ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗರುಡಾ ಮಾಲ್ ಕೊಲೆ ನಕಲಿ ವಿಡಿಯೋ ಹಾಕಿ ಸಿಕ್ಕಿಬಿದ್ದರು

|
Google Oneindia Kannada News

ಮೈಸೂರು, ಜುಲೈ 06 : ಶ್ರೀಲಂಕಾದಲ್ಲಿ ನಡೆದ ಕೊಲೆಯ ವಿಡಿಯೋವನ್ನು ಬೆಂಗಳೂರಿನ ಗರುಡಾ ಮಾಲ್‌ನಲ್ಲಿ ನಡೆದ ಕೃತ್ಯ ಎಂದು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದ ವ್ಯಕ್ತಿಯನ್ನು ಬೆಂಗಳೂರಿನ ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

ಮೈಸೂರಿನ ದಿನೇಶ್ ಕುಲಕರ್ಣಿ ಎಂಬುವವರು ಈ ವಿಡಿಯೋವನ್ನು ಫೇಸ್‌ಬುಕ್‌ಗೆ ಹಾಕಿದ್ದರು. ಗರುಡಾ ಮಾಲ್‌ ನವರು ದಿನೇಶ್ ವಿರುದ್ಧ ಅಶೋಕ ನಗರ ಠಾಣೆಯಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ದೂರಿನ ಅನ್ವಯ ಪೊಲೀಸರು ದಿನೇಶ್ ಅವರನ್ನು ಬಂಧಿಸಿದ್ದಾರೆ. [ಪಾಲಿಕೆಗೆ ಫಜೀತಿ ತಂದ ವಾಟ್ಸಪ್ ಸಂದೇಶ!]

mall

ಏನಿದು ಘಟನೆ : ಶ್ರೀಲಂಕಾದಲ್ಲಿನ ಮಾಲ್‌ಗೆ ನುಗ್ಗಿದ ಯುವಕನೊಬ್ಬ ಯುವತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ವಿಡಿಯೋ ಯೂಟ್ಯೂಬ್‌ನಲ್ಲಿತ್ತು. ದಿನೇಶ್ ಕುಲಕರ್ಣಿ ಅವರು ಇದನ್ನು ಫೇಸ್‌ಬುಕ್‌ಗೆ ಹಾಕಿದ್ದರು. [ವಾಸುದೇವ ಭಟ್ಟರ ಸಾವಿಗೆ ವಾಟ್ಸಪ್ ವಿಡಿಯೋ ಕಾರಣ?]

Tweet By Deputy Commissioner Of Police - Central Division.Bengaluru City,Sri.Sandeep Patil, IPS@DCPCentralBCP ...

Posted by BENGALURU CITY POLICE onSunday, July 5, 2015

ಈ ಘಟನೆ ನಡೆದಿರುವುದು ಬೆಂಗಳೂರಿನ ಗರುಡಾ ಮಾಲ್‌ನಲ್ಲಿ ಎಂದು ಬರೆದಿದ್ದರು. ಹಲವಾರು ಜನರ ವಾಟ್ಸಪ್‌ನಲ್ಲಿಯೂ ಈ ವಿಡಿಯೋ ಹರಿದಾಡುತ್ತಿತ್ತು. ಈ ವಿಡಿಯೋ ನೋಡಿದ್ದ ಗರುಡಾ ಮಾಲ್‌ನವರು ಅಶೋಕ ನಗರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು.

ದೂರಿನ ಅನ್ವಯ ಪೊಲೀಸರು ದಿನೇಶ್ ಕುಲಕರ್ಣಿಯನ್ನು ಬಂಧಿಸಿದ್ದಾರೆ. ಸುಳ್ಳು ವಿಡಿಯೋಗಳನ್ನು ಹಾಕಿ ಜನರಲ್ಲಿ ಆತಂಕ ಸೃಷ್ಟಿಸುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

English summary
Bengaluru Ashok Nagar police arrested Mysuru based Dinesh Kulkarni who shared video alleging murder at Garuda mall Bengaluru, Actually murder happened in Sri Lanka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X