ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಹಿ ತಯಾರಿಸಲು ಮೈಸೂರು ಪೈಂಟ್ಸ್ ಗೆ ಸೂಚನೆ

ಸಾರ್ವತ್ರಿಕ ಚುನಾವಣೆಗಳಿಗೆ ಉತ್ಕೃಷ್ಟ ಗುಣಮಟ್ಟದ ಅಳಿಸಲಾಗದಂತಹ ಶಾಹಿ ಪೂರೈಸುವ ಮೈಸೂರು ಪೈಂಟ್ಸ್ ಅಂಡ್ ವಾರ್ನಿಷ್ ಗೆ ಇಂಕ್ ಪೂರೈಸಲು ಕೇಂದ್ರ ಸರ್ಕಾರ ಸೂಚೆನ

By Prithviraj
|
Google Oneindia Kannada News

ಮೈಸೂರು, ನವೆಂಬರ್, 15: ಪದೇ ಪದೇ ಹಣ ವಿನಿಮಯ ಮಾಡಿಕೊಳ್ಳುವ ದಂಧೆಯಲ್ಲಿ ತೊಡಗಿರುವವರಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಹಣ ವಿನಿಮಯಮಾಡಿಕೊಳ್ಳಲು ಬರುವ ಗ್ರಾಹಕರ ಬೆರಳಿಗೆ ಶಾಹಿ ಹಾಕುವುದಾಗಿ ಘೋಷಿಸಿದೆ.

ಎಲ್ಲ ಸಾರ್ವತ್ರಿಕ ಚುನಾವಣೆಗಳಿಗೂ ಅಳಿಯಲಾರದಂತಹ ಇಂಕ್ ಪೂರೈಸುವ ಮೈಸೂರು ಪೈಂಟ್ಸ್ ಅಂಡ್ ವಾರ್ನಿಷ್ ಸಂಸ್ಥೆಗೆ ಹಣಕಾಸು ಇಲಾಖೆ ಸೂಚಿಸಿದೆ.

Keep stocks of indelible ink ready, Mysore Paints told

ಈ ಕುರಿತು ಸ್ಪಷ್ಟನೆ ನೀಡಿರುವ ಮೈಸೂರು ಪೈಂಟ್ಟ್ ಅಂಡ್ ವಾರ್ನಿಷ್ ಸಂಸ್ಥೆಯ ಜನರಲ್ ಮ್ಯಾನೇಜರ್ ಸಿ. ಹರಿಕುಮಾರ್ ಅವರು "ಇಂಕ್ ಬಾಟಿಲ್ ಗಳನ್ನು ಪೂರೈಸುವಂತೆ ಸರ್ಕಾರದಿಂದ ನಮಗೆ ಸೂಚನೆ ಬಂದಿದೆ. ಹಲವು ಬಾಟಿಲ್ ಗಳನ್ನು ಪೂರೈಸಬೇಕಾಗುತ್ತದೆ ಎಂದು ಹೇಳಿದ್ದಾರೆ.[ಹಣ ವಿನಿಮಯ ಮಾಡಿಕೊಳ್ಳುವವರ ಬೆರಳಿಗೆ ಶಾಹಿ]

ಗರಿಷ್ಠ ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಸರ್ಕಾರ ಆದೇಶಿಸಿದ ನಂತರ ಕಾಳಧನಿಕರು ಅಕ್ರಮವಾಗಿ ಕೂಡಿಟ್ಟುಕೊಂಡಿರುವ ಹಣವನ್ನು ಸಕ್ರಮ ಮಾಡಿಕೊಳ್ಳಲು ತಮ್ಮ ಬೆಂಬಲಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕ್ ಗಳಿಗೆ ಕಳುಹಿಸುತ್ತಿದ್ದಾರೆ.[ಮಂಕುಬೂದಿ ಎರಚಲು ಸಾಧ್ಯವಿಲ್ಲದ ಇಂಕು!]

ಇದರಿಂದ ಜನಸಾಮಾನ್ಯರು ದಿನನಿತ್ಯದ ಖರ್ಚಿನ ಹಣಕ್ಕಾಗಿ ಹೆಚ್ಚು ಹೊತ್ತು ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಪದೇ ಪದೇ ಹಣ ವಿನಿಮಯ ಮಾಡಿಕೊಳ್ಳಲು ಬರುವವರನ್ನು ಗುರುತಿಸಲು ಶಾಹಿ ಹಾಕುವ ಪದ್ಧತಿ ಜಾರಿಗೆ ತರುತ್ತಿದ್ದಾರೆ.

ಕರ್ನಾಟಕ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಸೂರು ಪೈಂಟ್ಸ್ ಅಂಡ್ ವಾರ್ನಿಷ್ ನಿಯಮಿತ ಸಂಸ್ಥೆಯು ಉತ್ತಮ ಗುಣಮಟ್ಟದ ಅಳಿಸಲಾಗದಂತಹ ಶಾಹಿಯನ್ನು ಪೂರೈಸುತ್ತಿದೆ.

ಕೇವಲ ಭಾರತವಷ್ಟೇ ಅಲ್ಲದೇ ಇತರ ದೇಶಗಳಿಗೂ ಈ ಸಂಸ್ಥೆ ಶಾಹಿಯನ್ನು ರಫ್ತು ಮಾಡುತ್ತಿದೆ. ಈ ಸಂಸ್ಥೆಯು 1962ರಲ್ಲಿ ಸ್ಥಾಪನೆಯಾಗಿದೆ.

English summary
The Mysore Paints and Varnish Limited, which has been providing indelible ink to the Election Commission since 1962, has a new task at hand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X