ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಮಹಾನಗರ ಪಾಲಿಕೆ ಚುಕ್ಕಾಣಿ ಯಾವ ಪಕ್ಷಕ್ಕೆ?

ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಲಿದ್ದು. ಶತಾಯಗತಾಯವಾಗಿ ಮಹಾ ನಗರ ಪಾಲಿಕೆ ಅಧಿಕಾರ ಗುದ್ದುಗೆ ಏರಲು ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

By ಯಶಸ್ವಿನಿ ಎಂ.ಕೆ, ಮೈಸೂರು
|
Google Oneindia Kannada News

ಮೈಸೂರು, ಡಿಸೆಂಬರ್. 07 : ಸಿಎಂ ತವರು ಜಿಲ್ಲೆಯಲ್ಲಿ ತೀವ್ರ ಕುತೂಹಲ ಮೂಡಿಸಿರುವ ಮೈಸೂರು ನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಬುಧವಾರದಂದು(ಡಿ.7) ನಡೆಯಲಿದೆ.

ಕಾಂಗ್ರೆಸ್ ನ ಭದ್ರ ಕೋಟೆ ಎನಿಸಿರುವ ಮೈಸೂರು ಜಿಲ್ಲಾ ಪಂಚಾಯಿತಿಯನ್ನು ಕಳೆದುಕೊಂಡು ಮುಖಭಂಗ ಅನುಭವಿಸಿರುವ ಆಡಳಿತ ರೂಢ ಕಾಂಗ್ರೆಸ್ ಶತಾಯಗತಾಯವಾಗಿ ಪಾಲಿಕೆ ಚುಕ್ಕಾಣಿ ಹಿಡಿಯಲು ಎಲಿಲ್ಲದ ಪ್ರಯತ್ನ ನಡೆಸಿದೆ.

ಈಗಾಗಲೇ ಮೈಸೂರು ಜಿಪಂಯನ್ನು ತನ್ನ ತೆಕ್ಕೆಗೆ ಹಾಕಿಕೊಂಡು ಕೇಸರಿ ಮಯ ಮಾಡಲು ಹೊರಟಿರುವ ಬಿಜೆಪಿ ಜೆಡಿಎಸ್ ನೊಂದಿಗೆ ಅಧಿಕಾರ ಹಂಚಿಕೊಂಡು ಪಾಲಿಕೆಯಲ್ಲೂ ಕಾಂಗ್ರೆಸ್ ಗೆ ಸೆಡ್ಡು ಹೊಡೆಯಲು ಮುಂದಾಗಿದೆ.

head of the Mysuru municipal corporation Mayor and Deputy Mayor election

ಈಗಾಗಿ ಮೂರು ಪಕ್ಷಗಳು ಪಾಲಿಕೆ ಚುಕ್ಕಾಣಿ ಹಿಡಿಯಲು ತೀವ್ರ ಪೈಪೋಟಿ ನಡೆದಿವೆ. ಈಗಾಗಲೇ ಜೆಡಿಎಸ್ ನ ಎಲ್ಲ ಪಾಲಿಕೆ ಸದಸ್ಯರು ರೆಸಾರ್ಟ್ ನಲ್ಲಿ ಠಿಕಾಣಿ ಹೂಡಿದ್ದು ಮತ್ತಷ್ಟು ಕುತೂಹಲ ಮೂಡಿಸಿದೆ.

ಬಿಜೆಪಿ ಮತ್ತು ಜೆಡಿಎಸ್ ನಾಯಕರ ಸಭೆಯಲ್ಲಿ ಈ ಬಾರಿಯೂ ಹೊಂದಾಣಿಕೆ ಮುಂದುವರೆಸುವ ಕುರಿತು ಮಾತುಕತೆಗಳು ನಡೆದಿವೆ ಎನ್ನುವ ಗುಸು-ಗುಸು ಸುದ್ದಿಗಳು ಹರಿದಾಡುತ್ತಿವೆ.

ಇನ್ನು ಮೂಲಗಳ ಪ್ರಕಾರ ರಾಷ್ಟ್ರೀಯ ಪಕ್ಚಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಜೆಡಿಎಸ್ ನೊಂದಿಗೆ ಮೈತ್ರಿಯೊಂದಿಗೆ ಪಾಲಿಕೆಯ ಆಡಳಿತವನ್ನು ಹಂಚಿಕೊಳ್ಳಲು ಪೈಪೋಟಿ ನಡೆಸಿವೆ ಎನ್ನಲಾಗಿದೆ.

ಕೆಲ ವರ್ಷಗಳಿಂದ ಬಿಜೆಪಿಯು ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಹಂಚಿಕೊಂಡಿದ್ದು, ಈ ಬಾರಿಯೂ ಮೈತ್ರಿ ಮುಂದುವರಿಯುವ ನಿರೀಕ್ಷೆಗಳು ಇವೆ.

ಕಾಂಗ್ರೆಸ್ ಕೂಡ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳಲು ತೀವ್ರ ಯತ್ನ ನಡೆಸುತ್ತಿದೆ ಎನ್ನುವ ಮಾತುಗಳು ಕೇಳಿಬಂದಿವೆ. ನಗರ ಪಾಲಿಕೆಯಲ್ಲಿ 65 ಕೌನ್ಸಿಲ್ ಸದಸ್ಯರಿದ್ದು, ಕಾಂಗ್ರೆಸ್ ನ 20, ಜೆಡಿಎಸ್-19, ಬಿಜೆಪಿಯ-13, ಎಸ್ ಡಿಪಿಐ -2, ಕೆಜೆಪಿ-1 ಮತ್ತು 8 ಮಂದಿ ಸ್ವತಂತ್ರ ಅಭ್ಯರ್ಥಿಗಳಿದ್ದಾರೆ.

ಕೆಜೆಪಿ ಅಭ್ಯರ್ಥಿ ಬಿ.ಎಲ್. ಭೈರಪ್ಪ ಮತ್ತು ಸ್ವತಂತ್ರ ಕಾರ್ಪೊರೇಟರ್ ಅಶ್ವಿನಿ ಅನಂತು ಅವರು ಜೆಡಿಎಸ್ ಪಕ್ಷಕ್ಕೆ ಸೇರಿದ ಹಿನ್ನೆಲೆಯಲ್ಲಿ ಜೆಡಿಎಸ್ ಒಟ್ಟು ಸದಸ್ಯರ ಸಂಖ್ಯೆ 21 ಆಗಿದೆ. ಶಾಸಕರು, ಸಂಸದರು, ಎಮ್ ಎಲ್ ಸಿ ಅವರ ಓಟಿನ ಮೂಲಕ ಕಾಂಗ್ರೆಸ್ 27, ಜೆಡಿಎಸ್ 25 ಮತ್ತು ಬಿಜೆಪಿ 14 ಓಟುಗಳನ್ನು ಗಳಿಸುವ ಸಾಧ್ಯತೆಯಿದೆ.

ಜೆಡಿಎಸ್ ಬಿಜೆಪಿಯೊಂದಿಗೆ ಕೈ ಜೋಡಿಸಿದಲ್ಲಿ ಒಟ್ಟು 39 ಮತಗಳನ್ನು ಪಡೆಯಬಹುದು. ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡಲ್ಲಿ 52 ಮತಗಳನ್ನು ಪಡೆಯಲಿದೆ. ಮೇಯರ್ ಸ್ಥಾನವು ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿದ್ದು,

ಜೆಡಿಎಸ್ ನಿಂದ ಹಿರಿಯ ನಗರ ಪಾಲಿಕೆ ಸದಸ್ಯರಾದ ಕೆ.ಟಿ. ಚಲುವೇಗೌಡ, ಎಮ್.ಜೆ. ರವಿಕುಮಾರ್, ಕೆ.ವಿ. ಮಲ್ಲೇಶ್ ಅವರು ಮೇಯರ್ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ಇನ್ನು ಉಪ ಮೇಯರ್ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಸೀಮಾ ಪ್ರಸಾದ್ ಮತ್ತು ರತ್ನ ಅವರ ಹೆಸರುಗಳು ಕೇಳಿಬರುತ್ತಿವೆ.

English summary
The stage is set to electction a new Mayor and Deputy Mayor for Mysuru(Mysore) municipal corporation. Congress, BJP, JDS leaders lobbying for the post of Mayor and Deputy Mayo. Election will be held on December 07, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X