ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು : ವೈದ್ಯಕೀಯ ಕಾಲೇಜಿನಲ್ಲಿ ಜೀನ್ಸ್ ನಿಷೇಧ

|
Google Oneindia Kannada News

ಮೈಸೂರು, ಏ. 29 : ಮೈಸೂರಿನ ವೈದ್ಯಕೀಯ ಕಾಲೇಜಿನಲ್ಲಿ ವಸ್ತ್ರ ಸಂಹಿತೆ ಜಾರಿಗೆ ಬಂದಿದೆ. ಜೀನ್ಸ್ ಪ್ಯಾಂಟ್, ಟೀಶರ್ಟ್, ಸ್ಲೀವ್‌ ಲೆಸ್ ಬಟ್ಟೆಗಳನ್ನು ಧರಿಸಬಾರದು ಎಂದು ವಿದ್ಯಾರ್ಥಿಗಳಿಗೆ ಮೌಖಿಕವಾಗಿ ಆದೇಶ ನೀಡಲಾಗಿದೆ.

ಪ್ರತಿನಿತ್ಯ ಸಾರ್ವಜನಿಕರೊಂದಿಗೆ ಬೆರೆತು ರೋಗಿಗಳ ಸೇವೆ ಮಾಡುವ ವೈದ್ಯರು ತಮ್ಮ ವೃತ್ತಿಯ ಗೌರವ ಕಾಪಾಡಿಕೊಳ್ಳಲಿ ಎಂಬ ಉದ್ದೇಶದಿಂದ ಈ ಮೌಖಿಕ ಆದೇಶ ನೀಡಲಾಗಿದೆ ಎಂದು ಕಾಲೇಜಿನ ಡೀನ್ ಡಾ.ಸಾಗರ್ ಹೇಳಿದ್ದಾರೆ.

Dress Code

ವಸ್ತ್ರ ಸಂಹಿತೆ ಹೀಗಿದೆ : ವಿದ್ಯಾರ್ಥಿಗಳು ಜೀನ್ಸ್ ಪ್ಯಾಂಟ್, ಟೀಶರ್ಟ್, ಕ್ಯಾನ್ವಾಸ್ ಶೂಗಳನ್ನು ಧರಿಸಿ ಕಾಲೇಜಿಗೆ ಆಗಮಿಸುವಂತಿಲ್ಲ. ಅದೇ ರೀತಿ ವಿದ್ಯಾರ್ಥಿನಿಯರು ಜೀನ್ಸ್, ಟೀ ಶರ್ಟ್, ಸ್ಲೀವ್‌ ಲೆಸ್ ಬಟ್ಟೆಗಳನ್ನು ಧರಿಸಬಾರದು, ಕೂದಲನ್ನು ಕಟ್ಟಿಕೊಂಟು ಬರಬೇಕು ಎಂದು ಸೂಚನೆ ನೀಡಲಾಗಿದೆ. ['ಮಹಿಳೆ ಜೀನ್ಸ್ ತೊಟ್ಟು ತೊಂದರೆ ಕೊಡಬಾರದು']

ಸಾರ್ವಜನಿಕರೊಂದಿಗೆ ಬೆರೆಯುವ ವಿದ್ಯಾರ್ಥಿಗಳಿಗೆ ಈ ರೀತಿ ಸೂಚನೆ ನೀಡಲಾಗಿದೆ. ಕಾಲೇಜಿನಲ್ಲಿ ವಸ್ತ್ರ ಸಂಹಿತೆಯನ್ನು ಹೇರಿಲ್ಲ ಎಂದು ಡಾ.ಸಾಗರ್ ಸ್ಪಷ್ಟಪಡಿಸಿದ್ದಾರೆ. [ಸ್ಲೀವ್ ಲೆಸ್ ಟಾಪ್ ಧರಿಸೋ ಹುಡುಗಿಯರಿಗೆ ನಿಷೇಧ]

ಕಾಲೇಜಿನಲ್ಲಿ ವಸ್ತ್ರ ಸಂಹಿತೆ ಬಹು ಚರ್ಚಿತ ವಿಷಯವಾಗಿದೆ. ಮಧ್ಯಪ್ರದೇಶ ರಾಜ್ಯದ ಇಂದೋರಿನ ಪ್ರತಿಷ್ಠಿತ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ (IMS) ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಸ್ಲೀಲ್‌ ಲೆಸ್ ವಸ್ತ್ರ ಧರಿಸದಂತೆ ಆದೇಶ ನೀಡಿತ್ತು.

ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಅವಿವಾಹಿತ ಯುವತಿಯರು ಜೀನ್ಸ್ ಧರಿಸುವುದು ಮತ್ತು ಮೊಬೈಲ್ ಬಳಕೆಯನ್ನು ನಿಷೇಧಿಸಿ ಗುಜ್ಜಾರ್ ಸಮುದಾಯ ನಡೆಸಿದ ಪಂಚಾಯಿತಿ ಸಭೆಯಲ್ಲಿ ನಿರ್ಧಾರವನ್ನು ಕೈಗೊಳ್ಳಲಾಗಿತ್ತು.

English summary
Mysuru Medical College and Research Institute has banned wearing of jeans, sleeveless clothes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X