ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಣಸೂರಲ್ಲಿ ಮಳೆ ಅವಾಂತರ, ಕೊಚ್ಚಿ ಹೋದ ತಂಬಾಕು ಬೆಳೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್, 20: ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಮಳೆ ಆರ್ಭಟಿಸುತ್ತಿದ್ದು ತಂಬಾಕು ಗಿಡಗಳು ಕೊಚ್ಚಿ ಹೋಗಿವೆ. ಹುಣಸೂರಿನ ಕೊತ್ತೇಗಾಲ ಗ್ರಾ.ಪಂ.ನ ಯಮಗುಂಬ ಗ್ರಾಮದಲ್ಲಿ ವ್ಯಾಪ್ತಿಯಲ್ಲಿ ಸುರಿದ ಮಳೆಗೆ ತಂಬಾಕು ಬೆಳೆ ನಾಶವಾಗಿದ್ದರೆ, ಮನೆಯೊಂದರ ಗೋಡೆ ಕುಸಿದು ಬಿದ್ದಿದೆ.

ದಿಢೀರ್ ಸುರಿದ ಮಳೆಗೆ ಯಮಗುಂಬ ಗ್ರಾಮದ ನಿವಾಸಿ ಸಿದ್ದಪ್ಪ ಅವರ ಮನೆಗೆ ನೀರು ನುಗ್ಗಿದ್ದು, ಪರಿಣಾಮ ಮನೆಯ ಗೋಡೆ ಕುಸಿದು ಬಿದ್ದಿದೆ. ಇದರಿಂದ ಮನೆಯಲ್ಲಿದ್ದ ದಿನಸಿ ಪದಾರ್ಥಗಳು, ಪಾತ್ರೆಗಳು, ಬಟ್ಟೆ, ಗ್ಯಾಸ್ ಸ್ಟವ್ ಮತ್ತು ಸಿಲಿಂಡರ್ ಗೋಡೆಯಡಿಯಲ್ಲಿ ಸಿಲುಕಿದ್ದು ಸುಮಾರು 50ಸಾವಿರ ರು. ನಷ್ಟವಾಗಿದೆ. ಘಟನೆ ನಡೆಯುವಾಗ ಮನೆಯಲ್ಲಿ ಯಾರೂ ಇರದ ಕಾರಣ ಅವಘಡ ಸಂಭವಿಸಿಲ್ಲ.[ತಂಬಾಕು ನೆಟ್ಟು ಭರ್ಜರಿ ಬೆಳೆ ಕನಸು ಕಂಡಿದ್ದ ರೈತ]

rain

ಇನ್ನು ಈ ವ್ಯಾಪ್ತಿಯಲ್ಲಿ ಮಳೆ ನೀರು ನುಗ್ಗಿದ್ದರಿಂದ ತಗ್ಗು ಪ್ರದೇಶದಲ್ಲಿ ನೆಟ್ಟಿದ್ದ ತಂಬಾಕು ಗಿಡಗಳು ಕೊಚ್ಚಿ ಹೋಗಿವೆ. ಜತೆಗೆ ಮುಳುಗಡೆಗೊಂಡಿದ್ದರಿಂದ ಲಕ್ಷಾಂತರ ರೂ. ನಷ್ಟವಾಗಿದೆ.[ಹುಬ್ಬಳ್ಳಿಯಲ್ಲಿ ಜಿಟಿಜಿಟಿ ಮಳೆಗೆ ನಲಿದಾಡಿದ ಮಿರ್ಚಿ ಮಂಡಕ್ಕಿ]

rain

ಬೇಸಿಗೆಯಲ್ಲಿ ಈ ಬಾರಿ ಮಳೆಯಿಲ್ಲದ ಕಾರಣ ಬೆಳೆ ಬೆಳೆಯಲಾಗಲಿಲ್ಲ. ಇದೀಗ ಮಳೆ ಬಿದ್ದಿದ್ದರಿಂದ ಉತ್ಸಾಹದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಭಾರೀ ಮಳೆ ಕೃಷಿ ಕೆಲಸಕ್ಕೆ ಅಡ್ಡಿ ಉಂಟುಮಾಡುತ್ತಿದ್ದು ರೈತರು ಕಂಗಾಲಾಗಿದ್ದಾರೆ.

English summary
Weather Report: Heavy rainfall occurred at most places of Mysuru District and HD Kote Taluk Hunsur. Rain effects agriculture and it lashes Tobacco crop.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X