ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಸೆಂಟ್ರಲ್ ಜೈಲು ಕಟ್ಟಲು ಜಾಗ ಬೇಕಾಗಿದೆ

|
Google Oneindia Kannada News

ಮೈಸೂರು, ಫೆ.17 : ಬಂಧಿಖಾನೆ ಇಲಾಖೆ ಮೈಸೂರಿನಲ್ಲಿ ನೂತನವಾದ ಜೈಲನ್ನು ನಿರ್ಮಿಸಲು ಸ್ಥಳಕ್ಕಾಗಿ ಹುಡುಕಾಟ ಆರಂಭಿಸಿದೆ. ನಗರದಿಂದ 20 ಕಿ.ಮೀ.ವ್ಯಾಪ್ತಿಯಲ್ಲಿ ಹೊಸ ಜೈಲು ನಿರ್ಮಿಸಲು ಕನಿಷ್ಠ 100 ಎಕರೆ ಸ್ಥಳಾವಕಾಶದ ಅಗತ್ಯವಿದೆ. ಆದರೆ, ಇದುವರೆಗೂ ಜಾಗ ಲಭ್ಯವಾಗಿಲ್ಲ.

ಸದ್ಯ ಮೈಸೂರಿನ ಸೆಂಟ್ರಲ್‌ ಜೈಲಿನಲ್ಲಿ ಕೈದಿಗಳ ಸಂಖ್ಯೆ ಹೆಚ್ಚಾಗಿದೆ. 1862ರಲ್ಲಿ ನಿರ್ಮಿಸಿದ ಈ ಜೈಲಿನಲ್ಲಿ 562 ಕೈದಿಗಳು ಇರಬಹುದು. ಆದರೆ ಫೆಬ್ರವರಿ ತಿಂಗಳಿನ ಮಾಹಿತಿಯಂತೆ ಜೈಲಿನಲ್ಲಿ 1,208 ಕೈದಿಗಳಿದ್ದಾರೆ. ಆದ್ದರಿಂದ ನೂತನ ಜೈಲು ನಿರ್ಮಿಸಲು ಇಲಾಖೆ ಮುಂದಾಗಿದೆ. [ಪರಪ್ಪನ ಅಗ್ರಹಾರದಲ್ಲಿ ಯಾರು ಮಾಡುತ್ತಿದ್ದಾರೆ ಕಿತಾಪತಿ?]

Jail

ನಗರದ 20 ಕಿ.ಮೀ. ಅಂತರದಲ್ಲಿ ಇಲಾಖೆಗೆ ಜಾಗದ ಅಗತ್ಯವಿದೆ. ಆದರೆ, ನಗರದ ಸುತ್ತಲಿನ ಜಾಗವನ್ನು ಖಾಸಗಿ ಬಿಲ್ಡರ್‌ಗಳು ವಶಪಡಿಸಿಕೊಂಡಿದ್ದಾರೆ. ಆದ್ದರಿಂದ ಇದುವರೆಗೂ ಸೂಕ್ತವಾದ ಸ್ಥಳವಕಾಶ ಲಭ್ಯವಾಗಿಲ್ಲ. ಜಿಲ್ಲಾಡಳಿತದ ಜೊತೆಗೆ ಬಂಧಿಖಾನೆ ಇಲಾಖೆ ಈ ಕುರಿತು ಮಾತುಕತೆ ನಡೆಸಿದೆ. ಸೂಕ್ತ ಸ್ಥಳವಕಾಶ ಹುಡುಕಿಕೊಡುವುದಾಗಿ ಜಿಲ್ಲಾಡಳಿತ ಭರವಸೆ ನೀಡಿತ್ತು.

ನಗರದ ಸಮೀಪ ಜೈಲು ನಿರ್ಮಾಣ ಮಾಡಿದರೆ ಕೈದಿಗಳಿಗೆ ಆರೋಗ್ಯದ ತೊಂದರೆ ಉಂಟಾದರೆ ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲು ಅನುಕೂಲವಾಗುತ್ತದೆ. ಆದ್ದರಿಂದ ನಗರದ ಹೊರ ಪ್ರದೇಶಗಳಲ್ಲಿ ಕಟ್ಟಡ ನಿರ್ಮಿಸಲು ಸ್ಥಳ ನೀಡುವಂತೆ ಮನವಿ ಮಾಡಲಾಗಿದೆ ಎಂದು ಜೈಲಿನ ಅಧೀಕ್ಷಕಿ ದಿವ್ಯಶ್ರೀ ಹೇಳಿದ್ದಾರೆ. [ಮಂಗಳೂರು ಜೈಲಿನಲ್ಲಿ ಶೀಘ್ರವೇ ಮೊಬೈಲ್ ಜಾಮರ್]

English summary
Karnataka Department of Prisons is seeking land in around Mysuru city to construct a new prison. The present City Central Jail has already exceeded its capacity. So officials have sought 100 acres anywhere within the radius of 20 km from the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X