ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬದನಾಳಿನಲ್ಲಿ ವೀರಶೈವ ಮುಖಂಡರು ಕಾಂಗ್ರೆಸ್ ಸೇರ್ಪಡೆ

ನಂಜನಗೂಡಿನ ಬದನವಾಳು ಗ್ರಾಮದ ನೂರಾರು ವೀರಶೈವ ಮುಖಂಡರು ಮಾರ್ಚ್ 26, ಭಾನುವಾರದಂದು ಸಂಸದ ಧ್ರುವನಾರಾಯಣ್ ಎದುರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 27: ಮೈಸೂರಿನ ನಂಜನಗೂಡು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಹೊರಳವಾಡಿ ಮತ್ತು ವಿವಾದಿತ ಬದನವಾಳು ಗ್ರಾಮದ ನೂರಾರು ವೀರಶೈವ ಮುಖಂಡರು ಸಂಸದ ಆರ್.ಧ್ರುವನಾರಾಯಣ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು.

ಬದನವಾಳು ಗ್ರಾಮದ ವೀರಶೈವ ಮುಖಂಡರಾದ ನಾಗೇಂದ್ರ, ದಿಲೀಪ್, ಪ್ರದೀಪ್, ನಂದೀಶ್, ಮಹದೇವಮೂರ್ತಿ, ಸಿದ್ದರಾಜು, ಮಂಜುನಾಥ್, ಶಿವಮೂರ್ತಿ, ನಂಜುಂಡಸ್ವಾಮಿ, ಲೋಕೇಶ್, ಮಂಜು, ರಾಜಶೇಖರ ಮೂರ್ತಿ ಸತೀಶ್, ಮಲ್ಲಣ್ಣ, ನಂಜುವಪ್ಪ, ಮಣಿಕಂಠಮೂರ್ತಿ, ಸೇರಿದಂತೆ ನೂರಾರು ಪ್ರಮುಖರು ಸೇರ್ಪಡೆಗೊಂಡವರಾಗಿದ್ದಾರೆ.[ಸಿಎಂ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುವೆ: ಬಿಎಸ್ ವೈ]

ಇದೇ ವೇಳೆ ಬದನವಾಳು ಗ್ರಾಮದ ಸತೀಶ್ ಮಾತನಾಡಿ ನಮ್ಮ ಗ್ರಾಮಕ್ಕೆ ಮಾಜಿ ಸಚಿವರಾದ ಎಂ.ಮಹದೇವು, ಡಿ.ಟಿ.ಜಯಕುಮಾರ್, ವಿ.ಶ್ರೀನಿವಾಸಪ್ರಸಾದ್ ಅವರುಗಳಲ್ಲಿ ಯಾರೇ ಆಗಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲಿಲ್ಲ.[ಇದು ಉಪಚುನಾವಣೆ ದಸರಾ! ಮೈಸೂರು ಹೋಟೆಲುಗಳು ಹೌಸ್ ಫುಲ್]

More than 100 people joins Congress

ಈಗ ಕಳೆದ 6 ತಿಂಗಳಿನಿಂದ ಕಾಂಗ್ರೆಸ್ ಸರ್ಕಾರದಿಂದ 1.5 ಕೋಟಿ ರೂ.ಗಳ ಅನುದಾನ ಗ್ರಾಮಕ್ಕೆ ಬಂದಿದ್ದು, ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಕೆಲವು ಮುಖಂಡರು ಬದನವಾಳು ಗ್ರಾಮದಲ್ಲಿ ವೀರಶೈವರು ಕಾಂಗ್ರೆಸ್ ಪಕ್ಷದ ಪರವಾಗಿಲ್ಲ ಎಂದು ಸುಳ್ಳು ಹೇಳಿಕೆ ನೀಡುತ್ತಿದ್ದು, ಇದರಿಂದಾಗಿ ನಾವು ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಅವರ ಬೆಂಬಲಕ್ಕೆ ನಿಂತಿದ್ದೇವೆ ಎಂದರು.[ಗೂಟದ ಕಾರು ನೆನಪಾಗಿ ಗೀತಾ ಚುನಾವಣೆಗೆ:ಹೇಳಿಕೆ ಹಿಂಪಡೆದ ಪ್ರತಾಪ್ ಸಿಂಹ]

ಸಂಸದ ಆರ್.ಧ್ರುವನಾರಾಯಣ್ ರವರು ಮಾತನಾಡಿ ಸಚಿವ ಎಚ್.ಸಿ.ಮಹದೇವಪ್ಪ ಅವರು ಮುಖ್ಯಮಂತ್ರಿಗಳ ಗಮನಸೆಳೆದು ಕ್ಷೇತ್ರಕ್ಕೆ ಸುಮಾರು 500 ಕೋಟಿ ರೂ.ಗಳ ಅನುದಾನವನ್ನು ತಂದಿದ್ದು, ಪ್ರತಿಯೊಂದು ಗ್ರಾಮದಲ್ಲೂ ಅಭಿವೃದ್ದಿ ಕೆಲಸಗಳು ನಡೆಯುತ್ತಿವೆ. ಕ್ಷೇತ್ರದಲ್ಲಿ ಇನ್ನೂ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿಸಲು ಕೇಶವಮೂರ್ತಿ ಅವರನ್ನು ಗೆಲ್ಲಿಸುವುದರ ಮೂಲಕ ನಮ್ಮ ಕೈ ಬಲಪಡಿಸಿ ಎಂದರು.

ಏಪ್ರಿಲ್ 9 ರಂದು ನಡೆಯಲಿರುವ ನಂಜನಗೂಡು ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಮಾತನಾಡಿ ನಂಜನಗೂಡು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ನನಗೆ ಮತವನ್ನು ಚಲಾಯಿಸಬೇಕೆಂದು ಮನವಿ ಮಾಡಿದರು.[ಮಾ. 27 ರಂದು ಗುಂಡ್ಲುಪೇಟೆಗೆ ಕೃಷ್ಣಾಗಮನ!]

ಉಪಚುನಾವಣೆಯ ಫಲಿತಾಂಶ ಏಪ್ರಿಲ್ 13 ರಂದು ಹೊರಬೀಳಲಿದ್ದು, ಬಿಜೆಪಿಯ ಶ್ರೀನಿವಾಸ್ ಪ್ರಸಾದ್ ಮತ್ತು ಕಳಲೆ ಕೇಶವಮೂರ್ತಿ ನಡುವೆ ನೇರ ಹಣಾಹಣಿ ನಡೆಯಲಿದೆ.

English summary
More than hundreds of Veerashaiva people joined congress on Sunday in Nanjangud. Congress MP R. Dhruvanarayan leads the programme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X