ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸವಾಲಿದ್ದ ಮಾಲಂಗಿ ಗ್ರಾಮಪಂಚಾಯಿತಿಯಲ್ಲಿ ಮಹಿಳೆಯರ ಕಮಾಲ್!

By ಬಿ.ಎಂ.ಲವಕುಮಾರ್
|
Google Oneindia Kannada News

ಮೈಸೂರು, ಮಾರ್ಚ್ 7: ಮಹಿಳಾ ಅಭಿವೃದ್ಧಿ ಅಧಿಕಾರಿ, ಮಹಿಳಾ ಅಧ್ಯಕ್ಷೆ ಮತ್ತು ಸದಸ್ಯೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಶೀಘ್ರ ಅಭಿವೃದ್ಧಿಯತ್ತ ಸಾಗುತ್ತವೆ ಎಂಬುದಕ್ಕೆ ಪಿರಿಯಾಪಟ್ಟಣ ತಾಲೂಕಿನ ಮಾಲಂಗಿ ಗ್ರಾಮ ಪಂಚಾಯಿತಿ ಸಾಕ್ಷಿಯಾಗಿದೆ.

ಗ್ರಾಮಗಳನ್ನು ಬಯಲು ಶೌಚ ಮುಕ್ತ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಮಾಲಂಗಿ ಗ್ರಾಮ ಪಂಚಾಯಿತಿ ಶಕ್ತಿ ಮೀರಿ ಶ್ರಮಿಸುತ್ತಿರುವುದು ಕಂಡುಬರುತ್ತಿದೆ. ಇದು ಹೇಗೆ ಸಾಧ್ಯವಾಗುತ್ತಿದೆ ಎಂಬುದನ್ನು ಗಮನಿಸಿದರೆ ಇಲ್ಲಿನ ಗ್ರಾಮ ಪಂಚಾಯಿತಿಗೆ ಮಂಗಳಗೌರಿ ಎಂಬುವರು ಅಧ್ಯಕ್ಷರಾಗಿದ್ದರೆ, ಅಭಿವೃದ್ಧಿ ಅಧಿಕಾರಿಯಾಗಿ ಶೋಭಾ ದಿನೇಶ್ ಕಾರ್ಯನಿರ್ವಹಿಸುತ್ತಿದ್ದಾರೆ.

Malangi- a model GP in Mysuru district

ಇಲ್ಲಿನ ಸದಸ್ಯೆ ಸುನೀತಾ ಅವರು ಬಿ.ಎ., ಪದವೀಧರೆಯಾಗಿದ್ದು, ಶೌಚಾಲಯ ನಿರ್ಮಾಣದಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಅದಕ್ಕಾಗಿಯೇ ಶೌಚಾಲಯ ಕುರಿತಂತೆ ಐದು ದಿನಗಳ ತರಬೇತಿಯನ್ನು ಪಡೆದಿದ್ದಾರೆ.

ಪ್ರತಿ ಗ್ರಾಮಕ್ಕೂ ಭೇಟಿ ನೀಡಿ, ಜನರಿಗೆ ಶೌಚಾಲಯ ಏಕೆ ನಿರ್ಮಾಣ ಮಾಡಬೇಕು, ಅದರ ಉಪಯೋಗ ಮತ್ತು ನಿರ್ಮಾಣಕ್ಕೆ ಸಂಬಂಧಿಸಿದಂತೆ ಸರಕಾರದಿಂದ ನೀಡುವ ಸಹಾಯದ ಕುರಿತಂತೆ ಮಾಹಿತಿ ನೀಡುವ ಮೂಲಕ ಅವರ ಮನವೊಲಿಸಿ ಎಲ್ಲರೂ ಶೌಚಾಲಯ ನಿರ್ಮಾಣ ಮಾಡುವತ್ತ ಒಲವು ತೋರುವ ಕಾರ್ಯವನ್ನು ಮಾಡುವಲ್ಲಿ ಯಶಸ್ವಿಯಾಗಿರುವುದು ಕಂಡುಬರುತ್ತಿದೆ.

Malangi- a model GP in Mysuru district

ಮಾಲಂಗಿ ಗ್ರಾಮ ಪಂಚಾಯಿತಿಯಲ್ಲಿ 15 ಸದಸ್ಯರಿದ್ದು, ಎಲ್ಲರ ವಿಶ್ವಾಸ ಪಡೆದು ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಪಿಡಿಒ ಶೋಭಾ ದಿನೇಶ್ ಶ್ರಮ ಶ್ಲಾಘನೀಯವಾಗಿದೆ. ಪ್ರತಿ ಗ್ರಾಮದ ಅಧ್ಯಕ್ಷರು ಮತ್ತು ಸದಸ್ಯರೊಂದಿಗೆ ತೆರಳಿ ಗ್ರಾಮಸ್ಥರನ್ನು ಭೇಟಿ ಮಾಡಿ, ಅವರ ಸಮಸ್ಯೆಗಳನ್ನು ಆಲಿಸಿ, ಅದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳುವಲ್ಲಿಯೂ ಅವರು ಯಶಸ್ವಿಯಾಗಿದ್ದಾರೆ.

ಮಾಲಂಗಿ ಗ್ರಾಮ ಪಂಚಾಯಿತಿಯಲ್ಲಿ 6060 ಜನಸಂಖ್ಯೆ ಹೊಂದಿದ್ದು, 2522 ಕುಟುಂಬಗಳು ವಾಸಿಸುತ್ತಿವೆ. 2013-14ನೇ ಸಾಲಿನಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಶೌಚಾಲಯ ನಿರ್ಮಾಣಕ್ಕೆ ಪ್ರೋತ್ಸಾಹ ಧನ ನೀಡುವ ಮೂಲಕ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

Malangi- a model GP in Mysuru district

ಅಲ್ಲಿಂದ ಇಲ್ಲಿಯವರೆಗೆ ಇರುವ 2522 ಕುಟುಂಬಗಳ ಪೈಕಿ 1232 ಕುಟುಂಬಗಳಿಗೆ ಶೌಚಾಲಯವನ್ನು ನಿರ್ಮಿಸಲಾಗಿದೆ. 474 ಕುಟುಂಬಗಳು ಸ್ವತಃ ತಾವೇ ಶೌಚಾಲಯಗಳನ್ನು ನಿರ್ಮಿಸಿಕೊಂಡಿವೆ. ಇನ್ನು 816 ಶೌಚಾಲಯ ನಿರ್ಮಾಣ ಬಾಕಿಯಿದ್ದು, 2016-17ನೇ ಸಾಲಿನಲ್ಲಿ ಅದನ್ನು ಪೂರ್ಣಗೊಳಿಸುವ ವಿಶ್ವಾಸವನ್ನು ಗ್ರಾಪಂ ಅಭಿವೃದ್ಧಿ ಅಧಿಕಾರಿ ಶೋಭಾ ದಿನೇಶ್ ವ್ಯಕ್ತಪಡಿಸುತ್ತಾರೆ.

ಗ್ರಾಮಗಳನ್ನು ಸಿಬ್ಬಂದಿವಾರು ದತ್ತು ಪಡೆದಿದ್ದು, ಶೌಚಾಲಯ ರಹಿತರ ಪಟ್ಟಿ ತಯಾರಿಸಿ ಅವರಿಗೆ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಸಲಹೆ ಸೂಚನೆ ನೀಡುತ್ತಾರೆ. ಕಡುಬಡವ ಕುಟುಂಬಗಳಾದರೆ ಅವರಿಗೆ ಸ್ವಸಹಾಯ ಸಂಘಗಳ ಮೂಲಕ ಸಾಲ ನೀಡಲು ಶಿಫಾರಸು ಮಾಡುತ್ತಾರೆ. ಶಾಲಾ ಮಕ್ಕಳಿಗೆ ಶೌಚಾಲಯದ ಉಪಯೋಗದ ಬಗ್ಗೆ ತಿಳಿಸಿ ಅವರ ಮೂಲಕ ಪೋಷಕರ ಮನಪರಿವರ್ತನೆ ಮಾಡಲಾಗುತ್ತಿದೆ.

Malangi- a model GP in Mysuru district

ಮಹಿಳೆಯರು ಮನಸ್ಸು ಮಾಡಿದರೆ ತಮ್ಮ ಕುಟುಂಬದ ಅಭಿವೃದ್ಧಿಯೊಂದಿಗೆ ಗ್ರಾಮದ ಅಭಿವೃದ್ಧಿಯನ್ನು ಮಾಡಿ ದೇಶಕ್ಕೆ ಕೊಡುಗೆ ನೀಡಬಹುದು ಎಂಬುದನ್ನು ಮಾಲಂಗಿಯ ಮಹಿಳಾ ಅಧ್ಯಕ್ಷರು, ಸದಸ್ಯರು, ಪಿಡಿಒ ಅವರು ತೋರಿಸಿಕೊಟ್ಟಿದ್ದಾರೆ. ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಸಾಧಕ ಮಹಿಳೆಯರಿಗೊಂದು ಸಲಾಮ್..

English summary
Malangi- A model gram panachayath in Mysuru district. do you know, Why? Here is the reason. How these women have changed the picture of Malangi Grama panchayath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X