 1 ಸಾವಿರ ರೂ. ಮುಖಬೆಲೆಯ 6.3 ಬಿಲಿಯನ್ ನೋಟುಗಳಿಗಿಂತ ಅಧಿಕವಾಗಿದೆ.

200 ರೂ. ನೋಟಿನ ಮುದ್ರಣ ಆರಂಭ

200 ರೂ. ನೋಟಿನ ಮುದ್ರಣ ಆರಂಭ

ಕೇಂದ್ರ ಸರ್ಕಾರ ಕಳೆದ 2016ರ ನವೆಂಬರ್ 8ರಂದು 1 ಸಾವಿರ ಹಾಗೂ 500 ರೂ. ಮುಖ ಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿತ್ತು. ಗ್ರಾಹಕರಿಗೆ ಅನುಕೂಲವಾಗುವಂತೆ, ಮಾರುಕಟ್ಟೆಯಲ್ಲಿ ಸುಲಭವಾಗಿ ಜನರ ಕೈಗೆ ಎಟಕುವಂತೆ ಕರೆನ್ಸಿ ಚಲಾವಣೆ ಮಾಡಲು ನಿರ್ಧರಿಸಿರುವ ಆರ್ ಬಿಐ, ಈಗಾಗಲೇ 200 ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ಪ್ರಾರಂಭಿಸಿದೆ.

ಸದ್ಯದಲ್ಲೇ ಬರಲಿದೆ 200 ರೂಪಾಯಿಯ ಹೊಸ ನೋಟುಸದ್ಯದಲ್ಲೇ ಬರಲಿದೆ 200 ರೂಪಾಯಿಯ ಹೊಸ ನೋಟು

ಆರ್ ಬಿಐ ಅಧಿಕಾರಿಗಳು ಹೇಳುವುದೇನು?

ಆರ್ ಬಿಐ ಅಧಿಕಾರಿಗಳು ಹೇಳುವುದೇನು?

ನೋಟು ಅಮಾನ್ಯೀಕರಣಕ್ಕೆ ಮುಂಚೆ ಚಲಾವಣೆಯಲ್ಲಿದ್ದ ಶೇ. 3.8ರಷ್ಟು ನೋಟುಗಳ ಬದಲಿಗೆ ಪ್ರಸ್ತುತ ಹೊಸ ನೋಟುಗಳ (2000 ರೂ ನೋಟು) ಚಲಾವಣೆ ಅಧಿಕವಾಗಿದ್ದು, ಶೇ. 5.4ರಷ್ಟಿದೆ ಎಂದು ಆರ್ ಬಿಐ ಅಧಿಕಾರಿಗಳು ವಿವರಣೆ ನೀಡಿದ್ದಾರೆ. ಇದಕ್ಕೆ ನಿದರ್ಶನವಾಗಿ ದೇಶದ ಸಾವಿರಾರು ಎಟಿಎಂಗಳಲ್ಲಿ ಸುಲಭವಾಗಿ ಹಣ ದೊರೆಯುವುದಲ್ಲದೆ ಚಲಾವಣೆಗಿಂತ ಹೆಚ್ಚಿನ ಹಣ ಎಟಿಎಂಗಳಲ್ಲಿ ಉಳಿದಿದೆ. ಹೊಸ 2 ಸಾವಿರ ರೂ. ನೋಟುಗಳು ಮತ್ತು 500 ರೂ. ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಜನರ ಕೈಗೆ ದೊರೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೋಟು ಅಭಾವವಿಲ್ಲ

ನೋಟು ಅಭಾವವಿಲ್ಲ

ಅಮಾನ್ಯ ಮಾಡಿದ ಹೊಸತರಲ್ಲಿ ಕಂಡು ಬರುತ್ತಿದ್ದ ಹಣ ಚಲಾವಣೆಯ ಅಭಾವ ಈಗ ಇಲ್ಲ. ಜನರ ಬಳಿ ಸಾಕಷ್ಟು ಪ್ರಮಾಣದಲ್ಲಿ ಚಲಾವಣೆಯಾಗುತ್ತಿದೆ. ಮುಂದಿನ ತಿಂಗಳಿನಿಂದ 200 ರೂ ಮುಖಬೆಲೆಯ ನೋಟುಗಳು ಚಲಾವಣೆಗೆ ಬಂದರೆ ಯಾವುದೇ ರೀತಿ ನಗದು ವ್ಯವಹಾರದ ಬಿಕ್ಕಟ್ಟು ಇರುವುದಿಲ್ಲ ಎಂದು ಆರ್ ಬಿಐ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

English summary
The central government headed by Prime Minister Narendra Modi has banned 500 and 1000 denomination notes and is now heading for another round currency surgery. The long-awaited 200 rupees Face notes will be printed at the RBI unit of Mysore and are already preparing for the preparation
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X