ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೋ ಮಾಂಸ ಭಕ್ಷಿಸಿದ ಪ್ರೊ. ಭಗವಾನ್ ವಿರುದ್ಧ ಪ್ರತಾಪ್ ಸಿಂಹ ಕಿಡಿ

ಮೈಸೂರು ವಿಶ್ವವಿದ್ಯಾಲಯದ ಕಾರ್ಯಕ್ರಮವೊಂದರಲ್ಲಿ ಗೋ ಮಾಂಸ ತಿಂದ ಪ್ರೊ. ಭಗವಾನ್ ವಿರುದ್ಧ ಮೈಸೂರು ಸಂಸದ ಪ್ರತಾಪ್ ಸಿಂಹ ಕಿಡಿ. ಭಗವಾನ್ ಅವರಿಗೆ ಜತೆಯಾಗಿದ್ದ ಮೈಸೂರು ವಿವಿಯ ಪ್ರೊ. ಮಹೇಶ್ ಚಂದ್ರ ಗುರು ವಿರುದ್ಧ ವಾಗ್ದಾಳಿ.

|
Google Oneindia Kannada News

ಮೈಸೂರು, ಜೂನ್ 26: ಸರ್ಕಾರಿ ಸಭಾಂಗಣವೊಂದರಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಗೋ ಮಾಂಸ ತಿನ್ನುವ ಮೂಲಕ ಚಾಲನೆ ನೀಡಿದ ಪ್ರೊ. ಭಗವಾನ್ ಹಾಗೂ ಪ್ರೊ. ಮಹೇಶ್ ಚಂದ್ರ ಗುರು ಅವರು ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡವುತ್ತಿದ್ದಾರೆಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಸರ್ಕಾರಿ ಸಭಾಂಗಣದಲ್ಲಿ ಬೀಫ್ ಸೇವನೆ, ಮತ್ತೆ ವಿವಾದದಲ್ಲಿ ಭಗವಾನ್ ಸರ್ಕಾರಿ ಸಭಾಂಗಣದಲ್ಲಿ ಬೀಫ್ ಸೇವನೆ, ಮತ್ತೆ ವಿವಾದದಲ್ಲಿ ಭಗವಾನ್

ಕಳೆದ ಮೂರು ದಿನಗಳಿಂದ ಮೈಸೂರಿನ ಕಲಾ ಮಂದಿರದಲ್ಲಿ ನಡೆಯುತ್ತಿದ್ದ ಆಹಾರ ಹಕ್ಕು-ವ್ಯಕ್ತಿ ಸ್ವಾತಂತ್ರ್ಯ ಕುರಿತ ಸಂವಾದ ಕಾರ್ಯಕ್ರಮದ ಅಂಗವಾಗಿ ಭಾನುವಾರ ಆಯೋಜಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಸಾಹಿತಿಗಳು ಗೋಮಾಂಸ ಸೇವಿಸಿದ್ದಾರೆ. ಈ ಮೂಲಕ ಸಮಾಜಕ್ಕೆ ಕಳಂಕ ತರುತ್ತಿದ್ದಾರೆಂದು ಅವರು ಆರೋಪಿಸಿದರು.

MP Pratap Simpha lashes out against Prof. Bhagawan for consuming beef in Mysuru

ಸರ್ಕಾರದ ಆವರಣಗಳಲ್ಲಿ ಗೋ ಮಾಂಸ ಸೇವಿಸಕೂಡದು ಎಂಬ ಕಾನೂನು ಇದ್ದರೂ ವಿದ್ಯಾವಂತರಾದ ಇವರು ಅದನ್ನು ಉಲ್ಲಂಘಿಸಿರುವುದು ಆಕ್ಷೇಪಾರ್ಹ. ಅದರಲ್ಲೂ ಸರ್ಕಾರಿ ಸೇವೆಯಲ್ಲಿರುವ ಪ್ರೊ. ಮಹೇಶ್ ಚಂದ್ರ ಗುರು ಅವರು ಇಂಥದ್ದೊಂದು ಕೆಲಸ ಮಾಡಿರುವುದು ಬೇಸರದ ಸಂಗತಿ ಎಂದು ಅವರು ತಿಳಿಸಿದ್ದಾರೆ.

ಮೈಸೂರು: ಮರ್ಯಾದಾ ಹತ್ಯೆ, ತಂದೆ ಸೇರಿ ಐವರ ಬಂಧನಮೈಸೂರು: ಮರ್ಯಾದಾ ಹತ್ಯೆ, ತಂದೆ ಸೇರಿ ಐವರ ಬಂಧನ

ಈ ಹಿನ್ನೆಲೆಯಲ್ಲಿ, ರಾಜ್ಯಪಾಲರನ್ನು ಭೇಟಿಯಾಗಿ ಪ್ರೊ. ಮಹೇಶ್ ಚಂದ್ರ ಗುರು ಅವರನ್ನು ಕೆಲಸದಿಂದ ವಜಾಗೊಳಿಸಲು ಮನವಿ ಮಾಡಲಾಗುವುದು ಎಂದು ಅವರು ತಿಳಿಸಿದರು.

English summary
Mysuru MP Pratap Simha lashed out against rationalist Prof. Bhagawan and Pro. Mahesh Chandra Guru of Mysuru university for eating beef in a government function.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X