ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಆರಂಭವಾಗಿದೆ ಮಾವು ಮೇಳ

ಒಂದೇ ಸೂರಿನಡಿಯಲ್ಲಿ ವಿವಿಧ ರೀತಿಯ ಮಾವುಗಳನ್ನು ಸವಿಯುವ ಅವಕಾಶ ನಮ್ಮ ಸಾಂಸ್ಕೃತಿಕ ನಗರಿಯ ಮಂದಿಗೂ ಒದಗಿಬಂದಿದೆ. ನಿನ್ನೆ ಮೈಸೂರಿನ ಎಪಿಎಂಸಿ ಸಹಯೋಗದಲ್ಲಿ ಬಂಬೂ ಬಜಾರಿನ ಮಾರುಕಟ್ಟೆಯಲ್ಲಿ ಮಾವು ಮೇಳ ನಡೆಯುತ್ತಿದೆ.

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 10 : ರಾಜ್ಯಾದ್ಯಂತ ಆವರಿಸಿದ್ದ ಬರಗಾಲದ ಪರಿಣಾಮ​ ಈ ಭಾರಿಯ ಮಾವಿನ ಫಸಲಿಗೂ ತಟ್ಟಿತ್ತು. ಹೀಗಾಗಿ ಮಾರುಕಟ್ಟೆಗೆ ಮಾವು ಪ್ರವೇಶಿಸುವುದು ಕೊಂಚ ತಡವಾಗಿತ್ತು. ಆದ್ರೆ ಇದೀಗ ಒಂದೇ ಸೂರಿನಡಿಯಲ್ಲಿ ವಿವಿಧ ರೀತಿಯ ಮಾವುಗಳನ್ನು ಸವಿಯುವ ಅವಕಾಶ ನಮ್ಮ ಸಾಂಸ್ಕೃತಿಕ ನಗರಿಯ ಮಂದಿಗೂ ಒದಗಿಬಂದಿದೆ.

ನಿನ್ನೆ (ಮೇ 11)ಯಿಂದ ಮೈಸೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಹಯೋಗದಲ್ಲಿ ಬಂಬೂ ಬಜಾರಿನ ಮಾರುಕಟ್ಟೆಯಲ್ಲಿ ಮಾವು ಮೇಳಕ್ಕೆ ಚಾಲನೆ ನೀಡಲಾಗಿದೆ. ರೈತರಿಂದ ನೇರವಾಗಿ ಗ್ರಾಹಕರಿಗೆ ವಿವಿಧ ತಳಿಯ ಮಾವಿನ ಹಣ್ಣುಗಳನ್ನು ರಿಯಾಯಿತಿ ದರದಲ್ಲಿ ಒಂದು ತಿಂಗಳ ಕಾಲ ತಲುಪಿಸುವ ಉದ್ದೇಶವನ್ನು ಮೇಳ ಹೊಂದಿದೆ. ಗ್ರಾಹಕರ ಹಿತದೃಷ್ಟಿಗಾಗಿ 40ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ.[ಮೈಸೂರಿನಲ್ಲಿ ಎಸ್ ವಿವೈಎಂ ನಿಂದ ಇಟಿ-17 ಎಂಬ ವಿಶಿಷ್ಟ ಕಾರ್ಯಕ್ರಮ]

Mango mela in Palace city Mysuru

ಮಾವಿನ ಕಾಯಿಯನ್ನು ಕೃತಕವಾಗಿ ಹಣ್ಣು ಮಾಡಲು ಬಳಸುವ ರಾಸಾಯನಿಕಗಳ ದುಷ್ಪರಿಣಾಮಗಳ ಬಗ್ಗೆಯೂ ಮೇಳದಲ್ಲಿ ಮಾಹಿತಿ ನೀಡಲಾಗುತ್ತದೆ.[ನಾಡದೇವತೆಯ ವರ್ಧಂತಿಗೆ ತಯಾರಾಗುತ್ತಿದೆ ಸಾಂಸ್ಕೃತಿಕ ನಗರಿ]
Mango mela in Palace city Mysuru

ಮೇಳದಲ್ಲಿ ದೊರೆಯಬಹುದಾದ ಹಣ್ಣುಗಳು
ಮಾವು ಮೇಳದಲ್ಲಿ ಹೆಚ್ಚಾಗಿ ಬೇನಿಶಾ, ತೋತಾಪುರಿ, ರಸಪೂರಿ, ಕೇಸರ್, ಮಲ್ಲಿಕಾ, ಮಲ್ಗೋವಾ, ಆಪೂಸು, ಖಾದರ, ಪುನಾಸ್, ಆಮ್ಲೆಟ್, ಸುವರ್ಣರೇಖಾ, ಚಿನ್ನರಸ, ಪೆದ್ದರಸ, ಲಡ್ಡು ಮುಂತಾದ ತಳಿಯ ಹಣ್ಣುಗಳು ಲಭ್ಯವಾಗಲಿವೆ. ರೈತರಿಂದ ನೇರವಾಗಿ ಗ್ರಾಹಕರಿಗೆ ಮಾವಿನ ಹಣ್ಣುಗಳನ್ನು ತಲುಪಿಸುವ ಉದ್ದೇಶ ಹೊಂದಿದ ಈ ಮಾವು ಮೇಳ ಸರ್ವರಿಗೂ ಪ್ರಯೋಜನಕಾರಿಯಾಗಲಿದೆ.

English summary
Mango fair has started in Mysuru from yesterday. The fair is taking place in Bamboo bazar, Mysuru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X