ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ವೈಭವದ ಶ್ರೀ ಕೃಷ್ಣ ಜಯಂತಿ ಆಚರಣೆ

By Yashaswini
|
Google Oneindia Kannada News

ಮೈಸೂರು, ಆಗಸ್ಟ್ 14: ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸಲು ಅವತಾರವೆತ್ತಿದವನೇ ಶ್ರೀಕೃಷ್ಣ. ಮಹಾಭಾರತದಂತಹ ವಿಸ್ತಾರವಾದ ಮಹಾಕಾವ್ಯದಲ್ಲಿ ಕೃಷ್ಣನೇ ಸರ್ವವ್ಯಾಪಿಯಾಗಿದ್ದಾನೆ ಎಂದು ಸಾಹಿತಿ ಪ್ರೊ.ಸಿ.ನಾಗಣ್ಣ ತಿಳಿಸಿದರು.

ಮೈಸೂರು: ಕೆ.ಆರ್.ಪೊಲೀಸ್ ಸ್ಟೇಶನ್ ನಲ್ಲಿ ಕೃಷ್ಣ ಮಂದಿರ!ಮೈಸೂರು: ಕೆ.ಆರ್.ಪೊಲೀಸ್ ಸ್ಟೇಶನ್ ನಲ್ಲಿ ಕೃಷ್ಣ ಮಂದಿರ!

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಶ್ರೀ ಕೃಷ್ಣ ಜಯಂತ್ಯೋತ್ಸವ ಸಮಿತಿ ವತಿಯಿಂದ ಕಲಾಮಂದಿರದಲ್ಲಿ ಸೋಮವಾರ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕೃಷ್ಣ ಕೋಟಿ ಮನ್ಮಥರಿಗೆ ಸಮ, ನಿರ್ಲಿಪ್ತ ಪುರುಷೋತ್ತಮ. ಯಾದವ ಕುಲದವರಿಗೆ ನಿತ್ಯ ಸ್ಫೂರ್ತಿ. ಇಂತಹ ಶ್ರೀಕೃಷ್ಣ ಚರಿತ್ರೆಯನ್ನು ದಾಸರು ತಮ್ಮ ಕೀರ್ತನೆಗಳ ಮೂಲಕ ಇನ್ನೂ ಜೀವಂತವಾಗಿಟ್ಟಿದ್ದಾರೆ. ಗ್ರಾಮೀಣ ಭಾಗದಲ್ಲಿ ನಾಟಕಗಳ ಮೂಲಕ ಕೃಷ್ಣನ ಜೀವಂತಿಕೆ ಇದೆ ಎಂದರು.

Krishna Janmastami celebration at Mysore Kalamandir.

ವೇದಿಕೆಯಲ್ಲಿ ಕೃಷ್ಣ, ಯಶೋದೆ ಅವತಾರವೆತ್ತಿದ್ದ ಹತ್ತಾರು ಚಿಣ್ಣರು
ಇದೇ ವೇಳೆ ಅಲ್ಲೊಂದು ಸುಂದರ ಲೋಕ ಸೃಷ್ಟಿಯಾಗಿತ್ತು. ಬೆಣ್ಣೆ ಮೆಲ್ಲುತ್ತ ಓಡುತ್ತಿರುವ ಮುದ್ದು ಕೃಷ್ಣರು, ಯಶೋದಾ ಕೃಷ್ಣ, ರಾಧಾ ಕೃಷ್ಣರು ತಮ್ಮ ತೊದಲು ನುಡಿಗಳನ್ನಾಡುತ್ತ ಬಾಲಲೀಲೆಯಲ್ಲಿ ತಲ್ಲೀನರಾಗಿದ್ದರು.
Krishna Janmastami celebration at Mysore Kalamandir.

ಮೈಸೂರಿನಲ್ಲಿಯೂ ವಿವಿಧ ದೇವಸ್ಥಾನಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿವಿಧ ಪೂಜಾದಿ ಸೇವೆಗಳು ನಡೆಯಿತು. ಸಹಸ್ರಾರು ಭಕ್ತರು ಪಾಲ್ಗೊಂಡು ಪೂಜೆ ಸಲ್ಲಿಸಿದರು.

English summary
Krishna Janmastami celebration at Mysore Kalamandir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X