ಸಿದ್ದರಾಮಯ್ಯ ವಿರುದ್ಧ ನಾನೇ ಸಮರ್ಥ ಅಭ್ಯರ್ಥಿ: ಜಿ ಟಿ ದೇವೇಗೌಡ

Posted By:
Subscribe to Oneindia Kannada

ಮೈಸೂರು, ಜುಲೈ 20 : ಮೈಸೂರಿನ ಜೆಡಿಎಸ್ ನಲ್ಲಿ ಮತ್ತೆ ಭಿನ್ನಮತ ಸ್ಪೋಟಗೊಂಡಿದೆ. ಶಾಸಕ ಜಿಟಿಟ ದೇವೇಗೌಡ ಜೆಡಿಎಸ್ ಜಿಲ್ಲಾಧ್ಯಕ್ಷ ಹರೀಶ್ ಗೌಡ ಪರವಾಗಿ ಬ್ಯಾಟ್ ಬೀಸಿದ್ದಾರೆ.

ಮುಂದಿನ ಚುನಾವಣೆ ಬಹುಶಃ ನನ್ನ ಕೊನೆಯ ಚುನಾವಣೆ: ಸಿದ್ದರಾಮಯ್ಯ

ಇತ್ತೀಚೆಗೆ ಕೆಎಸ್ ಯುಓ ವಿಶ್ರಾಂತ ಕುಲಪತಿ ಪ್ರೊ.ರಂಗಪ್ಪ ಜೆಡಿಎಸ್ ಗೆ ಸೇರ್ಪಡೆಗೊಳ್ಳುವ ಸಂದರ್ಭದ ಕಾರ್ಯಕ್ರಮದಲ್ಲಿ ಹರೀಶ್ ಗೌಡ ಭಾಗವಹಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರೇಕೆ ಬಂದಿಲ್ಲ ಎನ್ನುವ ಕುರಿತಾಗಿ ಎಂಎಲ್ಸಿ ಕೆ.ಟಿ. ಶ್ರೀಕಂಠೇಗೌಡ ಮತ್ತು ಅಪ್ಪಾಜಿಗೌಡ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿರುವ ಜಿಟಿಡಿ, 'ಅವರೇಕೆ ಬಂದಿಲ್ಲ ಎನ್ನಲು ಇವರ್ಯಾರು?' ಎಂದು ಪ್ರಶ್ನಿಸುವ ಮೂಲಕ ಟಾಂಗ್ ನೀಡಿ ಪರೋಕ್ಷವಾಗಿ ಹರೀಶ್ ಗೌಡ ಪರವಾಗಿ ಬ್ಯಾಟ್ ಬೀಸಿದ್ದಾರೆ.

I will contest against cm Siddaramaiah in Chamundeshwari constituency: GT Deve Gowda

ನಾನೇ ಸಮರ್ಥ ವ್ಯಕ್ತಿ:
ಸಿಎಂ ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟಿ ಚುನಾವನೆಗೆ ನಿಲ್ಲುವುದಾಗಿ ಶಾಸಕ ಜಿಟಿ ದೇವೇಗೌಡ ಮುನ್ಸೂಚನೆ ನೀಡಿದ್ದಾರೆ, ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಿಎಂ ಅಲ್ಲಾ ಯಾರೇ ಬಂದರೂ ಅಂಜುವುದಿಲ್ಲ ಎಂದಿದ್ದಾರೆ. ಇನ್ನು ಜೆಡಿಎಸ್ ಪಾಲಿಗೆ ದೇವೇಗೌಡರು ಶ್ರೀ ಕೃಷ್ಣ ಇದ್ದಂತೆ, ಕುಮಾರಸ್ವಾಮಿ ಅರ್ಜುನ ಇದ್ದಂತೆ, ಶ್ರೀಕೃಷ್ಣ, ಅರ್ಜುನ ಇರಬೇಕಾದ್ರೆ ನನಗೇಕೆ ಭಯ? ಈ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಚಾಮುಂಡಿ ಕ್ಷೇತ್ರದಿಂದ ಸ್ಪರ್ಧಿಸಿದರೆ ಅವರ ವಿರುದ್ಧ ಗೆದ್ದು ಮುಂದಿನ ಸಂಪುಟದಲ್ಲಿ ಮಂತ್ರಿ ಆಗುವುದಾಗಿ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಸಿದ್ದರಾಮಯ್ಯ ವರುಣಾಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಟ್ಟು ಚಾಮುಂಡೇಶ್ವರಿ ಕ್ಷೇತ್ರದಿಂದ ನಿಲ್ಲುವುದಾಗಿ ಘೋಷಿಸಿದ್ದರು ಈ ಹಿನ್ನೆಲೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಜಿಟಿಡಿ ಈ ರೀತಿ ಉತ್ತರ ನೀಡಿದ್ದಾರೆ.

All set to run Namma Appaji canteens from JDS | Oneindia Kannada

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
If Karnataka Chief Minister Siddaramaiah contest from Chamundeshwari assembly constituency, i will definitely contest against him and will defeat him, JDS leader G T Deve Gowda told in Mysuru today.
Please Wait while comments are loading...