ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ಹುಣಸೂರು ರಸ್ತೆಗೆ ಗಣಪತಿ ಸಚ್ಚಿದಾನಂದ ಶ್ರೀ ಹೆಸರಿಡಿ

ಹುಣಸೂರು ರಸ್ತೆಯಲ್ಲಿ ನಿರ್ಮಾಣದ ಹಂತದಲ್ಲಿರುವ ಮೇಲ್ಸೆತುವೆಗೆ ಶ್ರೀ ಗಣಪತಿ ಸಚ್ಚಿದಾನಂದಸ್ವಾಮಿಗಳ ಹೆಸರನ್ನು ನಾಮಕರಣ ಮಾಡುವಂತೆ ಮೈಸೂರಿನಲ್ಲಿ ಅಂಚೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 26: ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿರವರ 75ನೇ ವರ್ಧಂತ್ಯೋತ್ಸವದ ಅಂಗವಾಗಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ವತಿಯಿಂದ ಚಾಮುಂಡಿಪುರಂನಲ್ಲಿರುವ ಉದ್ಯಾನವನದಲ್ಲಿ 75 ವಿವಿಧ ಜಾತಿಯ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಅಷ್ಟೇ ಅಲ್ಲದೇ ಹುಣಸೂರು ರಸ್ತೆಯಲ್ಲಿ ನಿರ್ಮಾಣದ ಹಂತದಲ್ಲಿರುವ ಮೇಲ್ಸೆತುವೆಗೆ ಶ್ರೀ ಗಣಪತಿ ಸಚ್ಚಿದಾನಂದಸ್ವಾಮಿಗಳ ಹೆಸರನ್ನು ನಾಮಕರಣ ಮಾಡುವಂತೆ ಮೈಸೂರಿನ ನಗರಪಾಲಿಕೆಯ ಅಂಚೆ ಪೆಟ್ಟಿಗೆಯ ಬಳಿ ಅಂಚೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.[ಮೈಸೂರಿನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವಿಸ್]

Ganapati Sachchidanand swamiji's name to bridge in Hunsur road

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಗಳ ಭಕ್ತರು, ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ವಿಶ್ವದೆಲ್ಲೆಡೆ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ -ಧಾರ್ಮಿಕ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರಮವೆಂದರೆ ಪ್ರಖ್ಯಾತ ವೆಂಕಟೇಶ್ವರ ದೇವಸ್ಥಾನ ಮತ್ತು ಕಾರ್ಯಸಿದ್ಧಿ ಆಂಜನೇಯಮೂರ್ತಿಯ ಧಾರ್ಮಿಕ ಕ್ಷೇತ್ರವಾಗಿದ್ದು, ಪ್ರವಾಸಿ ತಾಣವಾಗಿಯೂ ಆಕರ್ಷಿತವಾಗಿದೆ.

ಸಂಗೀತ, ಕಲೆ, ಸಾಹಿತ್ಯ, ನೃತ್ಯ ಪ್ರದರ್ಶನ ಕ್ಷೇತ್ರಗಳ ಮೂಲಕ ಲಕ್ಷಾಂತರ ಕಲಾವಿದರ ಪ್ರತಿಭೆಗೆ ಪ್ರೋತ್ಸಾಹ ನೀಡಿದ್ದಾರೆ ಎಂದರು.
ನೈಸರ್ಗಿಕ ಆಯುರ್ವೇದ ಚಿಕಿತ್ಸಾ ಕೇಂದ್ರ, ಪರಿಸರ ರಕ್ಷಣೆಗಾಗಿ ವಿಶ್ವದ ಅತಿ ಹೆಚ್ಚು ಬೋನ್ಸಾಯ್ ಸಸ್ಯ ಪ್ರದರ್ಶನ ಹಾಗೂ ಆಶ್ರಮದಲ್ಲಿ 468 ವಿವಿಧ ಜಾತಿಯ ಪಕ್ಷಿಗಳ ಶುಕವನವನ್ನು ಪ್ರತಿಯೊಬ್ಬರೂ ವೀಕ್ಷಿಸಬೇಕು ಎಂದು ಹೇಳಿದರು.

English summary
Some localites in Mysuru have suggested Shri Ganapati Sachchidanand swamiji's name to newly constructing bridge in Hunsur road, Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X