ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ನಾನು ಆಸ್ತಿಕನೇ, ನಾಸ್ತಿಕ ಎಂದು ಅಪಪ್ರಚಾರ ಮಾಡುತ್ತಾರೆ'

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 23 : ಟಿ.ನರಸೀಪುರದಲ್ಲಿ ನಡೆಯುತ್ತಿದ್ದ 10ನೇ ವರ್ಷದ ಐತಿಹಾಸಿಕ ಕುಂಭಮೇಳಕ್ಕೆ ತೆರಬಿದ್ದಿದ್ದು, ಕೊನೆಯ ದಿನವಾದ ಸೋಮವಾರ ಹರಚರಗುರುಮೂರ್ತಿಗಳು ಸೇರಿದಂತೆ ಸಹಸ್ರಾರು ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು.

ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸುವುದರೊಂದಿಗೆ ಚಂಡಿ ಹೋಮ, ಪೂರ್ಣಾಹುತಿ ಹಾಗೂ ಪೂಜಾ ಕೈಂಕರ್ಯಗಳು ನಡೆದವು. ಇದೇ ಸಂದರ್ಭ ಕುಂಭಮೇಳದಲ್ಲಿ ಪಾಲ್ಗೊಂಡಿದ್ದ ವಿವಿಧ ಮಠಾಧೀಶರು ಮತ್ತು ಗಣ್ಯರು, ಭಕ್ತರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಬಳಿಕ ದೇವಾಲಯಗಳಿಗೆ ಭೇಟಿ ನೀಡಿದರು. [ಮಹಾಕುಂಭಮೇಳದಿಂದ ಕಳೆಗಟ್ಟಿದ ಟಿ. ನರಸೀಪುರ]

kuimbamela

ಸೋಮವಾರ ಕುಂಭಮೇಳದ ಸಮಾರೋಪ ಸಮಾರಂಭದ ಧಾರ್ಮಿಕ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. 'ನೂತನ ಪ್ರವಾಸೋದ್ಯಮ ನೀತಿಯಂತೆ ತ್ರಿವೇಣಿ ಸಂಗಮ, ಕಾವೇರಿ ನದಿ ಪಾತ್ರಗಳ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗಿದೆ' ಎಂದು ಹೇಳಿದರು.

ತಲಕಾಡು, ಸೋಮನಾಥಪುರ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು ಹೇಳಿದ ಮುಖ್ಯಮಂತ್ರಿಗಳು, ತ್ರಿವೇಣಿ ಸಂಗಮ, ನರಸೀಪುರ ಎರಡು ಕ್ಷೇತ್ರಗಳ ಅಭಿವೃದ್ಧಿಗೆ 50 ಕೋಟಿ ಅನುದಾನ ನೀಡಿರುವುದಾಗಿ ಹೇಳಿದರು.

ನಾನು ಕೂಡ ಆಸ್ತಿಕನೇ : 'ಅನೇಕರು ಸಿದ್ದರಾಮಯ್ಯ ನಾಸ್ತಿಕ ಎಂದು ಅಪಪ್ರಚಾರ ಮಾಡುತ್ತಾರೆ. ನಾನು ಕೂಡ ಆಸ್ತಿಕನೇ. ನಾನು ನಂಬಿಕೆಯನ್ನು ನಂಬುತ್ತೇನೆ, ಒಳಿತಿನ ಹಿತದೃಷ್ಟಿಯಿಂದ ಇರುವ ನಂಬಿಕೆಗಳಿಗೆ ನಾನು ಬೆಲೆ ಕೊಡುತ್ತೇನೆ. ಮೌಢ್ಯತೆ, ಕಂದಾಚಾರಗಳನ್ನು ನಾನು ನಂಬುವುದಿಲ್ಲ. ಹಿಮಾಲಯಕ್ಕೆ ಹೋಗಿ ದೇವರನ್ನು ಕಾಣಬೇಕೆಂಬುದರಲ್ಲಿ ನನಗೆ ನಂಬಿಕೆ ಇಲ್ಲ' ಎಂದರು.

siddaramaiah

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥಸ್ವಾಮೀಜಿ ಅವರು ಮಾತನಾಡಿ 'ಕಾವೇರಿ, ಕಪಿಲಾ ಸ್ಫಟಿಕ ಸರೋವರಗಳ ಸಂಗಮ ಕ್ಷೇತ್ರ ತಿರುಮಕೂಡಲು ನರಸೀಪುರ ಕುಂಭಮೇಳ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಶಾಶ್ವತವಾದ ಯೋಜನೆಗಳನ್ನು ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವರು ಅನುಷ್ಠಾನಗೊಳಿಸಬೇಕು' ಎಂದು ಮಾಡಿದರು.

ಲೋಕೋಪಯೋಗಿ ಸಚಿವ ಮಹದೇವಪ್ಪ, ಸಹಕಾರ ಸಚಿವ ಮಹದೇವಪ್ರಸಾದ್, ಚಾಮರಾಜನಗರ ಸಂಸದ ಆರ್.ಧ್ರುವನಾರಾಯಣ, ಶಾಸಕರಾದ ನರೇಂದ್ರ, ಆರ್.ಧರ್ಮಸೇನಾ, ಎಂ.ಕೆ. ಸೋಮಶೇಖರ್, ಮಾಜಿ ಶಾಸಕ ಎಸ್.ಕೃಷ್ಣಪ್ಪ ಮುಂತಾದವರು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

English summary
Thousands of pilgrims on Monday witnessed for concluding day of the Kumbh Mela, held every 3 years at the sangam T. Narasipura, Mysuru district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X