ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾಂಧಲೆ ಮಾಡಿದ್ದು ನಾವಲ್ಲ ವಿಶ್ವನಾಥ್ ಪುತ್ರ

|
Google Oneindia Kannada News

ಮೈಸೂರು, ಜು. 8 : ಹುಣಸೂರು ಪಟ್ಟಣದ ಹಳ್ಳಿಮನೆ ಹೋಟೆಲ್ ನಲ್ಲಿ ನಾನು ಮತ್ತು ನನ್ನ ಸ್ನೇಹಿತರು ದಾಂಧಲೆ ಮಾಡಿಲ್ಲ ಎಂದು ಪೂರ್ವಜ್ ವಿಶ್ವನಾಥ್ ಸ್ಪಷ್ಟಪಡಿಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನಾನು ಸೋಮವಾರ ರಾತ್ರಿ ಮೈಸೂರಿನಲ್ಲಿದ್ದೆ. ಯಾರು ದಾಂಧಲೆ ಮಾಡಿದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

ಹಳ್ಳಿಮನೆ ಹೋಟೆಲ್ ಮಾಲೀಕ ಸಂದೀಪ್ ನನಗೆ ಪರಿಚಯವಿದ್ದಾರೆ. ನಮ್ಮ ಬಳಿ ಹಣಕಾಸಿನ ನೆರವನ್ನು ಪಡೆದಿದ್ದಾರೆ. ಆದರೆ, ನಮ್ಮ ವಿರುದ್ಧ ಏಕೆ ಹುಣಸೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ತಿಳಿದುಬಂದಿಲ್ಲ. ನಾವು ಹೋಟೆಲ್ ಗೆ ಹೋಗಿ ಯಾವುದೇ ದಾಂಧಲೆ ಮಾಡಿಲ್ಲ. ಘಟನೆಯ ಬಗ್ಗೆ ಸಂಪೂರ್ಣ ವಿವಿರ ಪಡೆದು ನಂತರ ಪ್ರತಿಕ್ರಿಯೆ ನೀಡುವುದಾಗಿ ಅವರು ತಿಳಿಸಿದ್ದಾರೆ.

Purvaj Vishwanath

ಹಿಂದಿನ ಸುದ್ದಿ : ಮೈಸೂರು ಕ್ಷೇತ್ರದ ಮಾಜಿ ಸಂಸದ ಎಚ್.ವಿಶ್ವನಾಥ್ ಪುತ್ರ ಸ್ನೇಹಿತರೊಂದಿಗೆ ಸೇರಿ ಹೋಟೆಲ್ ನಲ್ಲಿ ದಾಂಧಲೆ ಮಾಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ಹುಣಸೂರು ಪಟ್ಟಣದ ಹಳ್ಳಿಮನೆ ಹೋಟೆಲ್ ನಲ್ಲಿ ಪಿಠೋಪಕರಣ ಧ್ವಂಸಗೊಳಿಸಿ ದಾಂಧಲೆ ಮಾಡಿದ್ದಾರೆ.

ಮಾಜಿ ಸಂಸದ ಎಚ್.ವಿಶ್ವನಾಥ್ ಪುತ್ರ ಪೂರ್ವಜ್ ವಿಶ್ವನಾಥ್ ಹುಣಸೂರಿನಲ್ಲಿರುವ ಹಳ್ಳಿಮನೆ ಹೋಟೆಲ್ ನಲ್ಲಿ ಸ್ನೇಹಿತರೊಂದಿಗೆ ಸೇರಿ ದಾಂಧಲೆ ಮಾಡಿದ್ದಾರೆ. ಹೋಟೆಲ್ ನವರು ಬಿರಿಯಾನಿ ನೀಡಲಿಲ್ಲ ಎಂದು ಪೂರ್ವಜ್ ಗಲಾಟೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಸೋಮವಾರ ರಾತ್ರಿ ಹಳ್ಳಿಮನೆ ಹೋಟೆಲ್ ಗೆ ಸ್ನೇಹಿತರೊಂದಿಗೆ ಪೂರ್ವಜ್ ಆಗಮಿಸಿದ್ದರು. ಕುಡಿದ ಮತ್ತಿನಲ್ಲಿದ್ದ ಅವರು, ಹೋಟೆಲ್ ಸಿಬ್ಬಂದಿ ಬಿರಿಯಾನಿ ನೀಡಲಿಲ್ಲ ಎಂದು ಹೋಟೆಲ್ ನಲ್ಲಿದ್ದ ಪಾಟ್ ಗಳನ್ನು ಒಡೆದುಹಾಕಿ ಧಾಂಧಲೆ ಮಾಡಿದ್ದಾರೆ, ಹಟ್ ಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಹೋಟೆಲ್ ಸಿಬ್ಬಂದಿ ಹೇಳಿದ್ದಾರೆ.

ಹೋಟೆಲ್ ಮಾಲೀಕ ಸಂದೀಪ್ ಈ ಕುರಿತು ಹುಣಸೂರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ಸೋಮವಾರ ರಾತ್ರಿ ವಿಶ್ವನಾಥ್ ಪುತ್ರ ಪೂರ್ವಜ್ 4-5 ಜನ ಸ್ನೇಹಿತರೊಂದಿಗೆ ಹೋಟೆಲ್ ಗೆ ಬಂದಿದ್ದರು. ಊಟ ಮತ್ತು ಮದ್ಯವನ್ನು ನೀಡುವಂತೆ ಕೇಳಿದರು. ಆದರೆ, ಹೋಟೆಲ್ ನಲ್ಲಿ ಮದ್ಯ ಲಭ್ಯವಿಲ್ಲ, ಊಟ ಕೊಡುತ್ತೇವೆ ಎಂದು ಹೇಳಿದೆವು. [ಚಿತ್ರ : ಪೂರ್ವಜ್ ಫೇಸ್ ಬುಕ್]

ಇದರಿಂದ ಕೋಪಗೊಂಡ ಅವರ ಸ್ನೇಹಿತರೊಂದಿಗೆ ಸೇರಿ ಹೋಟೆಲ್ ನಲ್ಲಿ ಧಾಂದಲೆ ಮಾಡಿದರು. ಪಿಠೋಪಕರಣ ದ್ವಂಸ ಮಾಡಿದರು. ಹಟ್ ಗಳಿಗೆ ಬೆಂಕಿ ಹಚ್ಚಿದರು. ಇದರಿಂದ ಹಟ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ ಎಂದು ಹೋಟೆಲ್ ಮಾಲೀಕರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

English summary
Mysore former MP H. Vishwanath son poorvaj vishwanath creates ruckus at Halli Mane hotel in Hunsur of Mysore district on Monday, July 7.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X