ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇಹದ ಸ್ವಾಧೀನ ಇಲ್ಲದ ರಘುರಾಮ್ ಸ್ಕೈ ಡೈವಿಂಗ್ ದಾಖಲೆ!

ಮೈಸೂರಿನ ರಘುರಾಮ್ ಭಟ್ ಅವರ ಪರಿಚಯ ಹೇಗೆ ಮಾಡಿಸುವುದು? ಅಂಗವೈಕಲ್ಯವನ್ನು ನೆನಪಿನಿಂದಲೇ ಕಿತ್ತುಹಾಕಿ, ಸ್ಕೈ ಡೈವಿಂಗ್ ಮಾಡುತ್ತಾ ದಾಖಲೆ ನಿರ್ಮಿಸಿರುವ ಸಾಧಕ ಅಂತಲೋ ಅಥವಾ ಭುಜದಿಂದ ಕೆಳಭಾಗ ಸ್ವಾಧೀನ ಇಲ್ಲದ ಕರುಣೆ ಹುಟ್ಟಿಸುವ ವ್ಯಕ್ತಿ ಅಂತಲೋ

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಮಾರ್ಚ್ 9: ನೀವು ಸ್ಕೈ ಡೈವಿಂಗ್ ನೋಡಿದ್ದೀರಾ? ಸಾವಿರಾರು ಅಡಿ ಎತ್ತರದಿಂದ ನೆಲಕ್ಕೆ ಜಿಗಿಯುವ ಸಾಹಸ ಕ್ರೀಡೆ ಅದು. ಸುರಕ್ಷಾ ಕ್ರಮಗಳನ್ನು ಅನುಸರಿಸಲಾಗುತ್ತದೆ, ಅದು ಬೇರೆ ಮಾತು. ಆದರೆ ಅಷ್ಟು ಎತ್ತರದಿಂದ ಜಿಗಿಯುವುದೇ ಎಂದು ನೆನಪಿಸಿಕೊಂಡರೆ ಸಾಕು, ಜೀವ ಝಲ್ ಎನ್ನುವಂತೆ ಮಾಡುತ್ತದೆ. ಅದರೆ ಮೈಸೂರಿನ ಈ ವ್ಯಕ್ತಿಗೆ ಸ್ಕೈಡೈವಿಂಗ್ ಅಂದರೆ ಮೋಜು, ಖುಷಿ ಹಾಗೂ ಸಂಭ್ರಮ.

ಇವರ ಹೆಸರು ರಘುರಾಮ್ ಭಟ್. ಇವರಿಗೆ ಭುಜದ ಕೆಳಭಾಗ ಚಲನೆಯಲ್ಲಿಲ್ಲ. ಆದರೆ ತುಂಬ ಆತ್ಮವಿಶ್ವಾಸದಿಂದ ಸ್ಕೈ ಡೈವಿಂಗ್ ಮಾಡುತ್ತಾರೆ. ಬಾಲ್ಯದಲ್ಲಿ ಎಲ್ಲರ ಹಾಗೆಯೇ ಆರೋಗ್ಯವಾಗಿ ಇದ್ದವರು ರಘುರಾಮ್ ಭಟ್. 19ನೇ ವಯಸ್ಸಿನಲ್ಲಿ ಸಂಭವಿಸಿದ ಘಟನೆಯೊಂದರಲ್ಲಿ ದೇಹದ ಸ್ವಾಧೀನ ಕಳೆದುಕೊಂಡರು.[100 ಕೆಜಿ ಕಳೆದುಕೊಂಡ ಆಕೆಯೀಗ ಜಗತ್ತಿನ ತೂಕದ ಮಹಿಳೆಯಲ್ಲ!]

Inspiring story of Mysuru Raghuram Bhat

ಅವರೇ ಹೇಳಿಕೊಳ್ಳುವ ಹಾಗೆ ಇಂದಿನ ಸ್ಥಿತಿಯಲ್ಲಿ ಇರಲು ಪುಟ್ಟಪರ್ತಿ ಸಾಯಿಬಾಬಾರ ಕೃಪೆ ಕಾರಣವಂತೆ. ಈಚೆಗೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ 12 ಸಾವಿರ ಅಡಿಗಳಿಂದ ಸ್ಕೈ ಡೈವ್ ಮಾಡಿದ್ದನ್ನು ತುಂಬ ಖುಷಿ ಹಾಗೂ ಹೆಮ್ಮೆಯಿಂದ ಮಾಧ್ಯಮದವರಿಗೆ ವಿವರಿಸಿದ್ದರು ರಘುರಾಮ್.

ರಘರಾಮ್ ಭಟ್ ಸಾಧನೆಗೆ ಅವರ ತಂದೆ ಸುಬ್ಬಣ್ಣ ಭಟ್ ಹಾಗೂ ತಾಯಿ ಕಾವೇರಿ ಭಟ್ ಅವರದು ನಗುವೇ ಉತ್ತರ. ಮೈಸೂರಿನ ಅಪರೂಪದ ಸಾಧಕ ರಘುರಾಮ್ ಒನ್ಇಂಡಿಯಾ ಕನ್ನಡದ ಜತೆಗೆ ಮಾತನಾಡಿದ್ದಾರೆ. ಅದರ ವಿವರ ಇಲ್ಲಿದೆ.[ದಾವಣಗೆರೆಯಲ್ಲಿ ತಂದೆ, ತಾಯಿ, ಬಂಧು-ಬಳಗವಿಲ್ಲದ ನೇತ್ರಾಳ ಮದುವೆ]

Inspiring story of Mysuru Raghuram Bhat

ಪ್ರಶ್ನೆ: ನಿಮಗೆ ಅಂಗವೈಕ್ಯಲ್ಯ ಉಂಟಾಗಿದ್ದು ಯಾವಾಗ, ಹೇಗೆ?
ಉತ್ತರ: ನಾನು 19ನೇ ವರ್ಷದವರೆಗೆ ಸಾಮಾನ್ಯರಂತೆಯೇ ಇದ್ದೆ. ಒಂದು ದಿನ ಪುಟ್ಟಪರ್ತಿಯ ಚಿತ್ರವತಿ ನದಿಯಲ್ಲಿ ನೀರಿನ ಮಟ್ಟ ಅರಿಯದೆ ಜಿಗಿದ ಪರಿಣಾಮ ತಲೆ ಹಾಗೂ ಬೆನ್ನಿನ ಮೂಳೆಗೆ ತೀವ್ರ ಪೆಟ್ಟಾಯಿತು. ಎರಡೂ ಕಾಲು ಮತ್ತು ಕೈಗಳ ಸ್ವಾಧೀನ ಕಳೆದುಕೊಂಡೆ. ನಂತರ 3 ವರ್ಷಗಳ ಕಾಲ ಬೆಡ್ ರೆಸ್ಟ್ ನಲ್ಲಿದ್ದೆ. ನನ್ನ ವಿದ್ಯೆ ಎಲ್ಲವೂ ಹಳ್ಳ ಹಿಡಿಯಿತು. ಆದರೂ ಛಲ ಬಿಡದೆ ಬಿಎಸ್ಸಿ ಮುಗಿಸಿದೆ. ಸದ್ಯ ಪುಟ್ಟಪರ್ತಿಯಲ್ಲಿ ಆರ್ ಜೆ ಆಗಿ ಕೆಲಸ ಮಾಡುತ್ತಿದ್ದೇನೆ.

ಪ್ರಶ್ನೆ: ನಿಮಗೆ ಈ ಸ್ಕೈಡೈವಿಂಗ್ ಹಂಬಲ ಬಂದದ್ದು ಹೇಗೆ?
ಉತ್ತರ: ಅಮೀರ್ ಖಾನ್ ನಡೆಸಿಕೊಡುತ್ತಿದ್ದ ಸತ್ಯಮೇವ ಜಯತೇ ಕಾರ್ಯಕ್ರಮದಲ್ಲಿ ಅಂಗವಿಕಲರೊಬ್ಬರು ನೀಡಿದ ಪ್ರದರ್ಶನ ಹಾಗೂ ಅಮೀರ್ ಖಾನ್ ಹೇಳಿದ ಮಾತು ನನಗೆ ಸ್ಫೂರ್ತಿಯಾಯಿತು. ಅಲ್ಲದೇ ನನ್ನಂತಹ ಹಾಗೂ ನನಗಿಂತ ಹೆಚ್ಚಿನ ದೈಹಿಕ ಸಮಸ್ಯೆ ಇರುವವರು ಮಾಡುತ್ತಿರುವ ಸಾಧನೆ ಬಗ್ಗೆ ದಿನವೂ ಟಿವಿಯಲ್ಲಿ ನೋಡುವಾಗ ಬೇಸರ ಆಗುತ್ತಿತ್ತು. ಹೀಗೆ ಗೂಗಲ್ ನಲ್ಲಿ ಹುಡುಕುತ್ತಿದ್ದಾಗ ವಿದೇಶಗಳಲ್ಲಿ ಸಾಧನೆಗೈದವರನ್ನು ನೋಡಿದೆ. ನನಗೂ ಆಸೆಯಾಯ್ತು. ಅವರನ್ನು ಸಂಪರ್ಕಿಸಿದೆ. ಕೊನೆಗೆ ಗೆದ್ದೆ.[ಅಪರೂಪದ ಕಾಯಿಲೆ ಆತಂಕ, ಒಂದು ಬೆಳಗಿನ ಮನುಷ್ಯತ್ವದ ನಡಿಗೆ]

Inspiring story of Mysuru Raghuram Bhat

ಪ್ರಶ್ನೆ: ಸ್ಕೈಡೈವಿಂಗ್ ಅನುಭವದ ಬಗ್ಗೆ ಹೇಳಿ
ಉತ್ತರ: ಅದೊಂದು ರೋಮಾಂಚಕಾರಿ ಅನುಭವವೇ ಸರಿ. ಏನಾದರೂ ಸಾಧಿಸಬೇಕೆಂಬ ಛಲವಿರುವ ನನಗೆ ಆಕಾಶದಿಂದ ಜಿಗಿಯಬೇಕೆಂಬ ಆಸೆ ಇತ್ತು. ಅದರಂತೆ ಭಾರತದಲ್ಲಿ ಈ ತರಹದ ಸೌಲಭ್ಯ ಎಲ್ಲಿದೆ ಎಂದು ಆನ್‌ ಲೈನ್‌ ನಲ್ಲಿ ಹುಡುಕುವಾಗ ಮೈಸೂರಿನ ಮಂಡಕಹಳ್ಳಿ ವಿಮಾನ ನಿಲ್ದಾಣದಲ್ಲಿ ಇರುವ ಸ್ಕೈ ಡೈವ್‌ ಬಗ್ಗೆ ತಿಳಿದು, ಆನ್‌ಲೈನ್‌ನಲ್ಲಿ ವಿಚಾರಿಸಿ ಕೊನೆಗೆ ಮೈಸೂರಿಗೆ ಬಂದು ನನ್ನ ಆಸೆಯನ್ನ ಸ್ಕೈ ರೈಡರ್ಸ್ ಬಳಿ ವ್ಯಕ್ತಪಡಿಸಿದೆ. ಮೊದಲು ಅವರು ಸಹ ಸಾಧ್ಯವಿಲ್ಲ ಎಂದರು.

ಆದರೆ, ನಾನು ಛಲದಿಂದ ಮಾಡೇ ಮಾಡುತ್ತೇನೆ ಎಂದು ಹೇಳಿದಾಗ ಒಪ್ಪಿದರು. ಅದರಂತೆ ಯಾವುದೇ ತರಬೇತಿ ಇಲ್ಲದೆ ಮೊದಲ ಬಾರಿಗೆ ಸ್ಕೈ ಡೈವ್ ಮಾಡಿ 12,700 ಅಡಿ ಎತ್ತರದಿಂದ ಜಿಗಿದು ಲಿಮ್ಕಾ ದಾಖಲೆ ಬರೆದಿದ್ದೇನೆ. ದಾಖಲೆಗೆ ಸಂಬಂಧಿಸಿದಂತೆ ಎಲ್ಲ ದಾಖಲಾತಿಗಳನ್ನ ಲಿಮ್ಕಾ ಅವರಿಗೆ ಸಲ್ಲಿಸಿದ್ದೇನೆ.

English summary
Raghuram Bhat, handicap from Mysuru. But, now he is waiting for approval of Limca books of records. Do you want to kmow his record? That's Skydiving. To know more, read this article.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X