ಇನ್ನು ಕರ್ನಾಟಕದ ಆನೆಗಳಿಗೂ ಆಧಾರ್ ಸಂಖ್ಯೆ

Subscribe to Oneindia Kannada

ಮೈಸೂರು, ಆಗಸ್ಟ್ 29: ಕರ್ನಾಟಕದ ಆನೆಗಳಿಗೂ ಶೀಘ್ರದಲ್ಲೇ ಆಧಾರ್ ಸಂಖ್ಯೆ ಸಿಗಲಿದೆ. ಕರ್ನಾಟಕ ಅರಣ್ಯ ಇಲಾಖೆ ಸುಪರ್ದಿಯಲ್ಲಿರುವ ಆನೆಗಳು, ಖಾಸಗಿ ಸಂಸ್ಥೆ-ವ್ಯಕ್ತಿಗಳ ಬಳಿ ಇರುವ ಆನೆಗಳಿಗೆ ಮೈಕ್ರೋ ಚಿಪ್ ಅಳವಡಿಸಲಾಗುವುದು. ಅದರಲ್ಲಿ ಯೂನಿಕ್ ಐಡೆಂಟಿಫಿಕೇಷನ್ ಸಂಖ್ಯೆ ಇರುತ್ತದೆ.

ದಸರಾದಲ್ಲಿ ಭಾಗವಹಿಸುವ ಆನೆಯೂ ಸೇರಿದಂತೆ ಸುಮಾರು ಅರವತ್ತು ಆನೆಗಳಿಗೆ ಮೈಕ್ರೋಚಿಪ್ ಅಳವಡಿಸಲಾಗುತ್ತದೆ. ಆ ಸಂಖ್ಯೆಗಳ ಮೂಲಕ ಅವುಗಳನ್ನು ಗುರುತಿಸಲಾಗುತ್ತದೆ. ಆನೆಗಳ ಮೇಲೆ ಕಣ್ಗಾವಲು ಇಡುವ ಉದ್ದೇಶದಿಂದ ಅರಣ್ಯ ಇಲಾಖೆ ಈ ನಿರ್ಧಾರಕ್ಕೆ ಬಂದಿದೆ. ಖಾಸಗಿ ಮಾಲೀಕರೇನಾದರೂ ತಪ್ಪು ಮಾಹಿತಿ ನೀಡಿದ್ದರೆ, ಅವುಗಳನ್ನು ಗುರುತಿಸುವುದಕ್ಕೆ, ವಿಚಾರಣೆ ಸಂದರ್ಭದಲ್ಲಿ ಮಾಹಿತಿ ಕಲೆ ಹಾಕುವುದಕ್ಕೆ ಇದರಿಂದ ಅನುಕೂಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.[ಮೈಸೂರಿನ ದೇವರಾಜ ಮಾರುಕಟ್ಟೆ ಕುಸಿತ]

Karnataka elephants will get unique ID number

ಖಾಸಗಿ ದೇವಸ್ಥಾನಗಳು ಹಾಗೂ ಮಠಗಳ ಅಧೀನದಲ್ಲಿರುವ ಆನೆಗಳಿಗೂ ಮೈಕ್ರೋಚಿಪ್ ಅಳವಡಿಸಲಾಗುವುದು. ಪರಿಶೀಲನೆ ಸಂದರ್ಭದಲ್ಲಿ ಇದರಿಂದ ಅನುಕೂಲವಾಗುತ್ತದೆ. ಜತೆಗೆ ಹಿಂಡುಗಳಲ್ಲಿ ಸಾಗುವಾಗ ಗುರುತಿಸುವುದು ಸಲೀಸಾಗುತ್ತದೆ. ಸುಪ್ರೀಂ ಕೋರ್ಟ್ ಈ ಬಗ್ಗೆ ನಿರ್ದೇಶನ ನೀಡಿದ ಒಂದು ವರ್ಷದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ. ನಾಗರಹೊಳೆ, ಬಂಡೀಪುರ, ಬಿಳಿಗಿರಿ ರಂಗನ ಬೆಟ್ಟದಲ್ಲಿ ಮೈಕ್ರೋಚಿಪ್ ಅಳವಡಿಸಲಾಗಿದೆ.[ಮೈಸೂರು ವಿಶ್ವವಿದ್ಯಾಲಯದ ವೆಬ್ ಸೈಟ್ ಹ್ಯಾಕ್]

ಕಳೆದ ವರ್ಷವೇ ಈ ಕೆಲಸ ಶುರುವಾಗಿದೆ. ಇನ್ನೇನು ಎಲ್ಲ ಆನೆಗಳಿಗೂ ಮೈಕ್ರೋಚಿಪ್ ಅಳವಡಿಸುವ ಕಾರ್ಯ ಮುಗಿಯುತ್ತದೆ.

English summary
Elephants will soon be given unique identification numbers. Elephants that are in possession of the Karnataka Forest Department, private organisations and individuals will be implanted with a microchip, which are equipped with unique numbers.
Please Wait while comments are loading...