ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ವರದಕ್ಷಿಣೆ ಕಿರುಕುಳ: ಬೆಂಕಿಹಚ್ಚಿಕೊಂಡ ಮಹಿಳೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 17: ಪತಿಯ ವರದಕ್ಷಿಣೆ ಕಿರುಕುಳದಿಂದ ನೊಂದ ಪತ್ನಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆ.ಆರ್.ಪೇಟೆಯಲ್ಲಿ ನಡೆದಿದೆ.

ಮೃತಳನ್ನು ಮಾರ್ಬಳ್ಳಿಯ ಲತಾ(27) ಎಂದು ಗುರುತಿಸಲಾಗಿದೆ. ಲತಾ ಹಾಗೂ ಕೆ ಆರ್ ಪೇಟೆ ತಾಲೂಕಿನ ಶಂಕರ್ ಹತ್ತು ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ಇತ್ತೀಚೆಗೆ ಪತಿ ಶಂಕರ್ ಲತಾಳ ಶೀಲ ಶಂಕಿಸುತ್ತಿದ್ದನಲ್ಲದೇ, ಮಾಂಗಲ್ಯ ಸರ ತರುವಂತೆ ಪೀಡಿಸುತ್ತಿದ್ದ. ಇದರಿಂದ ಬೇಸತ್ತು ಲತಾ ಆತ್ಮಹತ್ಯೆಗೆ ಯತ್ನಿಸಿದ್ದಳು ಎನ್ನಲಾಗಿದೆ.[ವರದಕ್ಷಿಣೆ ಕಿರುಕುಳ: ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ]

Housewife latha allegedly committed suicide for dowry harassment in Mysuru.

ಮಾರ್ಬಳ್ಳಿ ದೇವರಾಜು ಹಾಗೂ ಶಿವಮ್ಮ ಪುತ್ರಿ ಲತಾಳನ್ನು ಕೆ ಆರ್ ಪೇಟೆ ತಾಲೂಕಿನ ಸಿದ್ದನಾಯ್ಕ ಹಾಗೂ ಜಯಮ್ಮ ಅವರ ಪುತ್ರ ಶಂಕರ್ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು ಗಂಡನ ಮನೆಯಲ್ಲಿ ಭಾನುವಾರ ರಾತ್ರಿ ಲತಾ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಸುಟ್ಟಗಾಯಗಳೊಂದಿಗೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ.

ಲತಾ ಸಹೋದರ 100ಗ್ರಾಂ ಚಿನ್ನ,ಎರಡು ಲಕ್ಷ ಹಣ ನೀಡಿದ್ದು, ಒಂದು ಮನೆ ಕೂಡ ಕಟ್ಟಿಸಿಕೊಟ್ಟಿದ್ದ, ಮೈಸೂರಿನ ಕೆ.ಆರ್.ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Housewife latha allegedly committed suicide by kerosene with fire for dowry harassment in Mysuru. Mysuru KR Peta police have registered a case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X