ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಮಹಾರಾಜರ 550 ವರ್ಷಗಳ ಭವ್ಯ ಇತಿಹಾಸ

By ಬಿ.ಎಂ. ಲವಕುಮಾರ್, ಮೈಸೂರು
|
Google Oneindia Kannada News

ಭಾರತಕ್ಕೆ ಸ್ವಾತಂತ್ರ್ಯ ಸಿಗುವವರೆಗೆ ಸುಮಾರು ಅರ್ಧ ಸಹಸ್ರಮಾನಕ್ಕೂ ಹೆಚ್ಚು ಕಾಲ ಕರ್ನಾಟಕವನ್ನು, ಸಂಸ್ಕೃತಿಯನ್ನು, ಶ್ರೀಮಂತಿಕೆಯನ್ನು ಮೆರೆದಾಡಿಸಿದ ಹೆಗ್ಗಳಿಕೆ ಮೈಸೂರು ಅರಸರದು. ಈ ಅವಧಿಯಲ್ಲಿ ಯಾವ್ಯಾರ ರಾಜರು ಮೈಸೂರು ಪ್ರಾಂತ್ಯವನ್ನು ಆಳಿ ಮೆರೆದಾಡಿದರು ಎಂಬುದರತ್ತ ಒಂದು ನೋಟ ಇಲ್ಲಿದೆ. ಶ್ರೀಕಂಠದತ್ತ ಒಡೆಯರ್ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನವನ್ನು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತುಂಬುತ್ತಿದ್ದು, ಮೈಸೂರಿನ ಭವ್ಯ ಪರಂಪರೆ ಮುಂದುವರಿಯುತ್ತಿದೆ. ಮೈಸೂರು ಮಹಾರಾಜರ ಭವ್ಯ ಇತಿಹಾಸದ ಪುಟಗಳನ್ನು ಇಲ್ಲಿ ಓದಿರಿ - ಸಂಪಾದಕ.
***
ಮೈಸೂರು ರಾಜರ ಆಡಳಿತಾವಧಿ ಚರಿತ್ರೆ ಪ್ರಕಾರ 1399ರಿಂದ ಆರಂಭವಾಗುತ್ತದೆ. ಯದುರಾಯರನ್ನು ಯದುವಂಶದ ಸ್ಥಾಪಕರೆಂದು ಹೇಳಲಾಗುತ್ತದೆ. ಯದುರಾಯ ಮತ್ತು ಕೃಷ್ಣರಾಯರು ಉತ್ತರದ ದ್ವಾರಕಾಪಟ್ಟಣದ ರಾಜದೇವನ ಮಕ್ಕಳಾಗಿದ್ದು, ಇವರು ಪುರಾಣ ಪ್ರಸಿದ್ಧ ಯಾದವಗಿರಿ(ಮೇಲುಕೋಟೆ)ಗೆ ತಮ್ಮ ಮನೆ ದೇವರಾದ ಚೆಲುವನಾರಾಯಣ ಸ್ವಾಮಿಯ ದರ್ಶನ ಮಾಡಲು ಆಗಮಿಸುತ್ತಾರೆ. ದರ್ಶನ ಮುಗಿಸಿಕೊಂಡು ಕಾವೇರಿ ನದಿ ದಾಟಿ ಮೈಸೂರನ್ನು ತಲುಪುತ್ತಾರೆ.

ಈ ಸಂದರ್ಭ ಮೈಸೂರಿನಲ್ಲಿ ಪಾಳೆಗಾರರಾಗಿದ್ದ ಚಾಮರಾಜ ಎಂಬುವರು ಆಡಳಿತ ನಡೆಸಿ ತೀರಿಕೊಂಡಿದ್ದರು. ಇವರಿಗೆ ಹೆಂಡತಿ ಹಾಗೂ ಸುಂದರ ಮಗಳಿದ್ದರು. ಪಾಳೆಗಾರ ಚಾಮರಾಜರು ಕಾಲವಾದ ಬಳಿಕ ಮೈಸೂರು ಸೀಮೆಯ ದಳವಾಯಿಯಾಗಿದ್ದ ಕೊರಗಳ್ಳಿ ಮಾರನಾಯಕ ಇವರಿಗೆ ಹಿಂಸೆ ನೀಡಲು ಆರಂಭಿಸಿದನಲ್ಲದೆ, ಚಾಮರಾಜರ ಪುತ್ರಿ ರಾಜಕುಮಾರಿ ದೇವಾಜಮ್ಮಣಿಯನ್ನು ತನಗೆ ವಿವಾಹ ಮಾಡಿಕೊಡುವಂತೆ ಪೀಡಿಸತೊಡಗಿದನು. [ಮೈಸೂರಿನಲ್ಲಿ ಮರುಕಳಿಸಲಿದೆ ಗತಕಾಲದ ರಾಜವೈಭವ]


ಈತನ ಹಿಂಸೆಯಿಂದ ಬೇಸತ್ತ ಮಹಾರಾಣಿ ಜಂಗಮರ ಸಹಾಯದಿಂದ ಯದುರಾಯ ಮತ್ತು ಕೃಷ್ಣರಾಯರ ಮಧ್ಯೆ ಸಂಧಾನ ನಡೆಸಿ ಅವರ ಸಹಕಾರದಿಂದ ಮಾರನಾಯಕನನ್ನು ಕೊಂದು ಬಳಿಕ ಯದುರಾಯನಿಗೆ ತನ್ನ ಮಗಳು ದೇವಾಜಮ್ಮಣಿಯನ್ನು ಕೊಟ್ಟು ವಿವಾಹ ಮಾಡುವ ಮೂಲಕ ಮೈಸೂರಿನಲ್ಲಿ ಯದುವಂಶದ ಹುಟ್ಟಿಗೆ ಕಾರಣರಾದರು.

ಅಲ್ಲಿಂದ ಮುಂದಕ್ಕೆ 1423ರಿಂದ 1459ರವರೆಗೆ ಒಂದನೇ ಹಿರಿಯ ಬೆಟ್ಟದ ಚಾಮರಾಜ ಒಡೆಯರ್, 1459ರಿಂದ 1478ರವರೆಗೆ ಹಿರಿಯ ಬೆಟ್ಟದ ಚಾಮರಾಜ ಒಡೆಯರ್ ಪುತ್ರ ತಿಮ್ಮರಾಜ ಒಡೆಯರ್ ಆಡಳಿತ ನಡೆಸಿದರೆ, ನಂತರ 1478ರಿಂದ 1513ರವರೆಗೆ ಎರಡನೇ ಹಿರಿಯ ಚಾಮರಾಜ ಒಡೆಯರ್, 1513ರಿಂದ 1553ರವರೆಗೆ ಮೂರನೇ ಹಿರಿಯ ಬೆಟ್ಟದ ಚಾಮರಾಜ ಒಡೆಯರ್ ಆಡಳಿತ ನಡೆಸಿದರು.


1553ರಿಂದ 1572ರವರೆಗೆ ಆಡಳಿತ ನಡೆಸಿದ ಎರಡನೆಯ ತಿಮ್ಮರಾಜ ಒಡೆಯರ್ ಮೈಸೂರನ್ನು ವಿಸ್ತರಿಸಿದರು. ಸುತ್ತಲಿನ ಪಾಳೇಗಾರರನ್ನು ಗೆದ್ದು ಅವರಿಂದ ಆನೆ, ಕುದುರೆ ಮೊದಲಾದವುಗಳನ್ನು ಪಡೆದರಲ್ಲದೆ 'ಬಿರುದೆಂತೆಂಬರ ಗಂಡ' ಎಂಬ ಬಿರುದಿಗೂ ಪಾತ್ರರಾದರು.
English summary
History and background of royal family of Kings of Mysore (Mysuru). The Wadiyar or Wodeyar dynasty was an Indian Hindu dynasty that ruled the Kingdom of Mysore from 1399 to 1947. The kingdom was incorporated into the Dominion of India after its independence from British rule.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X