ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರದಿಂದ ಕೆರೆಗಳ ಅಕ್ರಮ ಡಿನೋಟಿಫಿಕೇಶನ್: ವಿಶ್ವನಾಥ್ ಆರೋಪ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು,ಜುಲೈ 22 : ರಾಜ್ಯ ಸರಕಾರವು ಅಕ್ರಮವಾಗಿ ಕೆರೆಗಳ ಡಿನೋಟಿಫಿಕೇಷನ್ ಗೊಳಿಸಿ ಅದನ್ನು ರಿಯಲ್ ಎಸ್ಟೇಟ್ ನವರಿಗೆ ಮಾರುವ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಗೆ ಹಣ ಸಂಗ್ರಹಣೆ ಮಾಡಲು ಮುಂದಾಗಿದೆ ಎಂದು ಮಾಜಿ ಸಂಸದ, ಜೆಡಿಎಸ್ ಮುಖಂಡ ವಿಶ್ವನಾಥ್ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಅವರು, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಕೆರೆಗಳ ಮಾರುವ ಬಗ್ಗೆ ಹೇಳಿದ್ದೀರಾ? ಕೆರೆಗಳನ್ನು ಡಿನೋಟಿಫೈ ಮಾಡಿ ಮಾರಾಟ ಮಾಡಲು ಮುಂದಾಗಿರುವ ಸರ್ಕಾರ ಈ ವಿಚಾರವನ್ನ ಮರೆ ಮಾಚಲು ಪ್ರತ್ಯೇಕ ಧ್ವಜದ ವಿಷಯ ತೇಲಿ ಬಿಟ್ಟಿದ್ದಾರೆ ಎಂದು ಕಿಡಿ ಕಾರಿದರು.

ಸರ್ಕಾರ, ಕೆರೆಗಳನ್ನು ಮಾರುತ್ತಿದ್ದರು ಪರಿಸರವಾದಿಗಳು ಎಲ್ಲಿ ಹೋಗಿದ್ದಾರೆ ? ಇವರೇನು ಪರಿಸರ ವಾದಿಗಳೋ ವ್ಯಾದಿಗಳೋ, ಹೊರಬನ್ನಿ ಸರ್ಕಾರದ ವಿರುದ್ಧ ಹೋರಾಟ ನಡೆಸಿ ಎಂದು ಹೋರಾಟಕ್ಕೆ ಕರೆ ನೀಡಿ. ಕೆರೆಗಳ ಡಿನೋಟಿಫೈ ಕೈಬಿಡದಿದ್ದಲ್ಲಿ ಇದು ಮತ್ತೊಂದು ಅರ್ಕಾವತಿ ಪ್ರಕರಣವಾಗಲಿದ್ದು. ಸರ್ಕಾರ ತಕ್ಷಣವೇ ಕೆರೆಗಳ ಡಿನೋಟಿಫಿಕೇಷನನ್ನು ಸ್ಥಗಿತಗೊಳಿಸಬೇಕು ಇಲ್ಲವಾದಲ್ಲಿ ಜೆಡಿಎಸ್ ನಿಂದ ಪ್ರಬಲ ಹೋರಾಟ ನಡೆಸಲಾಗುವುದು. ಸರ್ಕಾರ ಒಂದೆಡೆ ಕೆರೆ ತುಂಬಿಸಲು 150 ಕೋಟಿ ಹಣ ಬಿಡುಗಡೆ ಮಾಡಿ ಇನ್ನೊಂದೆಡೆ ಕೆರೆ ಡಿನೋಟಿಫಿಕೇಷನ್ ಮುಂದಾಗಿರುವುದು ಬಹುದೊಡ್ಡ ಆಘಾತಕಾರಿ ಎಂದರು.

ಸಿದ್ದರಾಮಯ್ಯ ವಿರುದ್ಧ ನಾನೇ ಸಮರ್ಥ ಅಭ್ಯರ್ಥಿ: ಜಿ ಟಿ ದೇವೇಗೌಡಸಿದ್ದರಾಮಯ್ಯ ವಿರುದ್ಧ ನಾನೇ ಸಮರ್ಥ ಅಭ್ಯರ್ಥಿ: ಜಿ ಟಿ ದೇವೇಗೌಡ

ಸಿಎಂ ಸಿದ್ದರಾಮಯ್ಯ ವಚನ ಭ್ರಷ್ಠರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ ಹೆಚ್. ವಿಶ್ವನಾಥ್, ಕೆರೆ ಮಾರುವ ಸರ್ಕಾರದ ನಿರ್ಧಾರ ಸುಪ್ರೀಂಕೋರ್ಟ್ ಆದೇಶಕ್ಕೆ ವಿರುದ್ದವಾದದ್ದು. ಕೆರೆಗಳ ಡಿನೋಟಿಫೈ ಮಾಡುವ ನಿರ್ಧಾರವನ್ನ ಸಾರ್ವಜನಿಕ ಹಿತಾಶಕ್ತಿಯಿಂದ ಕೈಬಿಡಬೇಕು. ಇಲ್ಲದಿದ್ದರೇ ಸರ್ಕಾರದ ವಿರುದ್ದ ಜೆಡಿಎಸ್ ಕಾನೂನು ಹೋರಾಟ ಮಾಡುತ್ತದೆ ಎಂದು ಹೆಚ್. ವಿಶ್ವನಾಥ್ ಎಚ್ಚರಿಕೆ ನೀಡಿದರು.

ಸಿದ್ದರಾಮಯ್ಯರಿಂದ ಕೆರೆಗಳ ಡಿನೋಫಿಕೇಶನ್

ಸಿದ್ದರಾಮಯ್ಯರಿಂದ ಕೆರೆಗಳ ಡಿನೋಫಿಕೇಶನ್

ರಾಜ್ಯದಲ್ಲಿ ಕುಡಿಯುವ ನೀರಿಲ್ಲದೆ ಜನ ಸಂಕಷ್ಟದಲ್ಲಿದ್ದಾರೆ ಹೀಗಿರುವಾಗ ಕೆರೆ ಡಿನೋಟಿಫೈ ಮಾಡಿ ರಿಯಲ್ ಎಸ್ಟೇಟ್ ಅವರಿಗೆ ಮಾರಲು ಮುಂದಾಗಿದ್ದಾರೆ ರಾಜಮಹಾರಾಜರು ಕೆರೆಗಳನ್ನು ನಿರ್ಮಿಸಿದರೆ ಪ್ರಜಾಪ್ರಭುತ್ವದ ಮಹಾರಾಜ ಸಿದ್ದರಾಮಯ್ಯ ಕೆರೆಗಳನ್ನು ಮಾರುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯನವರ ಕಾರ್ಯವೈಖರಿಯ ವಿರುದ್ಧ ಟೀಕಾಪ್ರಹಾರ ನಡೆಸಿದರು.
ರಾಜಕಾಲುವೆ ತೆರವು ನೆಪದಲ್ಲಿ ಶ್ರೀಸಾಮಾನ್ಯರ ಮನೆಗಳನ್ನು ನೆಲ ಸಮ ಮಾಡಿದಿ ಸರ್ಕಾರ, ಆದರೆ ಚಿತ್ರನಟ ದರ್ಶನ ಮತ್ತು ಶಾಮನೂರು ಶಿವಶಂಕರಪ್ಪನವರ ಆಸ್ಪತ್ರೆಗಳಿಗೆ ರಕ್ಷಣೆ ನೀಡಿದ್ದು ಎಷ್ಟರ ಮಟ್ಟಿಗೆ ಸರಿಯೆಂದು ಪ್ರಶ್ನಿಸಿದರು.

ವಿವಾದಗಳನ್ನು ಹುಟ್ಟು ಹಾಕುತ್ತಿರುವ ಸರ್ಕಾರ

ವಿವಾದಗಳನ್ನು ಹುಟ್ಟು ಹಾಕುತ್ತಿರುವ ಸರ್ಕಾರ

ಕೆರೆಗಳ ಡಿನೋಟಿಫಿಕೇಷನ್ ಅನ್ನು ಸಾರ್ವಜನಿಕರಿಂದ ವಿಷಯಾಂತರಿಸುವ ಹಿನ್ನೆಲೆಯಲ್ಲಿ ಸರ್ಕಾರ ಹೊಸ ಹೊಸ ವಿವಾದಗಳಿಗೆ ಜೀವ ತುಂಬುತ್ತಿದೆ. ಪ್ರತ್ಯೇಕ ಕನ್ನಡ ಧ್ವಜ ಮತ್ತು ವೀರಶೈವ ಲಿಂಗಾಯತ ಧರ್ಮ ರಚನೆ ಅನಗತ್ಯ ವಿವಾದವನ್ನು ಹುಟ್ಟುಹಾಕುವ ಮೂಲಕ ಜನತೆಯ ಗಮನವನ್ನು ಬೇರೆಡೆ ಸೆಳೆಯಲು ನಿರತವಾಗಿರುವುದು ದುರಾದೃಷ್ಟಕರವೆಂದು ವಿಷಾಧಿಸಿದರು.

ಸಾಹಿತಿಗಳಿಗೆ ಅವಮಾನ

ಸಾಹಿತಿಗಳಿಗೆ ಅವಮಾನ

ನಾಡಿನ ಹಿರಿಯ ಕವಿ ಚನ್ನವೀರ ಕಣವಿ ಅವರು ಮನವಿ ನೀಡಲು ಬಂದಾಗ ಕುಳಿತುಕೊಂಡೆ ಮನವಿ ಸ್ವೀಕರಿಸಿ ಸಾಹಿತಿಗಳಿಗೆ ಅವಮಾನ ಮಾಡಿರುವ ಸಿದ್ದರಾಮಯ್ಯ ಕನ್ನಡ ಧ್ವಜದ ಬಗ್ಗೆ ಮಾತನಾಡುತ್ತಾರೆ. ಏಕವಚನ ಬಹುವಚನದ ಬಗ್ಗೆ ಗೊತ್ತಿಲ್ಲದ ಸಿದ್ದರಾಮಯ್ಯ ವ್ಯಾಕರಣದ ಸಂದಿ ಪಾಠ ಮಾಡುತ್ತಾರೆ ಭ್ರಷ್ಟಾಚಾರ ರಹಿತ ಸರ್ಕಾರ ನೀಡುವುದಾಗಿ ಕಾಲ್ನಡಿಗೆ ಯಾತ್ರೆ ನಡೆಸಿದ ಸಿಎಂ ಕೆರೆಗಳ ಡಿನೋಟಿಫೈ ಮಾಡುವುದು ಯಾವ ನ್ಯಾಯ ಎಂದು ಮಾರ್ಮಿಕವಾಗಿ ನುಡಿದರು.

ತಹಸೀಲ್ದಾರ್ ಪ್ರಕರಣದ ಉನ್ನತ ತನಿಖೆಗೆ ಒತ್ತಾಯ

ತಹಸೀಲ್ದಾರ್ ಪ್ರಕರಣದ ಉನ್ನತ ತನಿಖೆಗೆ ಒತ್ತಾಯ

ಟಿ.ನರಸೀಪುರ ತಹಶೀಲ್ದಾರ್ ಆತ್ಮಹತ್ಯೆ ಪ್ರಕರಣದ ಮರಣೋತ್ತರ ಪರೀಕ್ಷಾ ವರದಿಯನ್ನು ತಕ್ಷಣವೇ ಬಿಡುಗಡೆಗೊಳಿಸಬೇಕೆಂದು ಎಸ್ಪಿ ರವಿ ಡಿ. ಚನ್ನಣ್ಣನವರಿಗೆ ಮಾಜಿ ಸಂಸದ ವಿಶ್ವನಾಥ್ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ತಹಶೀಲ್ದಾರ ಅವರ ಡೆತ್ ನೋಟ್ ನಲ್ಲಿ ಯಾರ ಯಾರ ಹೆಸರಿದೆ ಎಂಬುದು ಬಹಿರಂಗವಾಗಬೇಕು ಎಂದು ಒತ್ತಾಯಿಸಿದರಲ್ಲದೇ, ದಕ್ಷ ಅಧಿಕಾರೆಯೆಂದೇ ಹೆಸರಾಗಿರುವ ಪೊಲೀಸ್ ವರಿಷ್ಠಾಧಿಕಾರಿ ರವಿ ಚನ್ನಣ್ಣನವರು ಯಾರ ಒತ್ತಡಕ್ಕೆ ಮಣಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿ, ತಹಶೀಲ್ದಾರರ ಮರಣೋತ್ತರ ವರದಿಯನ್ನು ತಕ್ಷಣವೇ ಬಹಿರಂಗಗೊಳಿಸಿ. ಇಲ್ಲವಾದಲ್ಲಿ ಸಾರ್ವಜನಿಕ ಹೋರಾಟಗಳಿಗೆ ಎಡೆಯಾಗುವುದು ಎಂದು ಎಚ್ಚರಿಸಿದರು. ರಾಜ್ಯದಲ್ಲಿ ವ್ಯಾಪಕವಾಗಿರುವ ಮರಳು ಮಾಫಿಯ ದಂಧೆಯನ್ನು ತಡೆಯಲು ಹೊರಟವರ ಜೀವ ಬಲಿದಾನವಾಗುತ್ತಿದ್ದು ಈ ನಿಟ್ಟಿನಲ್ಲಿ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

English summary
Karnataka state government is illegaly denotifying many lakes, former MP H Vishwanath, who joined JDS recently told in a pressmeet in Mysuru today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X